ಬೆಂಗಳೂರು: (ಜುಲೈ 10) : ಬಕ್ರೀದ್ ಹಬ್ಬದ (Eid–ul-Adha) ಪ್ರಯುಕ್ತ ಚಾಮರಾಜಪೇಟೆಯ (Chamarajpet) ಈದ್ಗಾ ಮೈದಾನದಲ್ಲಿ (Idga Mosque) ಭಾನುವಾರ (Sunday) ನಡೆದ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಭಾಗವಹಿಸಿದ್ದರು. ಇದೆ ವೇಳೆ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.
ಮಾಜಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ (MLA B.Z Zameer Ahmed Khan) ಆಹ್ವಾನದ ಮೇರೆಗೆ ಇಂದು ಬಕ್ರಿದ್ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ (Siddaramaiah) ಭಾಗವಹಿಸಿದರು. ಈ ವೇಳೆ ಜಮೀರ್ (MLA B.Z Zameer Ahmed Khan) ಅವರ ಮಗ ಜಾಯೆದ ಖಾನ್ ಸಹ ಜೊತೆಗಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್
ಬಕ್ರೀದ್ ಹಿನ್ನೆಲೆ ಚಾಮರಾಜಪೇಟೆ (Chamarajpet) ಈದ್ಗಾ (Idga Mosque) ಆಟದ ಮೈದಾನ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಬಂದೋಬಸ್ತ್ಗಾಗಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. 9 ಗಂಟೆಗೆ ಮೈದಾನದಲ್ಲಿ ಮುಸ್ಲಿಂ ಬಾಂಧವರಿಗೆ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಜಮೀರ್ ಜೊತೆ ಸಿದ್ದು ನಮಾಜ್
ನಮ್ಮ ನಾಯಕರಾದ @siddaramaiah ಅವರ ಜೊತೆಗೂಡಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಪವಿತ್ರ ಬಕ್ರೀದ್ ನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಈ ಪುಣ್ಯಕಾರ್ಯಕ್ಕೆ ಆಗಮಿಸಿದ್ದ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭ ಕೋರಿದೆ. https://t.co/cBpPLPf6mf
— B Z Zameer Ahmed Khan (@BZZameerAhmedK) July 10, 2022
ಈದ್ಗಾ ಮೈದಾನಕ್ಕೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಜಮೀರ್ ಅವರ ಜೊತೆಯಲ್ಲಿ ಪ್ರಾರ್ಥನೆ ಮಾಡಿದರು. ಈ ಹಿನ್ನೆಲೆಯಲ್ಲಿ ವಿಶೇಷ ಕಾಳಜಿ ವಹಿಸಲಾಗಿತ್ತು. ಭದ್ರತೆಗಾಗಿ ಓರ್ವ ಡಿಸಿಪಿ, ಮೂವರು ಎಸಿಪಿ, 6 ಇನ್ಸ್ಪೆಕ್ಟರ್, 11 ಪಿಎಸ್ಐ, 21ಎಎಸ್ಐ, 500 ಜನ ಕಾನ್ಸ್ಟೇಬಲ್, 100ಕ್ಕೂ ಹೆಚ್ಚಿನ ಸಂಚಾರ ಪೊಲೀಸರು ಭದ್ರತೆ ಒದಗಿಸಿದ್ದರು.
ಇದನ್ನೂ ಓದಿ : Bakrid Qurbani : ಬಕ್ರೀದ್ ಹಬ್ಬದಂದು ನೀವು ಕುರ್ಬಾನಿ ಕೊಡ್ತಿರಾ? ಹಾಗಿದ್ರೆ, ಈ ಸುದ್ದಿ ಓದ್ಲೇಬೇಕು
ಸಿದ್ದು-ಜಮೀರ್ ಟೆಂಪಲ್ ರನ್
ಇಂದು ಚಾಮರಾಜಪೇಟೆಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ, ಪೂಜೆ ಸಲ್ಲಿಸಿದೆ. ನಾಡಿನ ಎಲ್ಲ ಜನರ ಕಷ್ಟ ನಷ್ಟಗಳು ದೂರಾಗಿ, ಸುಖ, ಶಾಂತಿ, ಸಮೃದ್ಧಿ, ಸಹೋದರತ್ವ ಶಾಶ್ವತವಾಗಿ ನೆಲೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ.
— Siddaramaiah (@siddaramaiah) July 10, 2022
ಮಾಜಿ ಸಚಿವರಾದ @BZZameerAhmedK ಅವರು ಈ ವೇಳೆ ನನ್ನೊಂದಿಗಿದ್ದರು. pic.twitter.com/oF53rSDBxV
ಬಕ್ರೀದ್ ಹಬ್ಬದ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪಕ್ಕದಲ್ಲಿರುವ ಮಲೆ ಮಹದೇಶ್ವರ ಸ್ವಾಮಿ (Male Mahadeshwara swamy) ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರ ಜೊತೆ ಜಮೀರ್ ಅಹಮ್ಮದ್ ಖಾನ್, ಪಾಲಿಕೆ ಸದಸ್ಯ ಚಂದ್ರಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.