ಬೆಂಗಳೂರು : (ಜುಲೈ 10) : ಈ ಪ್ರಂಪಚದಲ್ಲಿ ಒಂದಲ್ಲಾ ಒಂದು ವಿಸ್ಮಯ ನಡೆಯುತ್ತಲೇ ಇದೆ. ಹೌದು ಇಲ್ಲೋಂದು ಆಚ್ಚರಿಯ ಸಂಗತಿ ನೆಡಿದಿದೆ ಇದನ್ನು ನೀವು ಕೇಳಿದ್ದಾರೆ ಶಾಕ್ ಆಗತ್ತೀರಾ?
ಹೌದು, ಇಲ್ಲೊಂದು ಮೇಕೆ ಮರಿಗೆ ತುಂಬಾನೇ ಉದ್ದದ ಕಿವಿಗಳಿದೆ. ಕೇವಲ ಒಂದು ತಿಂಗಳ ಮೇಕೆ ಮರಿಗೆ 56 ಸೆ.ಮೀ ಉದ್ದವಾಗಿ ಕಿವಿಗಳು ಬೆಳೆದಿವೆ. ಆ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದೆ. ಒಂದು ತಿಂಗಳಷ್ಟು ಹಿಂದೆ ಜನಿಸಿದ ಮೇಕೆ ಮರಿಗೆ ಅತ್ಯಂತ ಉದ್ದನೆಯ ಕಿವಿಗಳನ್ನು ಹೊಂದಿರುವ ದೃಶ್ಯ ಈಗ ವೈರಲ್ ಆಗುತ್ತಿದೆ. ಜೂನ್ 4 ರಂದು ದಕ್ಷಿಣ ನಗರದ ಕರಾಚಿಯಲ್ಲಿ ಬ್ರೀಡರ್ ಮೊಹಮ್ಮದ್ ಹಸನ್ ನರೇಜೋ ಅವರಿಗೆ ಸೇರಿದ ಮೇಕೆಯೊಂದು ಅತ್ಯಂತ ಉದ್ದನೆಯ ಕಿವಿ ಇರುವ ಮರಿಗೆ ಜನ್ಮ ನೀಡಿದೆ.
ಇದಕ್ಕೆ ಅವರು ಹಸನ್ ನರೇಜೋ ಸಿಂಬಾ(Simba)ಎಂದು ಹೆಸರಿಟ್ಟಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದ ತಕ್ಷಣವೇ ಮೇಕೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಈ ಮೇಕೆ ನುಬಿಯನ್ ತಳಿಗೆ ಸೇರಿದ ಮೇಕೆ ಇದಾಗಿದೆ. ನುಬಿಯನ್ ಆಡುಗಳು ಉತ್ತಮ ಗುಣಮಟ್ಟದ ಬೆಣ್ಣೆಯ ಹಾಲನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ. ಈ ಹಾಲನ್ನು ಕುಡಿಯಬಹುದಾಗಿದ್ದು, ಐಸ್ ಕ್ರೀಮ್, ಮೊಸರು, ಚೀಸ್ ಮತ್ತು ಬೆಣ್ಣೆಯನ್ನು ತಯಾರಿಸಲು ಸಹ ಬಳಸುತ್ತಾರೆ.
