ರಾಜ್ಯದಲ್ಲಿ 27 ದಿನ ರಾಹುಲ್ ಯಾತ್ರೆ

ದೇಶದಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ (Congress) ಭಾರತ್ ಜೋಡೋ ಯಾತ್ರೆ (Rahul Bharat Jodo Yatra) ಹಮ್ಮಿಕೊಂಡಿದೆ. ಇದು ಕರ್ನಾಟಕದಲ್ಲಿ (Karnataka) 27 ದಿನಗಳ ಕಾಲ (27 Days in Karnataka) ನಡೆಯಲಿದೆ. ಕಾಂಗ್ರೆಸ್ (Congress) ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Congress Leader Rahul Gandhi) ಈ ಯಾತ್ರೆಯ ನೇತೃತ್ವವಹಿಸಿದ್ದಾರೆ. ಕಾಶ್ಮೀರದಿಂದ (Kashmir) ಕನ್ಯಾಕುಮಾರಿ (Kashmir to Kanyakumari) ತನಕ ಈ ಯಾತ್ರೆ ನಡೆಯಲಿದೆ. ಕೇರಳ(Kerala), ತಮಿಳುನಾಡು (Tamil Nadu) ಅಥವಾ ತೆಲಂಗಾಣ (Telangana) ಈ ಮೂರು ಮಾರ್ಗಗಳ ಪೈಕಿ ಒಂದರ ಮೂಲಕ ರಾಜ್ಯಕ್ಕೆ ಕಾಂಗ್ರೆಸ್ ((Congress) ಯಾತ್ರೆ (Bharat Jodo Yatra)ಎಂಟ್ರಿಯಾಗಲಿದೆ. ಶೀಘ್ರದಲ್ಲಿ ಯಾತ್ರೆಯ (Bharat Jodo Yatra) ರೂಟ್ ಮ್ಯಾಪ್ ಬಗ್ಗೆ ಅಂತಿಮ (Final Decision) ನಿರ್ಧಾರ ಹೊರಬೀಳಲಿದೆ.
ಫಿನ್ಲೆಂಡ್ ಮೇಲೆ ರಷ್ಯಾ ಯುದ್ಧ?

ಕಳೆದ 4 ತಿಂಗಳಿನಿಂದ ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ(Poland–Russia), ಫಿನ್ಲೆಂಡ್ (Finland–Russia) ವಿರುದ್ಧವೂ ಸೇನಾ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಷ್ಯಾದೊಂದಿಗೆ 1340 ಕಿ.ಮೀ ಗಡಿ ಹಂಚಿಕೊಂಡಿರುವ ಫಿನ್ಲೆಂಡ್, ತಮ್ಮ ಮೇಲೆ ದಾಳಿಯಾಗುವ ಸಾಧ್ಯತೆ ಇದೆ ಎಂಬ ಶಂಕೆಯಿಂದ ಗಡಿಗೆ ಬೃಹತ್ ಪಡೆಗಳನ್ನು ಕಳುಹಿಸಿಕೊಡುತ್ತಿದೆ. ನ್ಯಾಟೋಗೆ ಸೇರದಂತೆ ರಷ್ಯಾ ಆದೇಶಿಸಿದ್ದರೂ ಅದನ್ನು ಗಾಳಿಗೆ ತೂರಿ ಫಿನ್ಲೆಂಡ್ ಪ್ರಕ್ರಿಯೆ ನಡೆಸಿತ್ತು ಎಂಬುದು ಎಲ್ಲರಿಗೂ ತಿಳಿದ ವಿಷಯ.
ಸಾಯಿ ಪಲ್ಲವಿಗೆ ಹೈಕೋರ್ಟ್ ಬಿಗ್ ಶಾಕ್

ಕಾಶ್ಮೀರ ಪಂಡಿತರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಸಾಯಿ ಪಲ್ಲವಿ ವಿರುದ್ಧದ ಪ್ರಕರಣ ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದೆ. ಕಾಶ್ಮೀರ ಫೈಲ್ಸ್ ಸಿನಿಮಾ ಹಾಗೂ ಗೋರಕ್ಷಕರ ಬಗ್ಗೆ ಸಾಯಿ ಪಲ್ಲವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಬಜರಂಗದಳದ ಮುಖಂಡರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಮಾಡಿದ್ದರು. ಹೀಗಾಗಿ, ಕೇಸ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್

ಕರ್ನಾಟಕದ ಕರಾವಳಿ, ದಕ್ಷಿಣ, ಉತ್ತರ ಒಳನಾಡು ಮತ್ತು ಮಲೆನಾಡಿನ ವಿವಿಧ ಭಾಗದಲ್ಲಿ ಇಂದಿನಿಂದ 3 ದಿನ ಭಾರೀ ಮಳೆಯಾಗಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ನೆಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ಆರೆಂಜ್ ಅಲರ್ಟ್, ಹಾಸನ, ಹಾವೇರಿ, ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ.
ಮೂರು ತಿಂಗಳ ಮೊದಲೇ ಹತ್ಯೆಗೆ ಸ್ಕೆಚ್

ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಹತ್ಯೆಗೆ 3 ತಿಂಗಳ ಮೊದಲೇ ಸಂಚು ರೂಪಿಸಲಾಗಿತ್ತು. ಸಾರ್ವಜನಿಕವಾಗಿಯೇ ಅವರನ್ನು ಮುಗಿಸಲು ಪ್ಲಾನ್ ಮಾಡಲಾಗಿತ್ತು ಎಂದು ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕೊಲೆಗೂ ಎರಡು ದಿನ ಮುನ್ನ ಆರೋಪಿಗಳು ಗುರೂಜಿಯನ್ನು ನಿರಂತರವಾಗಿ ಭೇಟಿಯಾಗಿದ್ದರು. ಬೆಂಗಳೂರಿನಲ್ಲಿ ಕೊಲೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಗುರೂಜಿಯ ಸಹೋದರನ ಮೊಮ್ಮಗ ತೀರಿಕೊಂಡಿದ್ದರಿಂದ ಕೊಲೆಯ ಸಮಯ ಮತ್ತು ಸ್ಥಳ ಬದಲಾಗಿತ್ತು ಎಂದು ಆರೋಪಿಗಳು ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ಮಹತ್ವದ ಜವಾಬ್ದಾರಿ

2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಎಐಸಿಸಿ, ವಿವಿಧ ವಿಭಾಗಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡಿದೆ. ಸಂವಹನ ಮತ್ತು ಸಾಮಾಜಿಕ ಜಾಲತಾಣಗಳ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ, ಉಪ ಮುಖ್ಯಸ್ಥರಾಗಿ ಮನ್ಸೂರ್ ಆಲಿ ಖಾನ್ ಅವರನ್ನು ನೇಮಿಸಲಾಗಿದೆ. ಮುಖ್ಯ ವಕ್ತಾರರನ್ನಾಗಿ ಎಂಎಲ್ಸಿ ನಾಗರಾಜ್ ಯಾದವ್, ಕೆಪಿಸಿಸಿ ವಾರ್ ರೂಂ ಮುಖ್ಯಸ್ಥರಾಗಿ ಶಶಿಕಾಂತ್ ಸೆಂಥಿಲ್, ಕಾಂಗ್ರೆಸ್ ವಕ್ತಾರ ಹಾಗೂ ಜನರಲ್ ಸೆಕ್ರೆಟರಿಯಾಗಿ ಲಾವಣ್ಯ ಬಲ್ಲಾಳ್, ಕವಿತಾ ರೆಡ್ಡಿ, ಐಶ್ವರ್ಯಾ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿಗರೇನೂ ಗೆಣಸು ಕೆರೆಯುತ್ತಿದ್ರಾ?

ಸಿದ್ದರಾಮಯ್ಯನವರದ್ದು ಹಗರಣಗಳನ್ನು ಮುಚ್ಚಿ ಹಾಕುವ ಸರ್ಕಾರವಾಗಿತ್ತು ಎಂದಿರುವ ಸಿಎಂ ಬೊಮ್ಮಾಯಿರವರ ಟೀಕೆ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಅಕ್ರಮ ನಡೆಯುತ್ತಿದ್ದಾಗ, ನಿಮ್ಮ ಪಕ್ಷದವರು ಗೆಣಸು ಕೆರೆಯುತ್ತಿದ್ರಾ? ಅಥವಾ ಸದನದಲ್ಲಿ ಬ್ಲೂ ಫಿಲ್ಮ್ ನೋಡುತಿದ್ರಾ? ಎಂದು ಕಾಂಗ್ರೆಸ್ ತೀಕ್ಷ್ಮವಾಗಿ ಟ್ವಿಟರ್‌ನಲ್ಲಿ ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ನಿಮ್ಮ ಸರ್ಕಾರದ ಅಕ್ರಮಗಳು ಬಯಲಾದಾಗ, ನಮ್ಮ ಮೇಲೆ ಅಪಾದಿಸುವ ಖಯಾಲಿ ನಿಮ್ಮದು ಎಂದು ಆರೋಪಿಸಿದೆ.
ಆಗಸ್ಟ್ 15ಕ್ಕೆ ‘ಸ್ವಾತಂತ್ರ್ಯ ನಡಿಗೆ’

ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಆಗಸ್ಟ್ 15ರಂದು 1 ಲಕ್ಷ ಜನರನ್ನು ಸೇರಿಸಿ ಬೃಹತ್ ‘ಸ್ವಾತಂತ್ರ್ಯ ನಡಿಗೆ’ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಗಸ್ಟ್ 1ರಿಂದ 10ರವರೆಗೆ ಎಲ್ಲಾ ಜಿಲ್ಲೆಗಳಲ್ಲೂ 75 ಕಿ.ಮೀ.ವರೆಗೆ ಪಾದಯಾತ್ರೆ ಮಾಡಿ, ಸ್ವಾತಂತ್ರ್ಯ ಪಡೆಯಲು ಕಾಂಗ್ರೆಸ್ ನಾಯಕರು ಮಾಡಿರುವ ಬಲಿದಾನ ಮತ್ತು ಕೊಡುಗೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.
ಹೆಗ್ಗಡೆಯವರ ಅನುಭವ ದೇಶಕ್ಕೆ ಲಾಭ

ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಸಿಎಂ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಸಿಎಂ, ಹೆಗ್ಗಡೆಯವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ನಾಡಿನ ಸಮಗ್ರ ಜನತೆಗೆ ಬಹಳ ಸಂತೋಷವಾಗಿದೆ. ಅವರ ಅಗಾಧವಾದ ಅನುಭವ ಇಡೀ ದೇಶಕ್ಕೆ ಲಾಭವನ್ನು ತಂದುಕೊಡಲಿದೆ ಎಂದು ತಿಳಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಮಾತ್ರವಲ್ಲ, ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.