ಯಾದಗಿರಿ:(ಜು.12):Basava Sagar Dam: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ (Heavy Rain) ಭಾರಿ ಮಳೆಯಿಂದಾಗಿ ಒಳಹರಿವು ಹೆಚ್ಚಳವಾಗುತ್ತಿದ್ದು… ಯಾದಗಿರಿ ಸಮೀಪದ ನಾರಾಯಣಪುರದ (Basavarasagara Dam) ಬಸವಸಾಗರ ಜಲಾಶಯದಿಂದ 20,000ಕ್ಯೂಸೆಕ್ ನೀರು ಕೃಷ್ಣೆಗೆ ಹರಿಸಲಾಯಿತು.
ಕೃಷ್ಣ ತೀರದ ಬಂಡೊಳ್ಳಿ, ತಿಂಥಣಿ, ಬೆಂಚಿಗಡ್ಡಿ, ದೇವರ ಗಡ್ಡಿ ಮೇಲಿನ (Basavasagar dam) ಗಡ್ಡಿ ನೀಲಕಂಠ ರಾಯಣ್ಣ ಗಡ್ಡಿ ಸೇರಿದಂತೆ ಇತರ ಗ್ರಾಮಗಳ ಜನರಿಗೆ ನದಿಗೆ ಇಳಿಯದಂತೆ ಸೂಚನೆ ಹೊರಡಿಸಲಾಗಿದೆ.ಬಸವರಾಜ ಜಲಾಶಯದಲ್ಲಿ 492.25 ಮೀ ಗರಿಷ್ಠ ನೀರಿನ ಸಂಗ್ರಹವಿದ್ದು, ಪ್ರಸ್ತುತ ನೀರಿನ ಸಂಗ್ರಹ 491.15ಮೀ ಗೆ ತಲುಪಿದೆ.
ಜಲಾಶಯದಲ್ಲಿ ನೀರಿನ ಮಟ್ಟವನ್ನು ನೋಡಿಕೊಂಡು ಎರಡು ಕ್ರಸ್ಟ್ ಗೇಟ್ ತೆರೆಯುವ ಮೂಲಕ (Water Released)ನೀರನ್ನು ಹೊರ ಬಿಡಲಾಗುತ್ತಿದೆ.. ಒಳಹರಿವು ಹೆಚ್ಚಾದ ಕೂಡಲೇ ಹಂತ ಹಂತವಾಗಿ ಗೇಟ್ಗಳನ್ನು ಬಳಸಿ ಹೆಚ್ಚಿನ ನೀರನ್ನು ಬಿಡಲಾಗುವುದು ಎಂದು ನಿಗಮದ ಮೂಲಗಳಿಂದ ತಿಳಿದುಬಂದಿದೆ.
ಮಹಾಬಲೇಶ್ವರ, ಮುಂಬೈ, ಸಾಂಗ್ಲಿ, ಮೀರಜ್ ,ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ (Alamatti Dam) ಆಲಮಟ್ಟಿ, ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ನೀರಿನ ಒಳಹರಿವು ಹೆಚ್ಚಾಗಿದ್ದು ಆಲಮಟ್ಟಿ ಜಲಾಶಯ ಭರ್ತಿಯಾಗಿದೆ ಎಂದು ಹೇಳಲಾಗಿದೆ ಇದರಿಂದ ನಾರಾಯಣಪುರದ ಬಸವ ಸಾಗರ ಜಲಾಶವು ಕೂಡ ಭರ್ತಿಯಾಗಿ ನೀರಿನ ಸಂಗ್ರಹದ ಮಟ್ಟ ಗರಿಷ್ಟಕ್ಕೆ ತಲುಪಿದೆ.