ಬೆಂಗಳೂರು: ನಗರದೊಳಗೆ ಪೀಕ್ ಅವರ್ ನಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲ. ಆದ್ರೆ ಬಿಬಿಎಂಪಿ(BBMP) ಮಾತ್ರ ಕಾಮಗಾರಿ ಹೆಸರಿನಲ್ಲಿ ಭಾರಿಗಾತ್ರದ ವಾಹನಗಳನ್ನ ಪೀಕ್ ಅವರ್ ನಲ್ಲಿ ರಸ್ತೆ ಮೇಲೆ ಬಿಟ್ಟ ಪರಿಣಾಮ ಬಿಬಿಎಂಪಿ ಟಿಪ್ಪರ್ ಲಾರಿ( BBMP Tipper Lorry) ಹರಿದು ಮಹಿಳೆ ಸಾವನ್ನಪ್ಪಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ (Byatarayanapura Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ನಾಗರಭಾವಿ(Nagarabavi) ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಯೋಗೇಂದ್ರ ತನ್ನ ಪತ್ನಿ ವಿಜಯಕಲಾ ಜೊತೆ ಬೈಕ್ ನಲ್ಲಿ ಹೋಗ್ತಿದ್ದರು. ಈ ವೇಳೆ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ವಿಜಯಕಲ ಕೆಳಗೆ ಬಿದ್ದಿದ್ದಾರೆ. ಆಗ ವಿಜಯಕಲಾ ಮೇಲೆ ಟಿಪ್ಪರ್ ಹರಿದ ಪರಿಣಾಮ ವಿಜಯಕಲಾಗೆ ಗಂಭೀರ ಗಾಯವಾಗಿತ್ತು. ಕೂಡಲೇ ವಿಜಯಕಲಾಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಗದೇ ವಿಜಯಕಲಾ ಸಾವನ್ನಪ್ಪಿದ್ದಾರೆ.
ಬೈಕ್ ಸವಾರ ಯೋಗೆಂದ್ರಗೂ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬ್ಯಾಟರಾಯನಪುರ ಸಂಚಾರ ಪೊಲೀಸರು (Byatarayanapura Police) ತನಿಖೆ ನಡೆಸುತ್ತಿದ್ದಾರೆ.