ಬೆಂಗಳೂರು : (ಜುಲೈ 9) : ಮುಸ್ಲಿಂ ಸಮುದಾಯದವರ (ಬಾಂಧವರು) (Muslim Community) ಪ್ರಮುಖವಾದ ಹಬ್ಬಗಳಲ್ಲಿ (Bakrid) ಬಕ್ರೀದ್ ಹಬ್ಬ ಸಹ ಒಂದು. ಬಕ್ರೀದ್ (Bakrid) ದಿನವನ್ನು ತ್ಯಾಗದ (Sacrifice)ದಿನ ಅಂತ ಕರೆಯುತ್ತಾರೆ. ಈ ದಿನದ ಮತ್ತೊಂದು ವಿಶೇಷ ಅಂದ್ರೆ ಮುಸ್ಲಿಂ ಬಾಂಧವರು ಕುರ್ಬಾನಿ (Bakrid Qurbani) ಕೊಡುವುದು.
ಹೌದು, ಈದ್ ನಮಾಜ್ ಬಳಿಕ ನಾಲ್ಕು ಕಾಲುಗಳುಳ್ಳ ಪ್ರಾಣಿಯೊಂದನ್ನು ಬಲಿ ನೀಡಲಾಗುತ್ತದೆ. ಆದ್ರೆ, ಕುರ್ಬಾನಿಗೆ (Bakrid Qurbani) ಪ್ರಾಣಿಗಳನ್ನು ಬಳಸುವಾಗ ಕೆಲವು ಮಾನದಂಡಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಬಕ್ರೀದ್ ಹಬ್ಬದ ದಿನ ಬಲಿ ನೀಡುವ ಪ್ರಾಣಿಗೆ ಯಾವುದೇ ರೀತಿಯಲ್ಲಿ ಗಾಯಗೊಂಡಿರಬಾರದು. ಅಥವಾ ಆ ಪ್ರಾಣಿಯು ಸಾವಿನ ಸ್ಥಿತಿಯಲ್ಲಿರಬಾರದು ಎಂಬ ಇತ್ಯಾದಿ ಮಾನದಂಡಗಳನ್ನು ಅವಶ್ಯಕವಾಗಿ ಕುರ್ಬಾನಿ ನೀಡುವವರು ಪಾಲಿಸಬೇಕಾಗುತ್ತದೆ.

ಕುರ್ಬಾನಿಯ (Bakrid Qurbani) ಬಳಿಕ ದೊರಕುವ ಮಾಂಸದಲ್ಲಿ ಮೂರು ಪಾಲು ಮಾಡಲಾಗುತ್ತದೆ. ಒಂದು ಪಾಲು ಬಡವರಿಗೆ, ಇನ್ನೊಂದು ಸಂಬಂಧಿಕರಿಗೆ ಮತ್ತು ಮೂರನೆಯ ಪಾಲನ್ನು ಸ್ವಂತಕ್ಕಾಗಿ ಎಂದು ವಿಂಗಡಿಸಲಾಗುತ್ತದೆ. ಬಳಿಕ, ಕುರ್ಬಾನಿ (Bakrid Qurbani) ನೀಡಲಾಗುತ್ತದೆ.
ದಾನದ ಮೂಲಕ ಕುರ್ಬಾನಿ ನೀಡುವ ಅವಕಾಶ
ಇನ್ನೂ, ಕುರ್ಬಾನಿ (Bakrid Qurbani) ಮಾಡಲು ಅನುಕೂಲತೆ ಇಲ್ಲದವರು ಏನು ಮಾಡುತ್ತಾರೆ ಗೊತ್ತಾ? ಊರಿನಿಂದ ದೂರವಿರುವರು ಅಥವಾ ಬೇರಾವುದೋ ಕಾರಣದಿಂದ ನೀಡಲು ಸಾಧ್ಯವಾಗದಿರುವವರು ದಾನದ ರೂಪದಲ್ಲಿ ಈ ಕಾರ್ಯಕ್ಕೆ ಸಹಾಯ ಮಾಡುತ್ತಾರೆ. ಇದೇ ಕಾರ್ಯಕ್ಕಾಗಿ ನಿಯೋಜಿಸಿರುವ ಸಂಸ್ಥೆಗಳಿಗೆ ಹಣವನ್ನು ದಾನದ ರೂಪದಲ್ಲಿ ನೀಡುತ್ತಾರೆ.
ಮಸೀದಿ, ಈದ್ಗಾ ಮೈದಾನದಲ್ಲಿ ನಮಾಜ್

ಇನ್ನೂ ಬಕ್ರೀದ್ ಹಬ್ಬದಲ್ಲಿ ಈದ್ ನಮಾಜ್ ಪ್ರಮುಖವಾಗಿದೆ. ಹಬ್ಬದ ದಿನ ಬೆಳಗ್ಗೆ ಊರಿನ ಜನರೆಲ್ಲರೂ ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳುತ್ತಾರೆ. ಈದ್ಗಾ ವ್ಯವಸ್ಥೆ ಇಲ್ಲದ ಊರಿನಲ್ಲಿ ಪ್ರಮುಖ ಮಸೀದಿಗಳಲ್ಲಿಯೇ ಈದ್ ಪ್ರಾರ್ಥನೆಯನ್ನು ಮಾಡುತ್ತಾರೆ. ಮಸೀದಿಯಲ್ಲಿ ಮೊದಲೇ ನಿರ್ಣಯಿಸಿದ ಸಮಯಕ್ಕೆ ಎಲ್ಲರೂ ಸಾಮೂಹಿಕ ಪ್ರಾರ್ಥನೆಗೆ ಒಂದೆಡೆ ಸೇರುತ್ತಾರೆ. ನಮಾಜ್ ಬಳಿಕ ಎಲ್ಲರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.