ಉತ್ತರಪ್ರದೇಶ : (ಜುಲೈ 9) : ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ (AltNews co-founder) ಮೊಹಮ್ಮದ್ ಜುಬೇರ್ (Mohammed Zubair) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಿಗಾಗಿ, ಜುಲೈ 11 ರಂದು ಜುಬೇರ್ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ಹೌದು, ಲಖಿಂಪುರ ಖೇರಿ ಪೊಲೀಸರಿಂದ (Lakhimpur Kheri Police) ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ (Mohammed Zubair) ವಾರೆಂಟ್ (warrant) ಜಾರಿಯಾಗಿದ್ದು, ಜುಬೇರ್ (Mohammed Zubair) ನ್ಯಾಯಾಲಯಕ್ಕೆ ಹಾಜರಾಗುವಂತೆ ಬುಲಾಬ್ ಬಂದಿದೆ.
ಇದನ್ನೂ ಓದಿ : Bakrid: ಬಕ್ರೀದ್ ಹಬ್ಬ ಹಿನ್ನಲೆ- ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮಕ್ಕೆ ಸೂಚನೆ

ಇಲ್ಲಿನ ಸೀತಾಪುರದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ಟ್ ನ್ಯೂಸ್ ಸಹಸ ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammed Zubair) ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಆದರೆ, ಇದೀಗ ಲಖೀಂಪುರ ಖೇರಿ ಪೊಲೀಸರು ವರ್ಷದ ಹಿಂದೆ ದಾಖಲಿಸಿದ್ದ 153 ಎ ಪ್ರಕರಣದಲ್ಲಿ ಮೊಹಮ್ಮದ್ ಜುಬೇರ್‌ಗೆ (Mohammed Zubair) ವಾರೆಂಟ್ ಜಾರಿಗೊಳಿಸಿದ್ದಾರೆ.
ಸುದರ್ಶನ್ ನ್ಯೂಸ್ ಚಾನಲ್‌ನ ಜಿಲ್ಲಾ ವರದಿಗಾರ, ಲಖಿಂಪುರ ಖೇರಿ ಜಿಲ್ಲೆಯ ಮೊಹಮ್ಮದಿ ಮೂಲದ ಆಶಿಶ್ ಕುಮಾರ್ ಕಟಿಯಾರ್ ಅವರು 2021 ರಲ್ಲಿ ಆಲ್ಟ್ ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೇರ್ (Mohammed Zubair) ವಿರುದ್ಧ ಮೊಹಮ್ಮದಿ ಪೊಲೀಸ್ ಠಾಣೆ ಮತ್ತು ಲಖಿಂಪುರ ಖೇರಿ ಎಸ್‌ಪಿಗೆ ದೂರು ನೀಡುವ ಮೂಲಕ ಪ್ರಕರಣ ದಾಖಲಿಸಿದ್ದರು.
ಸುದರ್ಶನ್ ನ್ಯೂಸ್ ಚಾನಲ್‌ನಲ್ಲಿ ಪ್ರಸಾರವಾದ ಸುದ್ದಿಯೊಂದಕ್ಕೆ ಮೊಹಮ್ಮದ್ ಜುಬೇರ್ (Mohammed Zubair) ಗ್ರಾಫಿಕ್ಸ್ ಮೂಲಕ ವದಂತಿಗಳನ್ನು ಹರಡಿ ದೇಶದ ವಾತಾವರಣವನ್ನು ಹಾಳು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಮೊಹಮ್ಮದಿಯಲ್ಲಿ ದಾಖಲಾದ ಪ್ರಕರಣದಲ್ಲಿ ಮೊಹಮ್ಮದ್ ಜುಬೇರ್‌ಗೆ (Mohammed Zubair) ವಾರಂಟ್ ಬಿ ಜಾರಿ ಮಾಡಲಾಗಿದೆ ಎಂದು ಲಖೀಂಪುರ ಖೇರಿ ಎಸ್ಪಿ ಸಂಜೀವ್ ಸುಮನ್ ತಿಳಿಸಿದ್ದಾರೆ. ಈ ಹಿನ್ನೆಲೆ ಜುಲೈ 11 ರಂದು ಎಸಿಜೆಎಂ ನ್ಯಾಯಾಲಯಕ್ಕೆ ಮೊಹಮ್ಮದ್ ಜುಬೇರ್ (Mohammed Zubair) ಅವರು ಹಾಜರಾಗಬೇಕಿದೆ.