ಮಧ್ಯ ಪ್ರದೇಶ: (ಜು.11): Inhumanity: ಆಂಬುಲೆನ್ಸ್ ಗಾಗಿ ಜನರು ಪರದಾಡುತ್ತಿರುವಾಗ (Ambulance) ಘಟನೆ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ತುರ್ತು ಚಿಕಿತ್ಸೆಗಾಗಿ ಬಳಸುವ ಆಂಬುಲೆನ್ಸ್ ಸಿಗದೆ ಜನರು (Emergency Service) ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಅಂತಹ ಘಟನೆ ಮತ್ತೊಮ್ಮೆ ಮರುಕಳಿಸಿದೆ. ರಸ್ತೆ ಬದಿಯಲ್ಲಿ ಧೂಳಿನಲ್ಲಿ ಬಿಳಿಯ ಬಟ್ಟೆಯಿಂದ ಸುತ್ತಿರುವ ತಮ್ಮನ ದೇಹವನ್ನು ತೊಡೆಯ ಮೇಲೆ ಮಲಗಿಸಿಕೊಂಡು (Body) ತಲೆ ಸವರುತ್ತಿರುವ ಬಾಲಕನನ್ನು ನೋಡಿದರೆ ನಿಜಕ್ಕೂ ಕರುಳು ಕಿತ್ತು ಬರುತ್ತದೆ.
ಮಧ್ಯ ಪ್ರದೇಶದ ಮೊರೆನಾ (Morena) ಪಟ್ಟಣದಲ್ಲಿ ಪತ್ರಕರ್ತರು ಒಬ್ಬರು ತೆಗೆದ ಚಿತ್ರವು ನಿಜಕ್ಕೂ ಮನ ಕಲಕುವಂತಿದೆ. ಎಂಟು ವರ್ಷದ ಬಾಲಕ ಗುಲ್ಶನ್ ತನ್ನ ಎರಡು ವರ್ಷದ ಸಹೋದರ ಶವನ್ನುೊಂದಿಗೆ ಕುಳಿತಿರುವುದನ್ನ ಚಿತ್ರದಲ್ಲಿ ಕಾಣಬಹುದು.
ಘಟನೆ ಏನು?
ಸ್ಥಳೀಯ ಆಸ್ಪತ್ರೆಯ ಅಭಿಪ್ರಾಯದ ಮೇರೆಗೆ (Madhya Pradesh) ಪೂಜಾರಾಮ್ ಅಂಬಾದ ಬದ್ ಫ್ರಾ ಎಂಬ ನಿವಾಸಿ ತನ್ನ ಎರಡು ವರ್ಷದ ಮಗನನ್ನು ಆಂಬುಲೆನ್ಸ್ ನಲ್ಲಿ ಭೂಪಾಲಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಮೊರೆನಾ ಜಿಲ್ಲಾ (Morena Hospital) ಆಸ್ಪತ್ರೆಗೆ ಕರೆದೊಯ್ದರು.. ರಕ್ತ ಹೀನತೆಯಿಂದ ಬಳುತ್ತಿರುವ ಎರಡು ವರ್ಷದ ಮಗನಿಗೆ ಹೊಟ್ಟೆಯಲ್ಲಿ ನೀರು ಕೂಡ ತುಂಬಿಕೊಂಡಿತ್ತು
ಯಕ್ಕತ್ತಿನ ಕಾಯಿಲೆಯಿಂದ (Ill-health)ಬಳಲುತ್ತಿದ್ದ ಹುಡುಗ ಅಷ್ಟಾಗಲೇ ಮೃತಪಟ್ಟಿತ್ತು ಆಗಾಗಲೇ ಹೊರಟುಬಿಟ್ಟಿತ್ತು.ಇನ್ನೂ ಗ್ರಾಮಕ್ಕೆ ಕರೆದೊಯ್ಯಲು ಮಗುವಿನ ತಂದೆ, ವಾಹನ ಬೇಕೆಂದು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ (Irresponsible) ಮನವಿ ಮಾಡಿದ್ರು. ಆದರೆ ಅವರ ಮನವಿಗೆ ಸಿಬ್ಬಂದಿಗಳು ಆಗಲಿ ವೈದ್ಯರಾಗಲಿ ಗಮನ ನೀಡಲಿಲ್ಲ.ಹೀಗಿದ್ದ ವೇಳೆ ಆಸ್ಪತ್ರೆ ಆವರಣದಲ್ಲೇ ನಿಂತಿದ್ದ ಇನ್ನೊಂದು ಆಂಬುಲೆನ್ಸ್ ಚಾಲಕ 1500 ರೂಪಾಯಿ ಕೇಳಿದ್ದಾರೆ. ಆದ್ರೆ ಹಣ ನೀಡಲು ಸಾಧ್ಯವಾಗಲಿಲ್ಲ.
An 8-year-old child is sitting with the body of his 2-year-old brother in his arms and the father searches for an ambulance for his son. The video is being told of Madhya Pradesh.
— @aamir6312khan (@AmirKha69261639) July 10, 2022
The double engine government has the money to form the government by breaking it down, but no mone pic.twitter.com/YUtikDFfzR
ನಂತರ ತಮ್ಮ ಮಗುವಿನ ಶವವನ್ನು ಮೊರೆನಾ ನೆಹರು ಪಾರ್ಕ್ (Opp To Park) ಎದುರು ಬಿಟ್ಟು ಬೇರೆ ವಾಹನವನ್ನು ಹುಡುಕಲು ಹೋಗಿದ್ದರು. ಇವೇಳೆ ತಮ್ಮನ ಶವವನ್ನ ತೊಡೆಯ ಮೇಲೆ ಮಲಗಿಸಿಕೊಂಡು ತಲೆಯನ್ನ ಸವರುತ್ತಿರುವ ದೃಶ್ಯ ಕಂಡು ಬಂದಿತ್ತು.
ಇದನ್ನೂ ಓದಿ: Assam : ಬೆಲೆ ಏರಿಕೆ ವಿರುದ್ಧ ಶಿವನ ವೇಷ ಧರಿಸಿ ಪ್ರತಿಭಟಿಸಿದ ವ್ಯಕ್ತಿಯ ಬಂಧನ..!