ಮೊಹಮ್ಮದ್ ಹಸನ್ ನರೇಜೋರವರು ಮೇಕೆ ಮರಿಯನ್ನು ನೋಡಿದಾಗ ಸಿಂಬಾ 46 ಸೆಂಟಿಮೀಟರ್ (18.11 ಇಂಚು) ಉದ್ದದ ಕಿವಿಯೊಂದಿಗೆ ಜನಿಸಿದ್ದು ಆಚ್ಚರಿ ಅನಿಸಿದ್ದರು ಅದು ನಿಜ. ಸದ್ಯ ಕಿವಿಯ ಉದ್ದ 50 ಸೆ.ಮೀ.ಗೂ ಅಧಿಕವಾಗಿದೆ. ಸಿಂಬಾದ ಬಗ್ಗೆ ಕರಾಚಿಯಿಂದ ಫೋನ್ ಮೂಲಕ ಡಾಯ್ಚ ಪ್ರೆಸ್-ಅಜೆಂಟೂರ್ (ಡಿಪಿಎ) ಜೊತೆ ಮಾತನಾಡಿದ ಬ್ರೀಡರ್ ಮೊಹಮ್ಮದ್ ಹಸನ್ ನರೇಜೋ ಅವರು ನಾನು ನನ್ನ ಕುಟುಂಬ ಮತ್ತು ನಾನು ಮೇಕೆ ಮರಿಯನ್ನು ನೋಡಿದಾಗ ನಮ್ಮ ಕಣ್ಣುಗಳಿಂದ ನಂಬಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಸಿಂಬಾ ಹುಟ್ಟಿದ ಒಂದು ತಿಂಗಳ ನಂತರ ಅದರ ಕಿವಿಗಳು ಈಗ 56 ಸೆಂಟಿಮೀಟರ್‌ಗಳಷ್ಟು ಉದ್ದವಾಗಿದೆ, ಅದರ ದೇಹದ ಎತ್ತರಕ್ಕಿಂತಲೂ ಉದ್ದವಾದ ಕಿವಿಗಳನ್ನು ಹೊಂದಿದೆ. ಸಿಂಬಾ ನಡೆಯುವಾಗ ಕಿವಿಗಳು ನೆಲಕ್ಕೆ ತಾಗುತ್ತವೆ. ತನ್ನ ಕಿವಿಗಳನ್ನು ನೆಲದಲ್ಲಿ ಎಳೆದುಕೊಂಡು ಹೋಗುತ್ತದೆ ಎಂದು ನರೇಜೋ ಹೇಳಿದ್ದಾರೆ.
ಕಿವಿಗಳನ್ನು ನೆಲದಲ್ಲಿ ಎಳೆದುಕೊಂಡು ಹೋಗುವುದನ್ನು ತಪ್ಪಿಸಲು ನರೇಜೋ ಅವರು ಪರಿಹಾರವನ್ನು ಕಂಡುಕೊಂಡಿದ್ದು ಸಿಂಬಾದ ಕಿವಿಗೆ ಗೋಣಿಚೀಲವನ್ನು ಹೊಲಿಸಿ ಅದರ ಕಿವಿಗಳನ್ನು ಚೀಲದ ಒಳಗೆ ಹಾಕಿ ಚೀಲವನ್ನು ಅದರ ಕುತ್ತಿಗೆಗೆ ಸುತ್ತುತ್ತಿದ್ದಾರೆ.
ಸಿಂಬಾ ಹುಟ್ಟಿದ ನಂತರ ಇಡೀ ನರೇಜೋ ಕುಟುಂಬದ ಜೀವನ ಬದಲಾಗಿದ್ದು ಅವರು ಕಳೆದ ತಿಂಗಳಿಂದ ನನ್ನ ಮನೆಯು ಕರಾಚಿಯಲ್ಲಿ ಹೆಚ್ಚು ಬೇಡಿಕೆಯಿರುವ ಸ್ಥಳವಾಗಿ ಮಾರ್ಪಟ್ಟಿದೆ. ಅವರು ಟಿವಿಯಲ್ಲಿ ಕನಿಷ್ಠ ಹನ್ನೆರಡು ಕಾರ್ಯಕ್ರಮಗಳಿಗೆ ಭಾಗವಹಿಸಿದ್ದು, ಅವರು ಪ್ರತಿದಿನ ಪತ್ರಿಕೆಗಳು ಮತ್ತು ದೂರದರ್ಶನ ವರದಿಗಾರರಿಗೆ ಹಲವಾರು ಸಂದರ್ಶನಗಳನ್ನು ನೀಡುತ್ತೇನೆ. ಇದಲ್ಲದೆ ಅವರು ಸಿಂಬಾವನ್ನು ಖರೀದಿಸಲು ಸೌದಿ ಅರೇಬಿಯಾ, ಓಮನ್ ಮತ್ತು ಬಹ್ರೇನ್‌ಗಳಲ್ಲಿನ ತಳಿಗಾರರಿಂದ ಲಕ್ಷಾಂತರ ರೂಪಾಯಿಗಳ ಆಫರ್ಗಳು ಬಂದಿವೆ. ಆದರೆ ನಾನು ನನ್ನ ಸಿಂಬಾವನ್ನು ಮಾರಲು ಬಯಸುವುದಿಲ್ಲ. ಈದೀಗ ಈ ವಿಡೀಯೋ ಸಖತ್ ವೈರಲ್ ಆಗುತ್ತಿದೆ.