ಮೇಘ ಸ್ಫೋಟ, 13 ಮಂದಿ ಸಾವು

ಜಮ್ಮು ಕಾಶ್ಮೀರದ (Jammu and Kashmir) ಅಮರನಾಥ (Amarnath) ಬಳಿಯ ಪವಿತ್ರವಾದ ಗುಹೆಯೊಂದರ ಬಳಿ ಸಂಭವಿಸಿದ್ದ ಮೇಘ ಸ್ಫೋಟದಲ್ಲಿ (Amarnath Yatra cloudburst) 16 (16 Die in Amarnath Tragedy) ಮಂದಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ 48ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು (Poilice) ಮಾಹಿತಿ ನೀಡಿದ್ದಾರೆ. ಇನ್ನು ಗಾಯಾಳುಗಳಿಗೆ ಗುಹೆಯ ಅಕ್ಕ-ಪಕ್ಕದಲ್ಲೇ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಟ್ಟು 6 ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಗಾಯಾಳುಗಳು ಒಬ್ಬೊಬ್ಬರಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು (Docters) ಮಾಹಿತಿ ನೀಡಿದ್ದಾರೆ.
ಐದು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ರಾಜ್ಯದಲ್ಲಿ ಮಹಾ ಮಳೆ ಮುಂದುವರಿದಿದ್ದು, ಇಂದು ಐದು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅತಿ ಹೆಚ್ಚು ಮಳೆಯಾಗುತ್ತಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದೂ ಸಹ ರಜೆ ಮುಂದುವರಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಮೂರು ದಿನ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಉತ್ತರ ಕನ್ನಡ ಮತ್ತು ಕೊಡುಗು ಜಿಲ್ಲೆಗಳಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಆಫ್ರಿಕಾದಲ್ಲಿ ಮತ್ತೊಂದು ಹೊಸ ವೈರಸ್!

ಕೋವಿಡ್ ವೈರಸ್‌ನಿಂದ ಜಗತ್ತು ತತ್ತರಿಸುತ್ತಿದೆ. ಈ ಬೆನ್ನಲ್ಲೇ ಹೊಸ ವೈರಸ್ ಕಾಣಿಸಿಕೊಂಡಿದೆ. ಹೌದು, ಆಫ್ರಿಕಾದಲ್ಲಿ ‘ಮಾರ್ಬರ್ಗ್’ ಎಂಬ ವೈರಸ್ ಕಾಣಿಸಿಕೊಂಡು ತಲ್ಲಣ ಸೃಷ್ಟಿಸುತ್ತಿದೆ. ಘಾನಾದಲ್ಲಿ ಇತ್ತೀಚೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ಎಚ್ಚೆತ್ತ ವಿಶ್ವ ಆರೋಗ್ಯ ಸಂಸ್ಥೆ 34 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಆದೇಶಿಸಿದೆ. (WHO) ಡಬ್ಲ್ಯೂಎಚ್ಓ ಪ್ರಕಾರ ಎಬೋಲಾ ಕುಟುಂಬಕ್ಕೆ ಸೇರಿದ ಮಾರ್ಬರ್ಗ್ ವೈರಸ್ ಶೇ.88ರಷ್ಟು ಮಾರಕವಾಗಿದ್ದು, ಮುಖ್ಯವಾಗಿ ಬಾವಲಿಗಳಿಂದ ಮನುಷ್ಯರಿಗೆ ಹರಡಲಿದೆ.
ಶಿಂಜೋ ಅಬೆ ಗೌರವಾರ್ಥ ಶೋಕಾಚರಣೆ

ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನರಾಗಿದ್ದಾರೆ. ಭಾರತದೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಅಬೆ ಅವರಿಗೆ ಗೌರವ ಸೂಚಿಸಲು ಇಂದು ರಾಷ್ಟ್ರೀಯ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಶಿಂಜೋಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಜಪಾನ್ ಭೇಟಿ ವೇಳೆ ಶಿಂಜೋ ಅಬೆ ಅವರನ್ನು ಮತ್ತೊಮ್ಮೆ ಭೇಟಿಯಾಗಿ, ಚರ್ಚೆ ನಡೆಸಲು ಅವಕಾಶ ಸಿಕ್ಕಿತ್ತು. ಅದು ನಮ್ಮ ಕೊನೆಯ ಸಭೆ ಎಂದು ನಾನು ಭಾವಿಸಿರಲಿಲ್ಲ. ಅವರು ಬುದ್ಧಿವಂತ ವ್ಯಕ್ತಿ’ ಎಂದು ಟ್ವಿಟ್ ಮಾಡಿದ್ದಾರೆ. ಅಲ್ಲದೇ, ಶಿಂಜೋ ಅವರಿಗೆ ಗೌರವ ಸಂಕೇತವಾಗಿ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ.
ಟ್ವಿಟರ್ ಖರೀದಿ ಒಪ್ಪಂದ ರದ್ದು!

