ಶ್ರೀಲಂಕಾ : (ಜುಲೈ 9) : ಆರ್ಥಿಕ ಸಂಕಷ್ಟಕ್ಕೊಳಗಾಗಿ (Economic crisis) ಸಂಪೂರ್ಣ ತತ್ತರಿಸಿರುವ ಶ್ರೀಲಂಕಾದಲ್ಲಿ (Sri Lanka) ಸರ್ಕಾರದ (government) ವಿರುದ್ಧ ನಾಗರಿಕರ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಗೋತಬಯ ರಾಜಪಕ್ಸ (Gotabaya Rajapaksa) ಅವರು ಇದೀಗ ಪಲಾಯನ ಮಾಡಿದ್ದಾರೆ.
ಹೌದು, ನೆರೆಯ ಶ್ರೀಲಂಕಾ ದೇಶದಲ್ಲಿ ನಾಗರಿಕರ ಪ್ರತಿಭಟನೆ ಮತ್ತುಷ್ಟು ಜೋರಾಗಿದ್ದು, ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ (Gotabaya Rajapaksa) ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಗೋತಬಯ ರಾಜಪಕ್ಸ (Gotabaya Rajapaksa)ಅವರು ತಮ್ಮ ಅಧಿಕೃತ ನಿವಾಸದಿಂದ ಎಸ್ಕೇಪ್ ಆಗಿದ್ದಾರೆ ಎಂದು ವರದಿಯಾಗಿದೆ.
Happening now #July9th massive protest in Colombo Sri Lanka, demanding President Gotabaya Rajapaksa to step down.#LKA #SriLanka #EconomicCrisisLK #SriLankaCrisis pic.twitter.com/RQpn7KPke6
— Sri Lanka Tweet 🇱🇰 💉 (@SriLankaTweet) July 9, 2022
ಇದನ್ನೂ ಓದಿ: Mohammed Zubair : ಆಲ್ಟ್ ನ್ಯೂಸ್ ಸಹ ಸಂಸ್ಥಾಪಕನಿಗೆ ಮತ್ತೊಂದು ಸಂಕಷ್ಟ..!
ಗೋತಬಯ ರಾಜಪಕ್ಸ (Gotabaya Rajapaksa) ನಿವಾಸದ ಸುತ್ತಲೂ ಸುತ್ತುವರೆದಿರುವ ಪ್ರತಿಭಟನಾಕಾರರು (Protestors) ಅವರ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಅಧ್ಯಕ್ಷ ಗೋತಬಯ (Gotabaya Rajapaksa) ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ. ಇದು ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ.
ರಾಜಪಕ್ಸೆ ರಾಜೀನಾಮೆಗೆ ಆಗ್ರಹ

ಅಧ್ಯಕ್ಷರ ನಿವಾಸದ ಎದುರು ಹಾಕಲಾಗಿದ್ದ ಬ್ಯಾರಿಕೇಡ್ ಮುರಿದು ಒಳ ನುಗ್ಗಿರುವ ಪ್ರತಿಭಟನಾಕಾರರು (Protestors), ಗೋತಬಯ ರಾಜಪಕ್ಸ ಅವರ ನಿವಾಸ ಸಂಪೂರ್ಣವಾಗಿ ಹಿಡಿತಕ್ಕೆ ಪಡೆದುಕೊಂಡಿದ್ದಾರೆ. ಆದ್ರೆ, ಯಾವುದೇ ರೀತಿಯ ಹಾನಿ ಉಂಟು ಮಾಡಿಲ್ಲ ಎಂದು ತಿಳಿದುಬಂದಿದೆ. ಪ್ರತಿಭಟನಾಕಾರರು ರಾಜಪಕ್ಸೆ (Gotabaya Rajapaksa) ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
ಪ್ರತಿಭಟನಾಕಾರರ ಮೇಲೆ ಫೈರಿಂಗ್

ತೀವ್ರ ಆರ್ಥಿಕ (Economic Crisis) ಸಂಕಷ್ಟಕ್ಕೊಳಗಾಗಿರುವ ಶ್ರೀಲಂಕಾದಲ್ಲಿ ಅಗತ್ಯ ಸಾಮಗ್ರಿ ಖರೀದಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದಲೇ ಕೊಲಂಬೊದಲ್ಲಿರುವ ಅಧ್ಯಕ್ಷರ (Gotabaya Rajapaksa) ನಿವಾಸದಲ್ಲಿ ಬಳಿ ಪ್ರತಿಭಟನೆ ಜೋರಾಗಿದೆ. ಅಧ್ಯಕ್ಷರ (Gotabaya Rajapaksa)ನಿವಾಸದ ಬಳಿ ಭದ್ರತೆಗೆ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನೂ ಪ್ರತಿಭಟನಾಕಾರರು ಏರಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆಯಲು ಸೈನಿಕರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿದ್ದಾರೆ.
ಈಜುಕೊಳ, ಕೋಣೆಗಳಿಗೆ ಪ್ರವೇಶ
Larger than Saruman’s army! #Gohomegota pic.twitter.com/7BPwGwJYkX
— Dilshan Kottegoda (@KoDilshan) July 9, 2022
ಪ್ರತಿಭಟನಾಕಾರರು ಗೋತಬಯ ರಾಜಪಕ್ಸ (Gotabaya Rajapaksa) ನಿವಾಸದೊಳಗೆ ನುಗ್ಗಿದ್ದಾರೆ. ಅಷ್ಟೇ ಅಲ್ಲ ಅವರ ಐಶಾರಾಮಿ ಮನೆಯೊಳಗಿರುವ ಈಜುಕೊಳ, ಕೋಣೆಗಳಿಗೆ ಪ್ರವೇಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋತಬಯ ರಾಜಪಕ್ಸ (Gotabaya Rajapaksa) ರಾಜೀನಾಮೆಗೆ ಒತ್ತಾಯಿಸಿ ಶನಿವಾರ ಲಕ್ಷಾಂತರ ನಾಗರಿಕರು ಬೀದಿಗಿಳಿದಿದ್ದು, ಸಾಕಷ್ಟು ಕಡೆ ಹಿಂಸಾಚಾರ ನಡೆಯುತ್ತಿದೆ.
Protestors taking a dip in the pool at President’s House. pic.twitter.com/7iUUlOcP6Z
— DailyMirror (@Dailymirror_SL) July 9, 2022