ಅಪ್ಪು (Appu) ಅಭಿನಯದ ರಾಜಕುಮಾರ & ಜೇಮ್ಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಪ್ರಿಯಾ ಆನಂದ್ (Priya Anand ) ವಿಚಿತ್ರ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ‘ನಾನು ದೇವಮಾನವ ನಿತ್ಯಾನಂದರನ್ನು ಇಷ್ಟಪಡುತ್ತೇನೆ. ಒಂದು ವೇಳೆ ನಾನು ಅವರನ್ನು ಮದುವೆಯಾದರೆ, ನನ್ನ ಹೆಸರನ್ನು ಬದಲಾಯಿಸಬೇಕಿಲ್ಲ. ನಿತ್ಯಾನಂದರಿಗೆ (Nithyanand ) ಜನರನ್ನು ಹೇಗೆ ಆಕರ್ಷಿಸಬೇಕೆಂದು ತಿಳಿದಿದೆ. ಇಷ್ಟು ಜನ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದರೆ ಅವರಲ್ಲಿ ಏನೋ ಇದೆ ಎಂದರ್ಥ’ ಎಂದು ತಿಳಿಸಿದ್ದಾರೆ.
ಅವರು ಈ ಹೇಳಿಕೆ ನೀಡಿ ಒಂದು ವಾರ ಕಳೆದಿದೆ. ಆದರೆ ನಾನು ಹೇಳಿದ್ದು ಕೇವಲ ತಮಾಷೆಗಾಗಿ ಅಷ್ಟೇ. ನಿತ್ಯಾನಂದ ಬಗ್ಗೆ ಮಾಡೋ ಟ್ರೋಲ್ಗಳು, ಮಿಮ್ಸ್ ಹಾಗೂ ಕಾಮಿಡಿ ವಿಡಿಯೋಗಳು ಎಂದರೇ ನನಗೆ ಇಷ್ಟ. ಅವರ ಫನ್ನಿ ಡೈಲಾಗ್ಸ್ ಅಥವಾ ಸ್ಟೇಟ್ ಮೆಂಟ್ಗಳನ್ನು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದಾರೆ. ನಾನು ಮದುವೆ ಆಗ್ತಿನಿ ಎಂದಿದ್ದು ಜಸ್ಟ್ ಕಾಮಿಡಿ.. ಇದ್ದನ್ನು ದೊಡ್ಡದು ಮಾಡೋ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅದರೆ ಅತ್ಯಾಚಾರ ಆರೋಪ ಎದುರಿಸುತ್ತಿರುವ, ಪ್ರಸ್ತುತ ಲ್ಯಾಟಿನ್ ಅಮೆರಿಕ ದೇಶವಾದ ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿ ತನ್ನದೇ ‘ಕೈಲಾಸ’ ಹೆಸರಿನ ದೇಶ ಸ್ಥಾಪಿಸಿ ಚರ್ಚೆಯಲ್ಲಿರುವ ನಿತ್ಯಾನಂದ ಸ್ವಾಮಿ ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ.
ಆದರೆ ಈದೀಗ ಪ್ರಿಯಾ ಆನಂದ್ ನಿತ್ಯಾನಂದನ ಕುರಿತಾಗಿ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ವೈರಲ್ ಆಗಿದೆ.