ಬೆಂಗಳೂರು: ( ಜುಲೈ 11): ಮಾಡೋ ಕೆಲಸದಲ್ಲಿ ಬರೋ ಆದಾಯವೇ ಜೀವನಕ್ಕೆ ಸಾಕಾಗುತ್ತಿತ್ತು. ಆದ್ರೆ ಈ ಮಧ್ಯೆ ಪಬ್ ನಲ್ಲಿ ಮೋಜು ಮಸ್ತಿಯ ರುಚಿ ಕಂಡಿದ್ದವರು ಇಳಿದದ್ದು ಕಳ್ಳತನಕ್ಕೆ. ಇನ್ನೂ ಕಳ್ಳತನ ಮಾಡಲು ಯ್ಯೂಟ್ಯೂಬ್ (youtube )ಮೊರೆ ಹೋಗಿದ್ದ ಖದೀಮರು ಈಗ ಪೊಲೀಸರ (police) ಅತಿಥಿಯಾಗಿದ್ದಾರೆ.


ಹೌದು ಸರಗಳ್ಳತನ ಮಾಡಲು ಹಲವು ಕ್ರೈಂ ಎಪಿಸೋಡ್ ಗಳನ್ನ ಯೂಟ್ಯೂಬ್ ನಲ್ಲಿ ನೋಡಿ ಸರಗಳ್ಳತನ ಮಾಡಲು ಮೊದಲಿಗೆ ಬೈಕ್ ಕಳವು ಮಾಡಿದ್ದ ನಂತರ ಸರಗಳ್ಳತನಕ್ಕೆ ಇಬ್ಬರು ಖದೀಮರು ಅಂದರ್ ಆಗಿದ್ದಾರೆ. ಮೋಹನ್ ಹಾಗೂ ಸುರೇಶ್ ಬಂಧಿತ ಆರೋಪಿಗಳು.
ಬೆಂಗಳೂರು ದಕ್ಷಿಣ ಭಾಗದಲ್ಲಿ ಸಾಕಷ್ಟು ಕಡೆ ಚೈನ್ ಸ್ನಾಚ್ ಮಾಡಿ ಸಕ್ಸಸ್ ಆಗಿದ್ದ ಆರೋಪಗಳು ಸದ್ಯ ನಸೀಬ್ ಕೆಟ್ಟು ಚೆನ್ನಮ್ಮನಕೆರೆ ಪೊಲೀಸ್ರ ಅತಿಥಿಯಾಗಿದ್ದಾರೆ.
ಆರೋಪಿಗಳ ವಿವರ


ಸುರೇಶ್ ಹಾಗೂ ಮೋಹನ್ ಇಬ್ರು ಕೂಡ ವೃತ್ತಿಯಲ್ಲಿ ಪೇಂಟರ್ ಗಳಾಗಿದ್ರು. ಪಬ್ ಗಳಲ್ಲಿನಡೆಯುವ ಮೋಜು ಮಸ್ತಿ ಬಗ್ಗೆ ಭಾರಿ ವ್ಯಾಮೋಹ ಇಟ್ಟುಕೊಂಡಿದ್ದ ಆರೋಪಿಗಳು ಬೈಕ್ ಕದ್ದು, ಕದ್ದ ಬೈಕ್ ನಲ್ಲಿ ಸರಗಳ್ಳತನಕ್ಕೆ ಇಳಿಯುತ್ತಿದ್ದರು.
ಆರೋಪಿಗಳ ವಶ
ಸದ್ಯ ಆರೋಪಿಗಳ ಬಂಧನದಿಂದ 4 ಲಕ್ಷ 68 ಸಾವಿರ ಮೌಲ್ಯದ ಮೂರು ಬೈಕ್ ಹಾಗೂ ಚಿನ್ನಾಭರಣ ವಶಕ್ಕೆ ಪಡೆದು ಆರೋಪಿಗಳನ್ನ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.