ಬೆಂಗಳೂರು: (ಜು.11) High Court Order: ಕಳಂಕಿತ, ಆರೋಪ ಎಸಗಿರುವ ಅಧಿಕಾರಿಗಳನ್ನು ಎಸಿಬಿಗೆ (ACB) ನೇಮಕ ಮಾಡದಂತೆ ಹೈ ಕೋರ್ಟ್ (High Court) ಖಡಕ್ ಎಚ್ಚರಿಕೆ ನೀಡಿದೆ.
ಎಸಿಬಿ (ACB) ಇರೋದು ಭ್ರಷ್ಟಾಚಾರ ನಿರ್ಮೂಲನೆ ಮಾಡೋದಕ್ಕೆ, ಎಸಿಬಿ (ACB) ಅಧಿಕಾರಿಯಾಗುವವರಿಗೆ ವಿಶ್ವಾಸ, ಎಸಿಬಿ (ACB) ಘನತೆಯನ್ನು ಒಂದು ಹಂತಕ್ಕೆ ತಲುಪಿಸುವವರೆಗೂ ತಾಳ್ಮೆ, ಕ್ಷಮತೆ ಇರಬೇಕು ಎಂದು ಹೇಳಿದೆ.
ಬೆಂಗಳೂರು ಜಿಲ್ಲಾಧಿಕಾರಿ ವಿರುದ್ಧ ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಎಸಿಬಿ ಬಗ್ಗೆ ಪ್ರಸ್ತಾಪಿಸಿದ ಹೈ ಕೋರ್ಟ್ ಸರ್ವಿಸ್ ರೆಕಾರ್ಡ್, ಅಧಿಕಾರಿಯ ಸಮಗ್ರತೆಯನ್ನು ಪರಿಗಣಿಸಬೇಕು ಹಾಗೂ ಯಾವುದೇ ಒತ್ತಡಕ್ಕೆ ಮಣಿಯದೆ ನೇಮಕ ಮಾಡಬೇಕು. ನೇಮಕದ ಹಿಂದೆ ಆಂತರಿಕ, ಬಾಹ್ಯ ಪ್ರಭಾವ ಇರಬಾರದು. ಮುಖ್ಯವಾಗಿ ಅಧಿಕಾರಿ ವಿರುದ್ಧ ಎಸಿಬಿ, ಲೋಕಾಯುಕ್ತ ತನಿಖೆ ನಡೆಯಬಾರದು ಎಂದು DPAR ಕಾರ್ಯದರ್ಶಿಗೆ ಹೈ ಕೋರ್ಟ್ ಸೂಚನೆ ನೀಡಿದೆ.
ಸಿಬಿಐ ಪರ ವಾದ ಮಂಡಿಸಿದ ವಕೀಲ ಪ್ರಸನ್ನ ಅವರು, ಅಧಿಕಾರಿಗಳ ವಿರುದ್ಧ ತನಿಖೆಗೆ ಸಿಬಿಐ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು ನಿಜ ಆದ್ರೆ ತನಿಖೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.ಈ ವೇಳೆ ಡಿಸಿ ಆಗಿದ್ದ ಮಂಜುನಾಥ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು.
ಎಸಿಬಿ ಎಜಿಡಿಬಿ ಸೀಮಂತ ಕುಮಾರ್ ಸಿಂಗ ವಿರುದ್ಧ ಆರೋಪಗಳಿರುವ ಹಿನ್ನೆಲೆ ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ಮೆಮೋ ದಾಖಲಿಸಿದರು. ಅಧಿಕಾರಿಗಳ ವಿರುದ್ಧ ತನಿಖೆಗೆ ಮನವಿ ಮಾಡಲಾಗಿದ್ದು ಎಂದಷ್ಟೇ ಸಿ.ಬಿ.ಐ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ ಇನ್ನೂ ಈ ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿದೆ.
ಪ್ರಕರಣವೇನು?
ಬೆಂಗಳೂರುಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಾಜಿ ಜಿಲ್ಲಾಧಿಕಾರಿಯವರನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು.ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ್ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಪ್ರಭಾವಕ್ಕೆ ಒಳಗಾಗಿ ಎಸಿಬಿ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಈ ಹಿಂದೆ ಹೈಕೋರ್ಟ್ ತರಾಟೆ ತೆಗೆದುಕೊಂಡಿತ್ತು ನಂತರ ಮಂಜುನಾಥ್ ಅವರನ್ನ ಬಂಧಿಸಲಾಗಿತ್ತು.