ಬೆಂಗಳೂರು : (ಜುಲೈ 11) : ನರೇಂದ್ರ ಮೋದಿ (PM Narendra Modi) ಅವರು ದೇಶದ ಪ್ರಧಾನಿ (PM) ಆದ್ಮೇಲೆ ಪ್ರತಿ ವರ್ಷ ಎರಡು ಕೋಟಿ (Two Crore) ಉದ್ಯೋಗ (Job) ಮಾಡ್ತೀನಿ ಅಂದ್ರು. ಎಂಟು ವರ್ಷದಲ್ಲಿ (8 Years) ಎಷ್ಟು ಕೋಟಿ ಉದ್ಯೋಗ (Job) ಸೃಷ್ಟಿ ಆಗಿದ್ಯಪ್ಪಾ..? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನ (Bangalore) ಅರಮನೆ ಮೈದಾನದಲ್ಲಿ ರಾಜ್ಯ ಯುವ ಕಾಂಗ್ರೆಸ್ (Youth Congress) ವತಿಯಿಂದ ಸೋಮವಾರ (Monday) ಹಮ್ಮಿಕೊಂಡಿದ್ದ ‘ಕಾಂಗ್ರೆಸ್ ಯುವ ಜನೋತ್ಸವ’ (Congress Yuva Janotsava) ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೋದಿ ಬೇಗ ತೊಲಗ್ಬೇಕು ಅಲ್ವೇನ್ರೀ..
ಈ ಪ್ರಧಾನಿ ಮೋದಿ (PM Narendra Modi) ಅವರು ಇದಾರಲ್ಲ… ಅವರು ಎಷ್ಟು ಬೇಗ ತೊಲಗ್ತಾರೋ.. ಬೇಗ ತೊಲಗ್ಬೇಕು ಅಲ್ವೇನ್ರೀ.. ಮೋದಿ (PM Narendra Modi) ಬೇಗ ತೊಲಗಿದ್ರೆ ತಾನೇ ರಾಜ್ಯ, ದೇಶಕ್ಕೆ ಒಳ್ಳೆದಾಗುತ್ತೆ ಎಂದು ಮೋದಿ (PM Narendra Modi)ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ @MBPatil, ಕೆಪಿಸಿಸಿ ಕಾರ್ಯಧ್ಯಕ್ಷರಾದ @SaleemAhmadINC, @IYC ಅಧ್ಯಕ್ಷರಾದ @srinivasiyc, @IYCKarnataka ಅಧ್ಯಕ್ಷರಾದ @nalapad ಸೇರಿದಂತೆ ಹಲವರು ಉಪಸ್ಥಿತರಿದ್ದರು. pic.twitter.com/oe3QgIEW2a
— Karnataka Congress (@INCKarnataka) July 11, 2022
ನರೇಂದ್ರ ಮೋದಿ (Narendra Modi) ಪ್ರಧಾನಿ ಮಂತ್ರಿ (MP) ಆಗಿ ಎಂಟು ವರ್ಷಗಳು ಆಯ್ತು. ಅಂದ್ರ, ಈವರೆಗೆ ಎಷ್ಟು ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. 16 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಜಿಎಸ್‌ಟಿ (GST) ಬರುವ ಮುಂಚೆ, ನೋಟು ಅಮಾನ್ಯೀಕರಣ ಬರುವುದಕ್ಕಿಂತ ಮುಂಚೆ, ಕೊರೊನಾ (Covid) ರೋಗ ಬರುವುದಕ್ಕಿಂತ ಮುಂಚೆ ಎಂಎಸ್ಎಂಇ ಗಳು (MSME) ಸೃಷ್ಟಿ ಮಾಡಿದ ಉದ್ಯೋಗ ಹತ್ತು ಕೋಟಿ ಎಂದು ಹೇಳಿದರು.
ಹು ಈಸ್ ರೆಸ್ಪಾನ್ಸಬಲ್ ಮಿಸ್ಟರ್ ಮೋದಿ
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ, ಜಿಎಸ್‌ಟಿ, ನೋಟು ಅಮಾನ್ಯೀಕರಣ ಮಾಡಿದ್ದಾರೆ. ಈಗ ಉದ್ಯೋಗ 2.50 ಕೋಟಿಗೆ ಬಂದು ನಿಂತಿದೆ. ಹು ಈಸ್ ರೆಸ್ಪಾನ್ಸಬಲ್ ಮಿಸ್ಟರ್ ನರೇಂದ್ರ ಮೋದಿ ಎಂದು ಖಾರವಾಗಿಯೇ ಕಿಡಿಕಾರಿದರು.
ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ (KPCC President) ಡಿ.ಕೆ ಶಿವಕುಮಾರ್(DK Shivakumar), ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್(Mohamad Nalapad), ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ (BV Srinivas) ಸೇರಿದಂತೆ ಕಾಂಗ್ರೆಸ್ (Congress Leaders) ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.