ನವದೆಹಲಿ: (ಜುಲೈ 9) : ದೇಶದಲ್ಲಿ ಪದೇ ಪದೆ ಏರಿಕೆಯಾಗುತ್ತಿರುವ ಎಲ್‌ಪಿಜಿ (LPG), ಇಂಧನ ಬೆಲೆ (Petrol) ಏರಿಕೆ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೌದು, ಸದಾ ಒಂದಿಲ್ಲೊಂದು ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ (Central Government) ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi), ಇದೀಗ ಮತ್ತೊಂದು ಟ್ವೀಟ್ ಮಾಡಿದ್ದಾರೆ.
प्रधानमंत्री ने कहा- 133 करोड़ भारतीय हर बाधा से कह रहे हैं, दम है तो हमें रोको।
— Rahul Gandhi (@RahulGandhi) July 9, 2022
भाजपा राज में, LPG कीमतें 157% बढ़ीं, रिकॉर्ड-तोड़ महंगा पेट्रोल, Gabbar Tax की लूट और बेरोज़गारी की Tsunami आयी।
असल में जनता PM से कह रही है- आपकी बनायी इन बाधाओं ने दम निकाल दिया है, अब रुक जाओ।
ದೇಶದಲ್ಲಿ ನಿರಂತರವಾಗಿ ಅಡುಗೆ ಅನಿಲ ದರ ಏರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ‘ನಿಮಗೆ ತಾಕತ್ತಿದ್ದರೆ, ನಮ್ಮನ್ನು ತಡೆಯಿರಿ ಎಂದು ದೇಶದ 133 ಕೋಟಿ ಭಾರತೀಯರಿಗೆ ಸವಾಲು ಹಾಕುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ (Congress leader Rahul Gandhi) ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Secular Tv Top Stories : ಮೇಘ ಸ್ಫೋಟ, 16 ಮಂದಿ ಸಾವು | ಆಫ್ರಿಕಾದಲ್ಲಿ ಮತ್ತೊಂದು ಹೊಸ ವೈರಸ್..!
ಪ್ರಧಾನಿ ಮೋದಿ ಹೇಳಿಕೆಗೆ ವ್ಯಂಗ್ಯ
ಬಿಜೆಪಿ ಆಡಳಿತದಲ್ಲಿ ಎಲ್‌ಪಿಜಿ (LPG) ದರ ಶೇ.157ರಷ್ಟು ಏರಿಕೆಯಾಗಿದೆ. ಇಂಧನದ ಬೆಲೆ ಗಗನಕ್ಕೇರಿದ್ದು, ಗಬ್ಬರ್ ಟ್ಯಾಕ್ಸ್ ಲೂಟಿ (Gabbar Tax loot) ಮತ್ತು ನಿರುದ್ಯೋಗ ಸುನಾಮಿ (Tsunami of unemployment) ಉಂಟಾಗಿದೆ. ಇದನ್ನೆಲ್ಲ 133 ಕೋಟಿ ಭಾರತೀಯರು ತಡೆಯಿರಿ ಎಂದು ಪ್ರಧಾನಿ ಸವಾಲು ಹಾಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ (Congress leader Rahul Gandhi) ಅವರು ಪ್ರಧಾನಿ ಮೋದಿ (PM Narendra Modi) ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯಿಂದ ದೇಶದ ಆರ್ಥಿಕತೆ ಹಾಳು
Headlines Economy
— Rahul Gandhi (@RahulGandhi) July 6, 2022
Managed Mismanaged pic.twitter.com/mF9SHvrDCz
ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ (Central Government) ಎಲ್‌ಪಿಜಿ ಬೆಲೆಯಲ್ಲಿ 50 ರೂ. ಏರಿಕೆ ಮಾಡಿತ್ತು. ಇದೇ ವಿಷಯವನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ (Congress leader Rahul Gandhi), ಕೇಂದ್ರ ಬಿಜೆಪಿ (BJP Government) ಕೇವಲ ಮುಖ್ಯಾಂಶ ನಿರ್ವಹಿಸುತ್ತಿದೆ. ಆರ್ಥಿಕತೆ ಬಗ್ಗೆ ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ. ದೇಶದ ಆರ್ಥಿಕತೆ ಹಾಳು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದರು.