ನವದೆಹಲಿ : (ಜುಲೈ 11) : ಕೇಂದ್ರ ಸರ್ಕಾರ (Central Government) ದೇಶದ ಬುಡಕಟ್ಟು ಸಮುದಾಯಗಳ ಹಕ್ಕು ಕಿತ್ತುಕೊಳ್ಳಲು ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬಿಜೆಪಿ ಸರ್ಕಾರದ (BJP Government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೌದು, ಕೇಂದ್ರ ಸರ್ಕಾರ ಭಾನುವಾರ ಅರಣ್ಯ ಸಂರಕ್ಷಣೆಗೆ (The new Forest Conservation Rules) ಪರಿಷ್ಕೃತ ಕಾನೂನು ನಿಯಮಾವಳಿ ಬಿಡುಗಡೆ ಮಾಡಿದೆ. ಈ ಪರಿಷ್ಕೃತ ಕಾನೂನುಗಳಿಗೆ ಕಾಂಗ್ರೆಸ್ (Congress) ಪಕ್ಷದಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಧ್ವನಿಗೂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಕೇಂದ್ರ ಸರ್ಕಾರವನ್ನು (Central Government) ತರಾಟೆಗೆ ತೆಗೆದುಕೊಂಡಿದ್ದಾರೆ.
‘Modi-Mitr’ Sarkar at its crony best!
— Rahul Gandhi (@RahulGandhi) July 10, 2022
For ‘ease of snatching’ forest land, BJP govt has come up with new FC Rules, 2022 diluting UPA's Forest Rights Act, 2006.
Congress stands strongly with our Adivasi brothers & sisters in their fight to protect Jal, Jungle and Zameen.
ಬಿಜೆಪಿ ಹೊಸ ಸಂಚು ಹೆಣೆದಿದೆ..!
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅರಣ್ಯ ಸಂರಕ್ಷಣೆಗೆ ಪರಿಷ್ಕೃತ ಕಾನೂನು ನಿಯಮಾವಳಿ ಬುಡಕಟ್ಟು ಸಮುದಾಯಗಳ ಹಕ್ಕು ಕಿತ್ತುಕೊಳ್ಳುವ ಹುನ್ನಾರ. ಮೋದಿ ಹಾಗೂ ಅವರ ಮಿತ್ರರ ಸರ್ಕಾರವು ಹೊಸ ಸಂಚು ಹೆಣೆದಿದೆ! ಅರಣ್ಯ ಭೂಮಿಯನ್ನು ಬುಡಕಟ್ಟು ಸಮುದಾಯಗಳಿಂದ ಕಸಿದುಕೊಳ್ಳಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Rahul Gandhi slams PM Modi : ಪ್ರಧಾನಿ ಮೋದಿ ತಾಕತ್ತಿನ ಹೇಳಿಕೆಗೆ ರಾಹುಲ್ ಗಾಂಧಿ ಕಿಡಿ..!
ಆದಿವಾಸಿಗಳಿಗೆ ರಾಹುಲ್ ಬೆಂಬಲ
ಯುಪಿಎ ಸರ್ಕಾರ 2006ರಲ್ಲಿ ಜಾರಿಗೆ ತಂದ ಅರಣ್ಯ ಹಕ್ಕುಗಳ ಕಾಯಿದೆಯನ್ನು ದುರ್ಬಲಗೊಳಿಸುವಂಥ ಮಾರ್ಪಾಡುಗಳನ್ನು ಕೇಂದ್ರ ಸರಕಾರವು ನೂತನ ನಿಯಮಗಳಲ್ಲಿ ಮಾಡಿದೆ. ಜಲ, ಅರಣ್ಯ, ಭೂಮಿಯ ಹಕ್ಕಿನ ಹೋರಾಟದಲ್ಲಿ ಆದಿವಾಸಿ ಸೋದರ, ಸೋದರಿಯರಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ರಾಹುಲ್ ಗಾಂಧಿ ಅವರು, ಬುಡಕಟ್ಟು ಸಮುದಾಯಗಳಿಗೆ ಬೆಂಬಲ ಸೂಚಿಸಿದ್ದಾರೆ.
ಕೇಂದ್ರದ ವಿರುದ್ಧ ಜೈರಾಮ್ ಆಕ್ರೋಶ
ಇನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) ಸಾಥ್ ಕೊಟ್ಟಿದ್ದಾರೆ. ಅರಣ್ಯವಾಸಿಗಳು, ಬುಡಕಟ್ಟು ಸಮುದಾಯಗಳ ಹಕ್ಕುಗಳ ರಕ್ಷಣೆಗೆ 2006ರ ಕಾಯಿದೆಯಲ್ಲಿ ಆದ್ಯತೆ ನೀಡಲಾಗಿತ್ತು. ಅವರ ಒಪ್ಪಿಗೆ ಇಲ್ಲದೆಯೇ ಅರಣ್ಯ ಭೂಮಿಯನ್ನು ಪರಿವರ್ತಿಸಿ, ಅಭಿವೃದ್ಧಿ ಕಾರ್ಯ ಅಥವಾ ಉದ್ಯಮಸ್ನೇಹಿ ನೆಪವೊಡ್ಡಿ ಪರವಾನಗಿ ನೀಡಲು ಅವಕಾಶವಿರಲಿಲ್ಲ. ಇದನ್ನು ಕೇಂದ್ರ ಸರಕಾರವು ತನ್ನ ಮಿತ್ರರ ಅನುಕೂಲಕ್ಕಾಗಿ ಬದಲಾಯಿಸಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.