ಬೆಂಗಳೂರು: (ಜುಲೈ 10) : ಟಿ-20 (T20) ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜೋಸ್ ಬಟ್ಲರ್ (Jos Buttler) ಬಳಗಕ್ಕೆ ಶಾಕ್ ನೀಡಿರುವ ಟೀಂ ಇಂಡಿಯಾ (Team India) ಇಂದು ಅಂತಿಮ ಪಂದ್ಯವನ್ನು ಆಡಲಿದ್ದು, ಟಾಸ್ (Toss) ಸೋತು ಬೌಲಿಂಗ್ (England won the toss and elected to bat) ಅನ್ನು ಪಡೆದುಕೊಂಡಿದೆ.
England have won the toss and elect to bat first in the third and final T20I.
— BCCI (@BCCI) July 10, 2022
A look at #TeamIndia Playing XI for the game.
Live – https://t.co/BEVTo51IKg #ENGvIND pic.twitter.com/JHHMW1TInu
ಹೌದು, ಇಂಗ್ಲೆಂಡ್‌ನ ನ್ಯಾಟಿಂಗ್‌ಹ್ಯಾಮ್‌ನ (Nottingham) ಟ್ರೆಂಟ್ ಬ್ರಿಡ್ಜ್‌ನಲ್ಲಿ ಅಂತಿಮ ಇಂದು ಹಣಾಹಣಿ ನಡೆಯಲಿದೆ. ಮೊದಲ ಪಂದ್ಯದಲ್ಲಿ 50 ರನ್ ಹಾಗೂ ಎರಡನೇ ಪಂದ್ಯದಲ್ಲಿ 49 ರನ್ ಗಳಿಂದ ಇಂಗ್ಲೆಂಡ್ (England) ಅನ್ನ ಭಾರತ (India) ಮಣಿಸಿ, ಈಗ ಮೂರನೇ ಪಂದ್ಯದಲ್ಲೂ ಗೆಲ್ಲುವ ಭರವಸೆಯೊಂದಿಗೆ ಕಣಕ್ಕಿಳಿಯುತ್ತಿದೆ.
ಕ್ಲೀನ್‌ಸ್ವೀಪ್‌ನತ್ತ ಭಾರತ ಕಣ್ಣು
ಟೀಮ್ ಇಂಡಿಯಾ (Team India) ಮತ್ತು ಇಂಗ್ಲೆಂಡ್ (England) ನಡುವಿನ ಇಂದಿನ ಕದನ ಪ್ರತಿಷ್ಠೆಯ ಪಂದ್ಯವಾಗಲಿದೆ. ನಾಟಿಂಗ್‌ಹ್ಯಾಂನಲ್ಲಿ (Nottingham) ನಡೆಯುವ ಪಂದ್ಯದಲ್ಲೂ ಗೆಲ್ಲುವ ಕನಸಿನಲ್ಲಿ ಟೀಮ್ ಇಂಡಿಯಾ (Team India) ಇದೆ. ಮೊದಲ ಎರಡು ಟಿ-20 ಪಂದ್ಯಗಳನ್ನು ಗೆದ್ದಿರುವ ಭಾರತ (India), ಇಂಗ್ಲೆಂಡ್ (England) ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಕನಸಿನಲ್ಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಈಗಾಗಲೇ ಟಿ-20 ಸರಣಿಗಳಲ್ಲಿ ನ್ಯೂಜಿಲೆಂಡ್, ವೆಸ್ಟ್ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು.
ಪಾಂಟಿಂಗ್ ದಾಖಲೆಗೆ ಅಪಾಯ
ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾದ ಮೇಲೆ ಮುಂಬೈಕರ್ ರೋಹಿತ್ ಶರ್ಮಾ (Rohit Sharma) ಅವರು, ಸೋಲು ಕಾಣದೆ ಮುನ್ನಡೆಯುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಇಂದಿನ ಟಿ-20 ಪಂದ್ಯದ ಗೆಲುವಿನೊಂದಿಗೆ ರೋಹಿತ್ ನಾಯಕನಾದ ಮೇಲೆ ಚುಟುಕು ಕ್ರಿಕೆಟ್‌ನಲ್ಲಿ ಸತತ 14 ಪಂದ್ಯಗಳನ್ನು ಗೆದ್ದಿದ್ದಾರೆ.
