ಚಿಕ್ಕಬಳ್ಳಾಪುರ: Medical Collage: (ಜು.8): ತವರು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು (medical Collage)ನಿರ್ಮಾಣವಾಗಬೇಕು ಎಂದು ಚಿಕ್ಕ ವಯಸ್ಸಿನಲ್ಲೇ ಕಂಡಿದ್ದ ಕನಸು ಇಂದು ನನಸಾಗುತ್ತಿದೆ. ಜನವರಿಯಲ್ಲಿ ಕಾಲೇಜಿನ ಕಟ್ಟಡ ಉದ್ಘಾಟನೆಯಾದಾಗ ಕನಸು ಸಂಪೂರ್ಣ ಸಾಕಾರಗೊಳ್ಳಲಿದೆ ಎಂದು (Health Minister Dr k Sudhakar) ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನ ವೈದ್ಯಕೀಯ, ನರ್ಸಿಂಗ್, ಮತ್ತು ಅಲೈಡ್ ಸೈನ್ಸ್ ವಿದ್ಯಾರ್ಥಿಗಳ (Medical Students) ಮೊದಲ ಬ್ಯಾಚ್‌ನ ಕಲಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ. ನನ್ನ ಕನಸು ಭಾಗಶಃ ನನಸಾಗಿದೆ. ಜನವರಿಯಲ್ಲಿ (medical collage Building)ವೈದ್ಯಕೀಯ ಕಾಲೇಜಿನ ಕಟ್ಟದ ಉದ್ಘಾಟನೆಯಾದಾಗ ಕನಸು ಸಂಪೂರ್ಣವಾಗಿ ನನಸಾಗುತ್ತದೆ ಎಂದರು.
ರಾಜಕಾರಣದಲ್ಲಿ ಕೆಲವರು ಒಳ್ಳೆಯದನ್ನು ನೋಡುವುದಿಲ್ಲ. ಬದಲಾಗಿ, ಶಾಸಕರ ಊರಿಗೆ ಹತ್ತಿರವಿರುವುದಕ್ಕೆ ಕಾಲೇಜು ಮಾಡಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. (Chikkaballapur) ಚಿಕ್ಕಬಳ್ಳಾಪುರ ನನ್ನೂರು, ಜೊತೆಗೆ ಇಡೀ ಕರ್ನಾಟಕವೇ (karantaka)ನನ್ನೂರು. ಯಾವುದೇ ಸ್ವಾರ್ಥಕ್ಕಾಗಿ ಈ ಜಾಗವನ್ನು ಆಯ್ಕೆ ಮಾಡಿಲ್ಲ. ಯೋಗ್ಯವಾದ ಜಾಗ ಎಂದು ನಿರ್ಧಾರ ಮಾಡಿಯೇ ಯೋಜನೆ ರೂಪಿಸಿದ್ದೇವೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹತ್ತಿರ ಹಾಗೂ ಪ್ರಯಾಣಕ್ಕೆ ಅನುಕೂಲ ಇರುವ ಪ್ರದೇಶ ಇದಾಗಿದೆ. ಆಂಧ್ರಪ್ರದೇಶ ಗಡಿ ಭಾಗದ ಜನರಿಗೂ ಇದು ಹತ್ತಿರವಾಗಿದೆ ಎಂದರು.
ಹಿಂದೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗ ಬಂದಿತ್ತು. ಆ ವೇಳೆ, ಚಿಕ್ಕಬಳ್ಳಾಪುರದಿಂದ (kananapur)ಕನಕಪುರಕ್ಕೆ ಕಾಲೇಜಿನ ಯೋಜನೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆದಿತ್ತು. ಮೆಡಿಕಲ್ ಕಾಲೇಜನ್ನು ವಾಪಾಸ್ ತರುವ ಬಗ್ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೋರಿದ್ದೆ. ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾದಾಗ ನಾನು ಮಾಜಿ ಶಾಸಕನಾಗಿದ್ದೆ. ಆದರೆ ಅವರು ಕೊಟ್ಟ ಮಾತನ್ನು ಉಳಿಸಿಕೊಂಡರು. ಬಿಎಸ್‌ವೈ ಅವರ ಮೊದಲ ಕ್ಯಾಬಿನೆಟ್‌ನ ಮೊದಲ ನಿರ್ಣಯ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದೇ ಆಗಿತ್ತು. ನಂತರ ಜಿಲ್ಲಾಧಿಕಾರಿ ಮತ್ತು ಅವರ ತಂಡ ಸಾಕಷ್ಟು ಕೆಲಸ ಮಾಡಿ ಮೊದಲ ಬ್ಯಾಚ್ ಕೂಡ ಆರಂಭವಾಗಿದೆ ಎಂದು ಶ್ಲಾಘಿಸಿದರು.
