ನವದೆಹಲಿ : (ಜುಲೈ 9) : ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಆರೋಗ್ಯದಲ್ಲಿ (Health) ಚೇತರಿಸಿಕೆ (His condition has improved) ಕಂಡು ಬರುತ್ತಿದೆ ಎಂದು ದೆಹಲಿಯ ಏಮ್ಸ್ (AIIMS) ವೈದ್ಯರು ಮಾಹಿತಿ ನೀಡಿದ್ದಾರೆ.
ಹೌದು, ಈ ಬಗ್ಗೆ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಹಿರಿಯ ಪುತ್ರಿ ಮಿಸಾ ಭಾರತಿ (Dr. Misa Bharti) ಮಾಹಿತಿ ನೀಡಿದ್ದಾರೆ. ದೆಹಲಿ ಏಮ್ಸ್ ನಲ್ಲಿ (AIIMS) ದಾಖಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಆರೋಗ್ಯದಲ್ಲಿ (Health) ಚೇತರಿಕೆ ಕಂಡು ಬಂದಿದೆ. ತಂದೆಯ ಆರೋಗ್ಯದ (Health) ಬಗ್ಗೆ ವದಂತಿ ಹರಡದಂತೆ ಮನವಿ ಮಾಡಿಕೊಂಡಿದ್ದಾರೆ.

ಮಿಸಾ ಭಾರತಿಯವರು (Dr. Misa Bharti) ಆಸ್ಪತ್ರೆಯಲ್ಲಿ ಲಾಲು (Lalu Prasad Yadav) ಅವರು ಚೇತರಿಸಿಕೊಳ್ಳುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ತನ್ನ ತಂದೆಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಅವರು ಈಗ ಯಾರೊಬ್ಬರ ಬೆಂಬಲದೊಂದಿಗೆ ಕುಳಿತುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಚಿಂತಿಸಬೇಡಿ, ಅವರು ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲು ಎಲ್ಲರೂ ಪ್ರಾರ್ಥಿಸಿ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ : Saniya Mirza: ಕೊನೆಯ ವಿಂಬಲ್ಡನ್ ನಲ್ಲಿ ಸೋತು ಭಾವನಾತ್ಮಕ ಪೋಸ್ಟ್ ಹಾಕಿದ ಸಾನಿಯಾ ಮಿರ್ಜಾ
ಸಾಮಾನ್ಯ ವಾರ್ಡ್‌ಗೆ ಶೀಫ್ಟ್
ಏಮ್ಸ್ ವೈದ್ಯರ ಪ್ರಕಾರ, ಲಾಲು ಪ್ರಸಾದ್ (Lalu Prasad Yadav) ಹಿಂದಿಗಿಂತ ಇಂದು ಹೆಚ್ಚು ನಿರಾಳರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಐಸಿಯುನಿಂದ ಜನರಲ್ ವಾರ್ಡ್‌ಗೆ ಕರೆತರುವ ಸಾಧ್ಯತೆ ಇದೆ. ಇನ್ನೂ ಲಾಲು ಪ್ರಸಾದ್ ಅವರನ್ನು ಅನೇಕ ರಾಜಕಾರಣಿಗಳು ಭೇಟಿ ಮಾಡಲು ಬಂದಿದ್ದಾರೆ. ಆದ್ರೆ, ವೈದ್ಯರು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
अपने मनोबल और आप सब की दुआओं की बदौलत लालू जी की स्थिति अब काफी बेहतर है। कृपया अफवाहों पर ध्यान ना दें। साथ बनाए रखें, दुआओं में @laluprasadrjd जी को याद रखें।
— Dr. Misa Bharti (@MisaBharti) July 8, 2022
धन्यवाद।
तस्वीरें आज सुबह की: pic.twitter.com/RvcEbqcJRB
ಲಾಲು ಆರೋಗ್ಯದ ಬಗ್ಗೆ ಗಣ್ಯರ ಮಾಹಿತಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲಾಲು ಪ್ರಸಾದ್ (Lalu Prasad Yadav) ಅವರನ್ನು ಪಾಟ್ನಾ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಲಾಲು ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ.