Saniya Mirza: (ಜು.8):ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಗ್ರಾಂಡ್ ಸ್ಲಾಮ್ ಟೂರ್ನಿಯಾದ ವಿಂಬಲ್ಡನ್ (wimbledon )ಸೆಮಿ ಫೈನಲ್ ನಲ್ಲಿ ಸೋತು ಟೂರ್ನಿಯಿಂದ ಸೋತು ಹೊರ ಬಿದ್ದಿದ್ದಾರೆ. ವಿಂಬಲ್ಡನ್ ಚಾಂಪಿಯನ್ಶಿಪ್ ನಲ್ಲಿ ಮಿಶ್ರ ಡಬಲ್ಸ್ ಗೆಲ್ಲುವ ಗುರಿಯನ್ನು ಹೊಂದಿದ್ದ ಸಾನಿಯಾಗೆ ಕನಸಾಗೇ ಉಳಿದಿದೆ. ಈ ಕುರಿತು Instagram ನಲ್ಲಿ ಭಾವನಾತ್ಮಕ ಪೋಸ್ಟ್ ಅಂತ ಶೇರ್ ಮಾಡಿಕೊಂಡಿದ್ದಾರೆ.
ಆರು ಬಾರಿ ಗ್ರಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಟೆನ್ನಿಸ್ ತಾರೆಗೆ ಇಂದು ಪ್ರಶಸ್ತಿಯನ್ನ ಗೆಲ್ಲಲು ಸಾಧ್ಯವಾಗಲಿಲ್ಲ. ಡಬ್ಲ್ಯೂ ಟಿ ಎ ಸರ್ಕ್ಯೂಟ್ ನಲ್ಲಿ ಇದು ಕೊನೆಯ ವರ್ಷ ಎಂದು ಸಾನಿಯಾ ಅವರು ಹಿಂದೆ ಘೋಷಣೆ ಮಾಡಿದ್ದರು ಇದೀಗ ಟೂರ್ನಿಯಲ್ಲಿ ಸೋತು ಭಾವುಕರಾಗಿ ವಿದಾಯ ಹೇಳಿದ್ದಾರೆ.

ಪೋಸ್ಟಲ್ಲಿ ಏನಿದೆ?
ಕ್ರೀಡೆ ನಮ್ಮಿಂದ ಬಹಳಷ್ಟು ತೆಗೆದುಕೊಳ್ಳುತ್ತದೆ ಕ್ರೀಡೆಗಳು ನಮ್ಮನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಹಳ ದಣಿವು ಮಾಡುತ್ತದೆ. ಸತತ ಗಂಟೆಗಳ ಪರಿಶ್ರಮ ಮತ್ತು ಸೋಲಿನ ನಂತರ ನಿದ್ರೆ ಇಲ್ಲದ ರಾತ್ರಿಗಳು ಎದುರಾಗುತ್ತದೆ. ಆದರೆ ಇದೆಲ್ಲವೂ ಅನೇಕ ಪ್ರತಿಫಲಗಳನ್ನು ನೀಡಿದೆ.ಕ್ರೀಡೆ ಇಲ್ಲದೆ ಬೇರೆ ಉದ್ಯೋಗವು ಇಷ್ಟು ಸಂತೋಷವನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ ಕ್ರೀಡೆಗೆ ನಾನು ಸದಾ ಚಿರಋಣಿಯಾಗಿರುತ್ತೇನೆ.ಸಂತೋಷ ಮತ್ತು ಹೋರಾಟ ನನ್ನ ಕ್ರೀಡಾ ಜೀವನದ ಭಾಗವಾಗಿದೆ. ಈ ಬಾರಿ ನಾನು ವೀಕ್ಷಕಿಯಾಗಿ ಬಿಟ್ಟಿದೆ ಕಳೆದ 20 ವರ್ಷಗಳಿಂದ ವಿಂಬಲ್ಡನ್ ನಲ್ಲಿ ಆಡುವುದೇ ನನಗೆ ಹೆಮ್ಮೆ ಎನಿಸಿತ್ತು ಎಂದು ಸಾನಿಯಾ ಮಿರ್ಜಾ ಅವರು ಬರೆದುಕೊಂಡಿದ್ದಾರೆ.2009ರಲ್ಲಿ ಆಸ್ಟ್ರೇಲಿಯನ್ ಓಪನ್, 2012ರಲ್ಲಿ ಫ್ರೆಂಚ್ ಓಪನ್ ಮತ್ತು 2014ರಲ್ಲಿ ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
The honour is ours, @MirzaSania💜💚
— Wimbledon (@Wimbledon) July 7, 2022
Wishing the very best to our 2015 Ladies' Doubles champion following her final Wimbledon campaign #Wimbledon | #CentreCourt100 pic.twitter.com/iFUyskhTJq
ಇದನ್ನೂ ಓದಿ:Indian Railway: ಚಿತ್ರ ತಂಡದಿಂದ ಭಾರತೀಯ ರೈಲ್ವೆಗೆ ಹರಿದು ಬಂತು ಕೋಟಿ ಆದಾಯ!