ಅಮ್ಮನನ್ನು ಕಳೆದುಕೊಂಡ ನೆನಪು, ಭಾವುಕರಾದ ಸಚಿವರು
ಚಿಕ್ಕವಯಸ್ಸಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು (medical Collage)ಯಾಕಿಲ್ಲ ಎಂದು ಯೋಚಿಸುತ್ತಿದ್ದೆ. ಎರಡು ಸಂದರ್ಭದಲ್ಲಿ ಇಲ್ಲಿ ಮೆಡಿಕಲ್ ಕಾಲೇಜಿನ ಅನಿವಾರ್ಯತೆ ಕಾಡಿತ್ತು. ದ್ವಿತೀಯ ಪಿಯುಸಿ ಮುಗಿಸಿದಾಗ ನಾನು ಇಲ್ಲೇ ಕಲಿಯಲು ಇಷ್ಟಪಟ್ಟಿದ್ದು ಮೊದಲ ಸಂದರ್ಭ. ನನ್ನ ಅಮ್ಮನನ್ನು ಕಳೆದುಕೊಂಡಾಗ ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜು ಏಕೆ ಅನಿವಾರ್ಯ ಎಂದು ಅರಿತಿದ್ದು ಎರಡನೇ ಸಂದರ್ಭ. ಹಳ್ಳಿಯಲ್ಲಿದ್ದ ಅಮ್ಮನಿಗೆ ಆರೋಗ್ಯ ಸಮಸ್ಯೆಯಾದಾಗ ಹತ್ತಿರದಲ್ಲಿ ವೈದ್ಯಕೀಯ (medical Collage) ಕಾಲೇಜು ಅಥವಾ ವೈದ್ಯಕೀಯ ವ್ಯವಸ್ಥೆ ಇಲ್ಲದೆ ಅವರನ್ನು ಕಳೆದುಕೊಳ್ಳಬೇಕಾಯಿತು. ಒಂದೂವರೆ ಗಂಟೆ ಪ್ರಯಾಣದ ದೂರ ಇರುವ ಬೆಂಗಳೂರು ನಮಗೆ ಹತ್ತಿರದ ವೈದ್ಯಕೀಯ ಸೇವೆಯ ಸ್ಥಳವಾಗಿತ್ತು. ಈ ಘಟನೆ ನನ್ನ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ ಎಂಬುದನ್ನು ತಿಳಿಸಿತು. ನನ್ನ ಅಪೇಕ್ಷೆಯನ್ನು ಭಗವಂತ ನನ್ನ ಮೂಲಕ ಈಡೇರಿಸಿದ್ದಾನೆ. ಅದಕ್ಕಾಗಿ ಆತನಿಗೆ ಚಿರ ಋಣಿ ಎಂದು ಹೇಳಿ ಭಾವುಕರಾದರು.
ರಾಜ್ಯದಲ್ಲಿ ಒಂದೇ ಸಂದರ್ಭದಲ್ಲಿ 4 ವೈದ್ಯಕೀಯ ಕಾಲೇಜುಗಳನ್ನು ಸರ್ಕಾರ ಮಂಜೂರು ಮಾಡಿತ್ತು. (Central Govt)ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಈ ಕೆಲಸ ಆಗಿದೆ. ಕೇಂದ್ರ ಸರ್ಕಾರ 60% ರಷ್ಟು ಧನ ಸಹಾಯ ನೀಡುತ್ತದೆ. ಉಳಿದ 40% ರಾಜ್ಯ ಸರ್ಕಾರ ಭರಿಸುತ್ತದೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಸೇರಿದಂತೆ ಒಂದೇ ಸಮಯಕ್ಕೆ 4 ಕಾಲೇಜುಗಳು ಆರಂಭವಾದರೂ, ಚಿಕ್ಕಬಳ್ಳಾಪುರದಲ್ಲಿ ಮೊದಲ ಬ್ಯಾಚ್ ಆರಂಭವಾಗಿದೆ. ಇದಕ್ಕಾಗಿ ಶ್ರಮಿಸಿದ ಅಧಿಕಾರಿಗಳಿಗೆ ಧನ್ಯವಾದ ಎಂದು ಹೇಳಿದರು.

