ನವದೆಹಲಿ: (ಜುಲೈ 11) : ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ (Vijay Mallya) ಇನ್ನುಮುಂದೆ ಜೈಲು ಹಕ್ಕಿ ಆಗಲಿದ್ದಾರೆ.ಹೌದು, ಉದ್ಯಮಿ ವಿಜಯ್ ಮಲ್ಯಗೆ (Vijay Mallya) 4 ತಿಂಗಳ ಜೈಲು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ (Vijay Mallya sentenced to 4 months in jail, Rs 2,000 fine) ವಿಧಿಸಿ ಸುಪ್ರೀಂ ಕೋರ್ಟ್ (Supreme Court On Vijay Mallya) ಆದೇಶ ಹೊರಡಿಸಿದೆ.
2017ರಲ್ಲಿ ನ್ಯಾಯಾಲಯದಿಂದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣದಡಿ ತಪ್ಪಿತಸ್ಥರೆಂದು ಸಾಬೀತಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂಕೋರ್ಟ್ ಇಂದು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, 4 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಇನ್ನೂ, ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯರನ್ನು ಗಡಿಪಾರು ಮೂಲಕ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆಯೇ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಮಲ್ಯರಿಂದ ಸಮನ್ಸ್‌ಗಳ ನಿರ್ಲಕ್ಷ್ಯ
ಇನ್ನೂ ಉದ್ಯಮಿ ಮಲ್ಯ ಅವರು, ತಮ್ಮ ಮಕ್ಕಳ ಖಾತೆಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡಿದ್ದ ವಿವರ ಬಹಿರಂಗಪಡಿಸುವುದು. ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೀಡಲಾಗಿದ್ದ ಸಮನ್ಸ್‌ಗಳನ್ನು ನಿರ್ಲಕ್ಷ್ಯ ಮಾಡಿದ್ದರು. ಈ ಗಂಭೀರ ಪ್ರಕರಣದಲ್ಲಿ 2017ರಲ್ಲಿ ಮಲ್ಯ ಅವರು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ.
ಲಿಕ್ಕರ್ ಕಂಪನಿಯಿಂದ 600 ಕೋಟಿ
ಯುನೈಟಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಅಧ್ಯಕ್ಷ ಸ್ಥಾನದಿಂದ 2016ರ ಫೆಬ್ರವರಿಯಲ್ಲಿ ಕೆಳಗಿಳಿದ ಬಳಿಕ ಬ್ರಿಟನ್ ಲಿಕ್ಕರ್ ಕಂಪನಿ ಡಿಯಾಗಿಯೊದಿಂದ ಅವರು 40 ಮಿಲಿಯನ್ ಡಾಲರ್ (ಸುಮಾರು 600 ಕೋಟಿ ರೂ.) ಪಡೆದಿದ್ದರು ಎನ್ನಲಾಗಿದೆ. ಈ ವಿವರವನ್ನು ಅವರು ಬಹಿರಂಗಪಡಿಸಿರಲಿಲ್ಲ.
ಏನಿದು ಪ್ರಕರಣ?
2017ರ ಮೇ 9ರಂದು ನೀಡಲಾಗಿದ್ದ ನ್ಯಾಯಾಂಗ ನಿಂದನೆ ತೀರ್ಪಿನ ಕುರಿತಾದ ವಿಜಯ್ ಮಲ್ಯ ಅವರ ಪರಾಮರ್ಶನಾ ಅರ್ಜಿಯನ್ನು 2020ರ ಆಗಸ್ಟ್ 30ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ತಮಗೆ ನೀಡಲಾದ ಶಿಕ್ಷೆಯ ವಿರುದ್ಧ ಅವರು ಸಲ್ಲಿಸಿದ್ದ ಮೂರು ವರ್ಷಗಳ ಹಳೆಯದಾದ ಮೇಲ್ಮನವಿ ಅರ್ಜಿಯಲ್ಲಿ ಯಾವುದೇ ಅರ್ಹತೆ ಕಾಣಿಸಿಲ್ಲ ಎಂದು ಕೋರ್ಟ್ ಹೇಳಿತ್ತು.