ನವದೆಹಲಿ : (ಜುಲೈ 9) : ಅಮರನಾಥ (Amarnath) ಗುಹೆ ಬಳಿ ಸಂಭವಿಸಿದ ಭೀಕರ ಮೇಘಸ್ಫೋಟ (Amarnath Yatra Cloudburst) ದೇಶವನ್ನೇ ಬೆಚ್ಚಿಬೀಳಿಸಿದೆ. ಇನ್ನೂ, ಯಾತ್ರೆಗೆಂದು ತೆರಳುತ್ತಿದ್ದ ಸುಮಾರು 15 ಸಾವಿರ ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.

ಹೌದು, ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ (Amarnath Yatra) ವೇಳೆ ಸಂಭವಿಸಿದ ಭೀಕರ ಮೇಘಸ್ಫೋಟದ (Cloudburst) ಪರಿಣಾಮ ಉಂಟಾದ ಹಠಾತ್ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಇನ್ನೂ ಕನಿಷ್ಠ 40 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
J&K | CRPF personnel carries out rescue operation in cloudburst affected area at the lower #Amarnath Cave site
— ANI (@ANI) July 9, 2022
(Source: CRPF) pic.twitter.com/rAx2HUTW6h
ಕೊಚ್ಚಿಹೋದ ಯಾತ್ರಿಕರ ಟೆಂಟುಗಳು
ಭಾರತೀಯ ಸೇನೆ ನೇತೃತ್ವದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಠಾತ್ತನೆ ಸುರಿದ ಭಾರಿ ಮಳೆಯ ಜತೆಗೆ ಉಂಟಾದ ದಿಢೀರ್ ಪ್ರವಾಹ ಅನೇಕ ಜನರನ್ನು ಕೊಚ್ಚಿಕೊಂಡು ಹೋಗಿದೆ. ಅನೇಕ ಟೆಂಟ್‌ಗಳು, ಸಮುದಾಯ ಕಿಚನ್ ನೀರುಪಾಲಾಗಿವೆ.
ಗಾಯಗೊಂಡ 21 ಯಾತ್ರಿಕರ ಸ್ಥಳಾಂತರ
J&K LG Manoj Sinha visits SKIMS Srinagar to enquire about the health of pilgrims who were injured in yesterday's incident of cloudburst in the lower reaches of #Amarnath cave
— TOI Cities (@TOICitiesNews) July 9, 2022
(Photos: ANI) pic.twitter.com/17bzZJFPPG
ಶುಕ್ರವಾರ ಸಂಜೆಯಿಂದ ಪವಿತ್ರ ಗುಹೆ ಸಮೀಪ ಸಿಲುಕಿದ್ದ ಬಹುತೇಕ ಯಾತ್ರಿಕರನ್ನು ಪಂಚತರ್ಣಿಗೆ ಸ್ಥಳಾಂತರಿಸಲಾಗಿದೆ. ಇದು ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಆಗಿದೆ. ಗಾಯಗೊಂಡಿರುವ 21 ಯಾತ್ರಿಕರನ್ನು ಶನಿವಾರ ಬೆಳಿಗ್ಗೆ ಬಲ್ತಾಳ್‌ಗೆ ಸ್ಥಳಾಂತರ ಮಾಡಲಾಗಿದೆ.
16 ಮಂದಿ ಸಾವನ್ನಪ್ಪಿರುವುದು ಖಚಿತ
16 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಎನ್‌ಡಿಆರ್‌ಎಫ್ ಪ್ರಧಾನ ನಿರ್ದೇಶಕ ಅತುಲ್ ಕರ್ವಾಲ್ ತಿಳಿಸಿದ್ದಾರೆ. ಸುಮಾರು 40 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಯಾವುದೇ ಭೂಕುಸಿತ ಉಂಟಾಗಿರುವುದು ವರದಿಯಾಗಿಲ್ಲ. ಆದರೆ ನಿರಂತರ ಮಳೆ ಮುಂದುವರಿದಿದೆ. ಹಾಗಿದ್ದರೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
J&K| We hope govt will say explain what happened & how. Basis on which tents were put up at such a risky place should be investigated. It is 1st time tents were placed there. This can be a human error: J&K National Conference chief Farooq Abdullah on Amarnath cloudburst incident pic.twitter.com/AfXV1GWi9X
— ANI (@ANI) July 9, 2022
100ಕ್ಕೂ ಹೆಚ್ಚು ರಕ್ಷಣಾ ಪರಿಣತರನ್ನು ಒಳಗೊಂಡ ನಾಲ್ಕು ಎನ್‌ಡಿಆರ್‌ಎಫ್ ತಂಡಗಳು ಕೆಲಸ ಮಾಡುತ್ತಿವೆ. ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಸಿಆರ್‌ಪಿಎಫ್ ಮತ್ತು ಇತರರರು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.