ದೇವರು ಎಲ್ಲೆಡೆ ಇರಲಾರ ಎಂದು ವೈದ್ಯರು ಮತ್ತು ವೈದ್ಯಕೀಯ (Doctors) ಸೇವಕರನ್ನು ಸೃಷ್ಟಿ ಮಾಡಿದ್ದಾನೆ. ಕೇವಲ ಭಗವಂತ, ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿ ಮಾತ್ರ ಜೀವ ಉಳಿಸಲು ಸಾಧ್ಯ. ಆದರೆ ನೀವು ಇದನ್ನು ಯಾವ ರೀತಿ ಬಳಸಿಕೊಳ್ಳುತ್ತೀರಿ ಅನ್ನುವುದರ ಮೇಲೆ ಅದು ನಿಂತಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿಯಿಂದ ಇವತ್ತು ದೇಶದಲ್ಲಿ ಯುಜಿ ಮತ್ತು ಪಿಜಿ ಸೇರಿ 75,000 ಇದ್ದ ಮೆಡಿಕಲ್ ಸೀಟ್‌ಗಳು 1.5 ಲಕ್ಷಕ್ಕೆ ಏರಿಕೆಯಾಗಿವೆ. ಈ ಹಿಂದೆ ಒಂದೇ ಒಂದು ಏಮ್ಸ್ ಇತ್ತು. ಇವತ್ತು 11 ಏಮ್ಸ್‌ಗಳಿವೆ. (Pm Modi)ಮೋದಿಯವರು ದೇಶದ ಜನರ ಆರೋಗ್ಯದ ಬಗ್ಗೆ ದೂರದೃಷ್ಟಿ ಇಟ್ಟುಕೊಂಡ ಕಾರಣದಿಂದ ಅಭಿವೃದ್ಧಿಯಾಗಿದೆ. ಈ ಹಿಂದೆ 1,400 ಅಥವಾ 1,500 ಜನರಿಗೆ ಒಬ್ಬ ವೈದ್ಯರು ಇದ್ದರು. ಆದರೆ ಈಗ ಕರ್ನಾಟಕದಲ್ಲಿ 950 ಜನರಿಗೆ ಒಬ್ಬ ವೈದ್ಯರಿದ್ದಾರೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ದೇವಸ್ಥಾನ, ಮಸೀದಿ, ಚರ್ಚ್, ವಿದ್ಯಾಸಂಸ್ಥೆ, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಮುಚ್ಚಿದ್ದವು. ಆದರೆ ಆಸ್ಪತ್ರೆಗಳು ಮಾತ್ರ ಸೇವೆಗೆ ಸಿದ್ಧವಾಗಿ ನಿಂತಿದ್ದವು. ಹೀಗಾಗಿ ನಾವು ಕೋವಿಡ್ ವಾರಿಯರ್ ಎಂದು ಪ್ರಧಾನಿಗಳು ಹೇಳಿದ್ದಾರೆ. . (Pm Modi) ಸೈನಿಕರು ಆಪತ್ತು ಬಂದಾಗ ಮುಂದೆ ನಿಂತು ಜನರನ್ನು ರಕ್ಷಣೆ ಮಾಡುತ್ತಾರೆ. ವೈದ್ಯರು, ಆರೋಗ್ಯ ಸಿಬ್ಬಂದಿ ಕೋವಿಡ್ ಸಮಯದಲ್ಲಿ ಈ ಕೆಲಸ ಮಾಡಿದ್ದಾರೆ ಎಂದರು.
