ಹೈದ್ರಾಬಾದ್ : (ಜುಲೈ 9) : ಕಾಶ್ಮೀರಿ ಪಂಡಿತರ (The Kashmir Files) ಕುರಿತು ಹೇಳಿಕೆ ನೀಡಿದ್ದ ಖ್ಯಾತ ನಟಿ (Actress) ಸಾಯಿ ಪಲ್ಲವಿಗೆ (Sai Pallavi) ಬಿಗ್ ಶಾಕ್ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ನಿಂದ ಬುಲಾವ್ ಬಂದಿದೆ.
ಹೌದು, ನಟಿ ಸಾಯಿ ಪಲ್ಲವಿಗೆ (Sai Pallavi) ಕೋರ್ಟ್‌ನಲ್ಲಿ ಹಿನ್ನೆಡೆಯಾಗಿದೆ. ಸಾಯಿ ಪಲ್ಲವಿ ಹೇಳಿಕೆ ಕುರಿತಂತೆ ನೋಟಿಸ್ ರದ್ದು ಮಾಡುವಂತೆ ಕೋರಿ ಸಾಯಿಪಲ್ಲವಿ ತೆಲಂಗಾಣ ಹೈಕೋರ್ಟ್‌ಗೆ (Telangana High Court)ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ತೆಲಂಗಾಣ (High Court) ಕೋರ್ಟ್ ನಿರಾಕರಿಸಿದೆ.
ಇದನ್ನೂ ಓದಿ : Mohammed Zubair : ಆಲ್ಟ್ ನ್ಯೂಸ್ ಸಹ ಸಂಸ್ಥಾಪಕನಿಗೆ ಮತ್ತೊಂದು ಸಂಕಷ್ಟ..!
ಜೂನ್ 21ರೊಳಗೆ ವಿಚಾರಣೆಗೆ ಬನ್ನಿ
ನಟಿ ಸಾಯಿ ಪಲ್ಲವಿ (Sai Pallavi) ಸಂದರ್ಶನವೊಂದರಲ್ಲಿ (Interview) ನೀಡಿದ್ದ ಹೇಳಿಕೆ ವಿರುದ್ಧ ಬಜರಂಗದಳದ ಕಾರ್ಯಕರ್ತ ಅಖಿಲ್ ನಟಿಯ ವಿರುದ್ಧ ದೂರು ನೀಡಿದ್ದರು. ಕಾನೂನು ಸಲಹೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾಯಿ ಪಲ್ಲವಿಗೆ (Sai Pallavi) ಜೂನ್ 21ರ ಒಳಗೆ ಕೋರ್ಟ್ ಮುಂದೆ ಹಾಜರಾಗುವಂತೆ ಕೋರ್ಟ್ ನಿಂದ ನೋಟಿಸ್ ಜಾರಿ ಮಾಡಿದ್ದಾರೆ.
ನಟಿ ಸಾಯಿಪಲ್ಲವಿಗೆ ಭಾರೀ ಹಿನ್ನೆಡೆ!
ಈ ಸಂಬಂಧ ಪ್ರಕರಣ (ಕೇಸ್) ರದ್ದುಗೊಳಿಸುವಂತೆ ಕೋರಿ ಸಾಯಿ ಪಲ್ಲವಿ (Sai Pallavi) ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನಟಿ ಸಾಯಿ ಪಲ್ಲವಿಯ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ಜಡ್ಜ್ ಲಲಿತಾ (Justice Kanneganti Lalitha) ವಜಾಗೊಳಿಸಿದ್ದಾರೆ. ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದಾರೆ.
ಸಾಯಿ ಪಲ್ಲವಿ ಹೇಳಿದ್ದಾದ್ರೂ ಏನು?
ನಟಿ ಸಾಯಿಪಲ್ಲವಿ (Sai Pallavi) ಅಭಿನಯದ ವಿರಾಟ ಪರ್ವ ಚಿತ್ರದ ಬಿಡುಗಡೆ ವೇಳೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಆಗ ಅವರು ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಕಾಶ್ಮೀರಿ ಪಂಡಿತರನ್ನು ಕೊಲ್ಲುವುದನ್ನು ಖಂಡಿಸುತ್ತಾರೆ. ಗೋ ಕಳ್ಳರ ಮೇಲಿನ ನಡೆಯುತ್ತಿರು ಹಲ್ಲೆ ಮತ್ತು ಹತ್ಯೆಯನ್ನು ಏಕೆ ಖಂಡಿಸುವುದಿಲ್ಲ. ನಾವು ಮೊದಲು ಮನುಷ್ಯರಾಗಬೇಕು. ಯಾರಿಗೂ ನೋವು ಮಾಡಬಾರದು ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದಿದ್ದರು. ಕಾಶ್ಮೀರಿ ಪಂಡಿತರ ನರಮೇಧವನ್ನು ಗೋ ಕಳ್ಳರ ಮೇಲಿನ ದಾಳಿಗೆ ಹೋಲಿಸಿದ್ದರಿಂದ ಸಾಯಿಪಲ್ಲವಿ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು.