ಮಧ್ಯಪ್ರದೇಶ: (ಜುಲೈ 10) : ಸ್ವಪಕ್ಷದ ವಿರುದ್ಧವೇ ಬಿಜೆಪಿ ನಾಯಕಿಯೊಬ್ಬರು (BJP Leader) ತಿರುಗಿಬಿದ್ದಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ (Madhya Pradesh Chief Minister Shivraj Singh) ಭಾರೀ ಮುಖಭಂಗವಾದಂತಾಗಿದೆ.
ಹೌದು, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Madhya Pradesh CM Shivraj Singh) ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಸ್ವಪಕ್ಷದ ನಾಯಕಿ (former Madhya Pradesh Chief Minister Uma Bharti) ಉಮಾಭಾರತಿ ತಿರುಗಿಬಿದ್ದಿದ್ದಾರೆ.

ಇದನ್ನೂ ಓದಿ: Draupadi Murmu : ಕರುನಾಡಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ದ್ರೌಪದಿ..!
ಮಧ್ಯಪ್ರದೇಶದಲ್ಲಿನ ಮದ್ಯ ನೀತಿಯ (Liquor policy) ಬಗ್ಗೆ ಮಧ್ಯಪ್ರವೇಶಿಸುವಂತೆ ಕೋರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (BJP President J.P. Nadda) ಅವರಿಗೆ ಉಮಾ ಭಾರತಿ ಪತ್ರ (wrote a letter) ಬರೆದಿದ್ದಾರೆ. ಅಲ್ಲದೆ, ಈ ವಿಷಯವನ್ನು ಸಾರ್ವಜನಿಕಗೊಳಿಸುತ್ತಿದ್ದೇನೆ ಎಂದು ಉಮಾಭಾರತಿ ಟ್ವೀಟ್ ಮಾಡಿದ್ದಾರೆ.
ಮೂರು ಪುಟಗಳ ದೂರು ಪತ್ರ
1.मैंने अपने राष्ट्रीय अध्यक्ष श्री नड्डा जी को एक पत्र लिखा है, मैं उसको सार्वजनिक कर रही हूं। pic.twitter.com/mdlbveponZ
— Uma Bharti (@umasribharti) July 9, 2022
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಆಗಿರುವ ಉಮಾಭಾರತಿ (former Madhya Pradesh CM Uma Bharti), ಶಿವರಾಜ್ ಸಿಂಗ್ ಚೌಹಾಣ್ (Madhya Pradesh CM Shivraj Singh) ನೇತೃತ್ವದ ಸರ್ಕಾರವು ಜಾರಿಗೆ ತಂದಿರುವ ಮದ್ಯ ನೀತಿಯ (Liquor policy) ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ನೀತಿಯನ್ನು ಕೆಲವು ತಿಂಗಳಿಂದ ನಾನು ವಿರೋಧಿಸುತ್ತಿದ್ದೇನೆ. ಆದರೆ, ಈಗ ನಾನು ಉಸಿರುಗಟ್ಟುವಿಕೆ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ, ಮೂರು ಪುಟಗಳ ದೂರು ಪತ್ರವನ್ನು (wrote a letter) ಬರೆದಿದ್ದಾರೆ.
ಮೂರು ಪುಟಗಳ ಪತ್ರದಲ್ಲೇನಿದೆ?
‘ನೀವು (Madhya Pradesh CM Shivraj Singh) ನನ್ನನ್ನು ತುಂಬಾ ಗೌರವಿಸುತ್ತೀರಿ. ನಾನು ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ಹೋಗುವುದಿಲ್ಲ ಎಂದು ನಿಮಗೂ ಚೆನ್ನಾಗಿ ತಿಳಿದಿದೆ. ಆದರೆ, ನಾನು ನನ್ನ ನಂಬಿಕೆಗೆ ಸಂಬಂಧಿಸಿದ ಕೆಲ ವಿಷಯಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಉಮಾಭಾರತಿ (former Madhya Pradesh CM Uma Bharti) ಖಡಕ್ ಆಗಿಯೇ ಪತ್ರದಲ್ಲಿ ಹೇಳಿದ್ದಾರೆ.
ಸಿಎಂ ಶಿವರಾಜ್‌ಗೆ ಟಾಂಗ್

ಮುಂದುವರಿದು, ‘ಸಿಎಂ ಶಿವರಾಜ್ (Madhya Pradesh CM Shivraj Singh) ಅವರೊಂದಿಗೆ ಮದ್ಯ ನೀತಿಯ ವಿಷಯದ ಬಗ್ಗೆ ಚರ್ಚೆ ನಡೆಸಿದಾಗಲೆಲ್ಲಾ ಯಾವಾಗಲೂ ಅದರ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದೆ. ಏಕೆಂದರೆ, ಮಾತುಕತೆಯಿಂದ ಸಕಾರಾತ್ಮಕ ಫಲಿತಾಂಶವು ಹೊರಬರುತ್ತದೆ ನಾನು ನಂಬಿದ್ದೆ. ಆದರೆ, ಇದೇ ನನ್ನನ್ನು ಅಪಹಾಸ್ಯ ಮತ್ತು ಟೀಕೆಗೆ ಒಳಪಡಿಸುವಂತೆ ಮಾಡಿದೆ’ ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಶಿವರಾಜ್ ಅವರಿಗೆ ಟಾಂಗ್ ಉಮಾಭಾರತಿ(former Madhya Pradesh CM Uma Bharti) ಕೊಟ್ಟಿದ್ದಾರೆ.