ಇದೀಗ ರೋಹಿತ್ ಶರ್ಮಾ (Rohit Sharma) ಮುಂದೆ ಅಪರೂಪದ ವಿಶ್ವದಾಖಲೆಯಿದೆ. ಟೆಸ್ಟ್, ಏಕದಿನ ಮತ್ತು ಟಿ-20 ಸೇರಿ ರೋಹಿತ್ ಶರ್ಮಾ (Rohit Sharma) ಈಗ ಸತತ 19 ಗೆಲುವು ದಾಖಲಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಸತತ 20 ಗೆಲುವುಗಳನ್ನು ದಾಖಲಿಸಿ ಮುನ್ನಡೆಯಲ್ಲಿದ್ದಾರೆ.
ಭಾರತ ಪ್ಲೇಯಿಂಗ್ XI :
3RD T20I. India XI: R Sharma (c), R Pant (wk), V Kohli, S Yadav, S Iyer, D Karthik, R Jadeja, H Patel, R Bishnoi, A Khan, U Malik. https://t.co/hMsXyHO74G #ENGvIND
— BCCI (@BCCI) July 10, 2022
ರೋಹಿತ್ ಶರ್ಮಾ(Rohit Sharma) (ನಾಯಕ), ರಿಷಬ್ ಪಂತ್(Rishabh Pant) (ವಿ.ಕೀ), ವಿರಾಟ್ ಕೊಹ್ಲಿ(Virat Kohli), ಸೂರ್ಯಕುಮಾರ್ ಯಾದವ್(Suryakumar Yadav), ಶ್ರೇಯಸ್ ಅಯ್ಯರ್(Shreyas Iyer), ದಿನೇಶ್ ಕಾರ್ತಿಕ್(Dinesh Karthik), ರವೀಂದ್ರ ಜಡೇಜಾ(Ravindra Jadeja), ರವಿ ಬಿಷ್ಣೋಯ್(Ravi Bishnoi), ಹರ್ಷಲ್ ಪಟೇಲ್(Harshal Patel), ಉಮ್ರಾನ್ ಮಲಿಕ್(Umran Malik), ಅವೇಶ್ ಖಾನ್(Avesh Khan)
ಇಂಗ್ಲೆಂಡ್ ಪ್ಲೇಯಿಂಗ್ XI :
3RD T20I. England XI: J Buttler (c/wk), J Roy, D Malan, P Salt, L Livingstone, H Brook, M Ali, D Willey, C Jordan, R Gleeson, R Topley. https://t.co/hMsXyHO74G #ENGvIND
— BCCI (@BCCI) July 10, 2022
ಜೋಸ್ ಬಟ್ಲರ್(Jos Buttler) (ನಾಯಕ), ಜೇಸನ್ ರಾಯ್(Jason Roy), ಫಿಲ್ ಸಾಲ್ಟ್(Phil Salt), ಮೊಯಿನ್ ಅಲಿ(Moeen Ali), ಡೇವಿಡ್ ಮಲನ್(Dawid Malan), ಹ್ಯಾರಿ ಬ್ರೂಕ್(Harry Brook), ಲಿಯಾಮ್ ಲಿವಿಂಗ್‌ಸ್ಟೋನ್(Liam Livingstone), ಡೇವಿಡ್ ವಿಲ್ಲಿ(David Willy), ಕ್ರಿಸ್ ಜೋರ್ಡಾನ್(Chris Jordan), ರೀಸ್ ಟೋಪ್ಲಿ(Reece Topley), ರಿಚರ್ಡ್ ಗ್ಲೀಸನ್( Richard Gleeson)