ಬೆಂಗಳೂರು: (ಜುಲೈ 10) : ರಾಷ್ಟ್ರಪತಿ ಎಲೆಕ್ಷನ್‌ಗೆ (Presidential Election) ಆಡಳಿತ ಪಕ್ಷ ಬಿಜೆಪಿ (BJP) ಭರ್ಜರಿ ತಯಾರಿ ನಡೆಸುತ್ತಿದ್ದು, ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ (NDA Presidential candidate) ದ್ರೌಪದಿ ಮುರ್ಮು (Draupadi Murmu) ಮತ ಭೇಟೆಗಾಗಿ ಇಂದು ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಭಾನುವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿರುವ ದ್ರೌಪದಿ ಮುರ್ಮು (Draupadi Murmu) ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಈ ಎಲ್ಲದರ ಮಧ್ಯೆ, ದ್ರೌಪದಿ ಮುರ್ಮು (Draupadi Murmu) ದೊಡ್ಡಗೌಡ್ರು (HD Devegowda) ಮನೆಯತ್ತ (Home) ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ: Draupadi Murmu : ಕರುನಾಡಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ದ್ರೌಪದಿ..!

ಬಿಜೆಪಿ ಸಭೆ ಬಳಿಕ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ (HD Devegowda) ನಿವಾಸಕ್ಕೆ ಭೇಟಿ ನೀಡಲು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ತೆರಳಿದ್ದಾರೆ. ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಬೆಂಬಲ ಪಡೆಯುವ ವಿಚಾರ ಸಂಬಂಧ ದೇವೇಗೌಡರನ್ನು ಭೇಟಿಯಾಗುತ್ತಿದ್ದಾರೆ.
ದ್ರೌಪದಿಗೆ ಸಿಎಂ ಬೊಮ್ಮಾಯಿ ಸಾಥ್
ಇನ್ನೂ ದ್ರೌಪದಿ ಮುರ್ಮು (Draupadi Murmu) ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ನಳಿನ್ ಕುಮಾರ್ ಕಟೀಲ್ ಸಹ ಮಾಜಿ ಪ್ರಧಾನಿ ಭೇಟಿಯಾಗಲು ತೆರಳಿದ್ದಾರೆ. ದೇವೇಗೌಡರನ್ನು ಭೇಟಿಯಾದ ಬಳಿಕ ಇಂದೇ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ದೇವೇಗೌಡರ ಪದ್ಮನಾಭ ನಗರ ನಿವಾಸದಿಂದಲೇ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ದ್ರೌಪದಿ ಮುರ್ಮು ಪ್ರಯಾಣಿಸಲಿದ್ದು, ದೆಹಲಿಗೆ ತೆರಳಲಿದ್ದಾರೆ.
ಬಿಜೆಪಿ ಶಾಸಕರು, ಸಂಸದರ ಬೆಂಬಲ

ನಗರದ ಖಾಸಗಿ ಹೋಟೆಲ್ನಲ್ಲಿ ಎನ್‌ಡಿಎ ಮತ್ತು ವಿವಿಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಭಾರತೀಯ ಜನತಾ ಪಕ್ಷದ ಶಾಸಕರ ಹಾಗೂ ಸಂಸದರ ಸಭೆಯಲ್ಲಿ ಭಾಗಿಯಾದರು. ಔಪಚಾರಿಕವಾಗಿ ರಾಜ್ಯ ಬಿಜೆಪಿ ಶಾಸಕರು ಮತ್ತು ಸಂಸದರ ಬೆಂಬಲ ಕೋರಿದ್ದಾರೆ. ಪಕ್ಷ ನೀಡಿದ ಅವಕಾಶ ಸ್ಮರಿಸಿದ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು ಬೆಂಗಳೂರಿನಲ್ಲಿ ಮತ ಯಾಚಿಸಿದರು.
— BJP Karnataka (@BJP4Karnataka) July 10, 2022
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @nalinkateel, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai,
1/2#KarnatakaWelcomesDroupadiMurmu pic.twitter.com/Awo6dGdXFm
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ವಹಿಸಿದ್ದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಕಿಶನ್ ರೆಡ್ಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ , ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ ವಿ ಸದಾನಂದ ಗೌಡ ಮತ್ತು ಇತರರು ಭಾಗವಹಿಸಿದ್ದರು.