ಹುಬ್ಬಳ್ಳಿ: (ಜು.12):Chandrashekhar Guruji Murder:ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ (Chandrashekhar Guruji MUrder)ಗುರೂಜಿ ಹತ್ಯೆಯ ಆರೋಪಿಗಳನ್ನು ಇಂದು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಆರೋಪಿಗಳಾದ (mahantesh Shiror) ಮಹಾಂತೇಶ್ ಶಿರೂರ, ಮಂಜುನಾಥ್ ಮರೆವಾಡ ಅವರ ಪೊಲೀಸ್ ಕಸ್ಟಡಿ ಸೋಮವಾರ ಅಂತ್ಯಗೊಂಡಿದೆ.
ಗುರುಜಿಯ ಸಾವಿನ ಹಿನ್ನೆಲೆ ಬಹಳಷ್ಟು ಅನುಮಾನಗಳು (ಮೂಡಿರುವ ಹಿನ್ನೆಲೆ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಚಂದ್ರಶೇಖರ್ ಗುರೂಜಿಯವರ ಕೊನೆಗೆ ಬಳಸಿದ್ದ ಚಾಕುಗಳನ್ನು ಗುಜರಾತ್ ಹಾಗೂ ಮುಂಬೈನಲ್ಲೇ ಕೆಲವು ವರ್ಷಗಳ ಹಿಂದೆಯೇ ಖರೀದಿಸಿದ್ದರು ಎಂದು ಮಾಹಿತಿ ಲಭಿಸಿದೆ.
ಗುರುಜಿಯವರು (Chandrashekhar Guruji MUrder)ಮಹಾಂತೇಶ್ ಶಿರೂರ್ ನನ್ನು ಸಂಸ್ಥೆಯಿಂದ ಹೊರ ಹಾಕಿದ್ದರು ಈ ಅಸಮಾಧಾನ ಹಿನ್ನೆಲೆ ಸೇರಿದಂತೆ 15 ಜನ ಸೇರಿಕೊಂಡು ಗುಂಪು ಕೂಡ ರಚನೆ ಮಾಡಿದ್ರು. ಈ ಗುಂಪಿಗೆ ಲೀಡರ್ ಮಹಂತೇಶ್ ! ಗ್ರೂಪ್ನಲ್ಲಿ ಇರುವ ಕೆಲವರ ಹೆಸರಿನಲ್ಲಿಯೂ ಕೂಡ (Chandrashekhar Guruji MUrder)ಗುರೂಜಿ ಆಸ್ತಿ ನೋಂದಾಣೆ ಮಾಡಿದ್ದರು ಆದರೆ ವಾಪಸ್ ಆಸ್ತಿಯನ್ನು (Property Issue) ಪಡೆದು ಕೆಲಸದಿಂದ ಬಿಡಿಸಿದ್ದರು ಎನ್ನಲಾಗಿದೆ ಆದ ಕಾರಣ ಗ್ರೂಪ್ ನಲ್ಲಿ ಹಲವು ಬಾರಿ ಗುರೂಜಿ ವಿರುದ್ಧ ಆಕ್ರೋಶ ಅವರ ಹಾಕಿದ್ದರು.
ಗುರೂಜಿ ಹತ್ಯೆಗೆ ಸ್ಕೆಚ್ :
ಗುರುಜಿಯವರನ್ನು ಹತ್ಯೆ ಮಾಡಲು ಮೊದಲೇ ಮಹಾಂತೇಶ್ ಮುನ್ಸೂಚನೆಯನ್ನು ನೀಡಿದ ಗುರೂಜಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಎನ್ನಲಾಗಿದೆ. ಅತ್ತಿಗೂ ಮುನ್ನ ಗುರೂಜಿ ಜೊತೆ ಜಗಳ ಕೂಡ ಮಾಡಿದ್ದ ಹೀಗಿದ್ದರೂ ಗುರೂಜಿಯವರು ಭದ್ರತೆಯನ್ನು ಪಡೆಯದೆ ಒಬ್ಬೊಬ್ಬರೇ ಓಡಾಡುತ್ತಿದ್ದರು. ಇದರಿಂದ ಹತ್ಯೆಗೆ ಬಹಳ ಸಹಕಾರಿಯಾಗಿತ್ತು.ಗುರೂಜಿ ಕೊಟ್ಟ ಮಾತಿನಂತೆ ಹಣವನ್ನು ಕೊಡಲಿಲ್ಲ ಹಾಗೂ ಮಾರಿಕೊಂಡ ಬೇನಾಮಿ ಆಸ್ತಿಗಾಗಿ ಪ್ರಮುಖ ಆರೋಪಿ ಮಹಂತೇಶ್ ಮೇಲೆ ಒತ್ತಡ ಹೇರಿದ್ದರಿಂದಲೇ ಗುರೂಜಿಯವರ ಜೀವಕ್ಕೆ ಕಂಟಕವಾಗಿತ್ತು.
ಗುರುಜಿ ಹತ್ಯೆ ನಡೆದ ದಿನವೇ ಪೊಲೀಸರು ರಾಮದುರ್ಗದ ಬಳಿ ಆರೋಪಿಗಳನ್ನು ಬಂಧಿಸಲಾಗಿತ್ತು ಬಳಿಕ ನ್ಯಾಯಾಲಯ ಆರು ದಿನ ಪೊಲೀಸ್ ಕಷ್ಟರಿಗೆ ನೀಡಿತ್ತು ಸೋಮವಾರ ಅವಧಿ ಮುಕ್ತಾಯಗೊಂಡಿದ್ದು ಇಂದು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