ಖ್ಯಾತ ಉದ್ಯಮಿ ಎಲಾನ್ ಮಸ್ಕ್ ದೃಢ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಟ್ವಿಟರ್ ಖರೀದಿಸುವ ಒಪ್ಪಂದವನ್ನು ಕೈಬಿಟ್ಟಿದ್ದಾರೆ. ಟ್ವಿಟರ್ ಸಂಸ್ಥೆಯು ಖರೀದಿ ಒಪ್ಪಂದವನ್ನು ಉಲ್ಲಂಘಿಸಿದೆ. ಅಲ್ಲದೆ ಕೇಳಿದ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಈ ಕಾರಣದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟೆಸ್ಲಾ ಸಂಸ್ಥೆಯು ಟ್ವಿಟರ್‌ಗೆ ಪತ್ರ ಬರೆದಿದೆ. ಮಸ್ತ್ ಒಟ್ಟು 44 ಬಿಲಿಯನ್ ಡಾಲರ್‌ಗಳಿಗೆ ಟ್ವಿಟ್ಟರ್ ಅನ್ನು ಖರೀದಿಸುವುದಾಗಿ ಕಳೆದ ಏಪ್ರಿಲ್‌ನಲ್ಲಿ ಘೋಷಿಸಿದ್ದರು.
ಪ್ರಧಾನಿ ಹುದ್ದೆಗೆ ಸ್ಪರ್ಧೆ ಘೋಷಿಸಿದ ಸುನಾಕ್!

ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತೀಯ ಮೂಲದ ರಿಷಿ ಸುನಾಕ್ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬರುತ್ತಿದೆ. ಈಗ ಸ್ವತಃ ರಿಷಿ ಸುನಾಕ್ ‘ನಾನು ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕ ಮತ್ತು ನಿಮ್ಮ ಪ್ರಧಾನಿಯಾಗಲು ಇಚ್ಛಿಸಿದ್ದೇನೆ’ ಎಂದು ರಿಷಿ ಸುನಾಕ್ ಪ್ರಕಟಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ನಂಬಿಕೆಯನ್ನು ಮರುಸ್ಥಾಪಿಸೋಣ, ಆರ್ಥಿಕತೆಯನ್ನು ಪುನರ್ ನಿರ್ಮಿಸೋಣ ಮತ್ತು ದೇಶವನ್ನು ಮತ್ತೆ ಒಗ್ಗೂಡಿಸೋಣ ಎಂದು ಹೇಳಿದ್ದಾರೆ.
2023ರ ಚುನಾವಣೆ ನನ್ನ ಕೊನೆಯ ಚುನಾವಣೆ

ರಾಜಕೀಯ ನಿವೃತ್ತಿ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಹತ್ವ ಹೇಳಿಕೆ ನೀಡಿದ್ದಾರೆ. 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿದೆ. ಬಳಿಕ ರಾಜಕೀಯ ನಿವೃತ್ತ ಹೊಂದಿ, ಬೇರೆಯವರಿಗೆ ಅವಕಾಶ ನೀಡುತ್ತೇನೆ ಎಂದು ವಿಪಕ್ಷ ನಾಯಕ ಘೋಷಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಆಗಸ್ಟ್ 3ರಂದು ನಡೆಯುವ ಸಿದ್ದರಾಮೋತ್ಸವಕ್ಕೆ ಎಲ್ಲರೂ ಬರಬೇಕು ಎಂದು ಆಹ್ವಾನ ನೀಡಿದ್ದಾರೆ.
ಜುಲೈ 30ರಂದು ಡಿಕೆಶಿ ಹಣೆಬರಹ ಡಿಸೈಡ್

ಜುಲೈ 30ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಣೆಬರಹ ಡಿಸೈಡ್ ಆಗಲಿದೆ. ಯಾಕೆಂದರೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿಯವರ ಜಾಮೀನು ಅರ್ಜಿ ವಿಚಾರಣೆಯನ್ನು ಇ.ಡಿ ವಿಶೇಷ ನ್ಯಾಯಾಲಯ ಜುಲೈ 30ಕ್ಕೆ ನಡೆಸಲಿದೆ. ಈ ಹಿಂದೆಯೂ ಡಿಕೆಶಿಗೆ ಜಾಮೀನು ನೀಡಿರುವುದು ದೆಹಲಿ ಹೈಕೋರ್ಟ್ ಹೊರೆತು, ಇ.ಡಿ ವಿಶೇಷ ನ್ಯಾಯಾಲಯವಲ್ಲ. ಸದ್ಯ 30 ರಂದು ಅರ್ಜಿ ವಿಚಾರಣೆ ನಂತರ, ಇ.ಡಿ ವಿಶೇಷ ನ್ಯಾಯಾಲಯ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಡಿಕೆಶಿಯ ಮುಂದಿನ ರಾಜಕೀಯ ಭವಿಷ್ಯ ನಿಂತಿರೋದು ಸುಳ್ಳಲ್ಲ.