ಶಿವನ ವೇಶ ಧರಿಸಿ(Dressed as Lord Shiva) ಇಲ್ಲೋಬ್ಬ ವ್ಯಕ್ತಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನೆಡಿಸಿದ್ದಾರೆ. ಬೀದಿನಾಟಕದ ಮೂಲಕ ಪ್ರತಿಭಟನೆ ಆರಂಭಿಸಿದ್ದು, ಇವರು ಅಸ್ಸಾಂನ(Assam) ನಾಗಾಂವ್ನನವರು ಬಿರಿಂಚಿ ಬೋರಾರವರು(Birinchi Bora ) ಶಿವನ ವೇಷ ಧರಿಸಿ ಮಹಿಳಾ ಸಹ ಜೊತೆಗಾರ್ತಿಯಾಗಿ ಪರಿಶಿಮಿತಾ ಅವರು ಪಾರ್ವತಿ ವೇಷ ಧರಿಸಿ ಸಮಾರಂಭದಲ್ಲಿ ಭಗವಾನ್ ಶಿವನ ವೇಷವನ್ನು ಇವರು ಧರಿಸಿದ್ದರು.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..
ಹೌದು ಇತ್ತೀಚಿಗೆ ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ಅವರ ಸಾಕ್ಷ್ಯಚಿತ್ರದ ‘ ಸಿಗರೇಟ್ ಸೇದುವ ಕಾಳಿ’ ಪೋಸ್ಟರ್ ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗತ್ತು, ಈ ಬೆನ್ನಲ್ಲೇ ಪುರುಷ ಮತ್ತು ಮಹಿಳೆಯೊಬ್ಬರು ಶಿವ ಮತ್ತು ಪಾರ್ವತಿ ದೇವಿ ವೇಷಧರಿಸಿ ಪ್ರತಿಭಟನೆ ನಡೆಸುತ್ತಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ ಏನಿದೆ?
ಶಿವನ ವೇಷ ಧರಿಸಿದ ಬಿರಿಂಚಿ ಬೋರಾ ಮತ್ತು ಪರ್ವತಿ ವೇಷ ಧರಿಸಿದ ಸಹ ನಟಿ ಪರಿಶಿಮಿತಾ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುತ್ತಾರೆ. ಇಬ್ಬರೂ ಬೈಕ್‌ನಲ್ಲಿ ನಾಗಾವ್‌ನ ಕಾಲೇಜು ಚೌಕ್‌ಗೆ ಆಗಮಿಸಿದಾಗ, ಇಂಧನ ಖಾಲಿಯಾದ ಕಾರಣ ದ್ವಿಚಕ್ರ ವಾಹನ ನಿಂತುಕೊಳ್ಳುತ್ತದೆ. ಈ ವೇಳೆ ಶಿವ ಪರ್ವತಿ ನಡುವೆ ವಾಗ್ವಾದ ಶುರುವಾಗುತ್ತದೆ.
ಅಲ್ಲಿ ಶಿವನ ಪಾತ್ರಧಾರಿ ದೇಶದಲ್ಲಿ ಹೆಚ್ಚಾಗುತ್ತಿರುವ ಇಂಧನ ದರ ಮತ್ತಿತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ನರೇಂದ್ರ ಮೋದಿ ಸರ್ಕಾರವನ್ನು (Narendra Modi government ) ಟೀಕಿಸಲು ಪ್ರಾರಂಭಿಸುತ್ತಾನೆ. ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಕೂಗಾಡುತ್ತರೆ
ಈ ವಿಡಿಯೋ ಇದೀಗ ಬಿಜೆಪಿ ಬೆಂಬಲಿಗರು, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಶಿವನ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದನ್ನು ವಿಶ್ವ ಹಿಂದೂ ಪರಿಷತ್ (Vishwa Hindu Parishad) ಮತ್ತು ಬಜರಂಗದಳ(Bajrang Dal) ಖಂಡಿಸಿವೆ. ಶಿವನ ವೇಷ ಧರಿಸಿದ್ದಕ್ಕೆ ಬಿರಿಂಚಿ ಬೋರಾ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರು. ಶಿವನ ವೇಷಧಾರಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ದೂರು ಕೊಟ್ಟ ಬೆನ್ನಲ್ಲೆ ಬಿರಿಂಚಿ ಬೋರಾನನ್ನು ಬಂಧಿಸಿ ನಾಗಾನ್ ಸದರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುದೆ8.
ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ ವಿರೋಧ ಪ್ರತಿಭಟನೆ ನೆಡಿಸಿರುವ ಘಟನೆ ಶನಿವಾರ ನಡೆದಿದ್ದು, ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಶಿವನ ವೇಷ ಧರಿಸಿ ಬಂದಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.
ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಬೇಕು. ಎಂದು ಶಿವನ ವೇಷಧಾರಿಯಾಗಿದ್ದ ಬಿರಿಂಚಿ ಬೋರಾ ಮನವಿ ಮಾಡಿದರು.
ಇದೇ ವೇಳೆ ಆರೋಪಿಗೆ ಜಾಮೀನು ಸಿಕ್ಕಿದು, ಆತನಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ” ಎಂದು ಎಸ್‌ಪಿ ನಾಗಾಂವ್, ಲೀನಾ ಡೋಲಿ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.