ವಿಶೇಷ ವಿದ್ಯಾರ್ಥಿಗಳಾಗಿ
ರಾಜ್ಯದಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿನಿಂದ (medical Collage) ಹೊರಬರುವ ವಿದ್ಯಾರ್ಥಿಗಳು ಬಹಳ ವಿಶೇಷ ವಿದ್ಯಾರ್ಥಿಗಳಾಗಿರಬೇಕು ಎಂದು ಬಯಸುತ್ತೇನೆ. ಆ ವಿಶೇಷತೆ ಪೋಷಕರನ್ನು, ಸಂಸ್ಥೆಯನ್ನು ಮತ್ತು ದೇಶವನ್ನು ಹೆಮ್ಮೆಯಿಂದ ಇರುವಂತೆ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಬ್ಯಾಲೆನ್ಸ್ ಇರಬೇಕು. ಅದನ್ನು ಅರ್ಥ ಮಾಡಿಕೊಂಡವರು ಜೀವನದಲ್ಲಿ ಅತ್ಯಂತ ಯಶಸ್ವಿಯಾಗುತ್ತಾರೆ. ಕಾಲೇಜು ಜೀವನ ಎಲ್ಲವನ್ನೂ ಕಲಿಸುತ್ತದೆ ಎಂದು ಕಿವಿಮಾತು ಹೇಳಿದರು.

ನರ್ಸ್‌ಗಳು ಕುಟುಂಬ ಸದಸ್ಯರಂತೆ
ವೈದ್ಯರ ಚಿಕಿತ್ಸೆಯಿಂದ ಜನರು ಬದುಕುತ್ತಾರೆ. (Nursing)ಆದರ ಅವರ ಸಂಖ್ಯೆ ಇರುವುದು ಕೇವಲ 10% ಮಾತ್ರ. ಶೇ 90 ರಷ್ಟು ನರ್ಸಿಂಗ್ ಸಿಬ್ಬಂದಿ ಇದ್ದಾರೆ. ರೋಗಿಗಳು ನರ್ಸ್‌ಗಳನ್ನು ಮನೆಯ ಸದಸ್ಯರಂತೆ ಕಾಣುತ್ತಾರೆ. ಹೀಗಾಗಿ ನರ್ಸ್‌ಗಳಿಗೆ ಮಮಕಾರ, ಅನುಕಂಪ, ದಯೆ ವಾತ್ಸಲ್ಯದಂತಹ ಗುಣಗಳು ಇರಬೇಕು. ನರ್ಸಿಂಗ್‌ಗೆ ವಿಶ್ವದಲ್ಲೆಡೆ ಬೇಡಿಕೆ ಇದೆ. ಜಗತ್ತಿನಾದ್ಯಂತ 8-10 ದಶಲಕ್ಷ ನರ್ಸ್‌ಗಳ ಬೇಡಿಕೆ ಇದೆ. ಅದರಲ್ಲೂ ಭಾರತೀಯರಿಗೆ ಹೆಚ್ಚು ಬೇಡಿಕೆ ಇದೆ. ಕರ್ನಾಟಕದಿಂದ ಹೆಚ್ಚು ನರ್ಸಿಂಗ್ ಸಿಬ್ಬಂದಿ ಹೊರಬರಬೇಕಿದೆ. ವೈದ್ಯರು ಐದೂವರೆ ವರ್ಷಗಳ ಎಂಬಿಬಿಎಸ್ ಕೋರ್ಸ್ ಮಾಡಿದರೆ ಸಾಕಾಗುವುದಿಲ್ಲ. (MMBS)ಸಾಮಾನ್ಯ ಜನರಿಗೂ ತಜ್ಞರು ಬೇಕು. ಎಂಬಿಬಿಎಸ್ ಕೇವಲ ಎಂಟ್ರಿ ಪಾಯಿಂಟ್. ಇದು ಸ್ಪೆಷಲೈಸೇಷನ್‌ಗೆ ತಯಾರಿ ಕೇಂದ್ರ. ಈ ದೇಶದ ಘನತೆ ಎತ್ತಿ ಹಿಡಿಯುವ ವೈದ್ಯರು ನೀವಾಗಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ:Mangalore Rain: ಧಾರಾಕಾರ ಮಳೆ : ಸಾರ್ವತ್ರಿಕ ರಜೆಗೆ ಬೀಳಲಿದೆ ಕತ್ತರಿ