ಜಪಾನ್ : (ಜು.8):Shinzo Abe: ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಶುಕ್ರವಾರ ಗುಂಡಿನ ದಾಳಿ ನಡೆದಿದೆ. ಅಬೆ ಅವರ ಎದೆಗೆ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ.ಗುಂಡೇಟು ತಗುಲಿದ ತಕ್ಷಣ ಅಬೆ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದರು.ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಏರ್ ಅಂಬುಲೆನ್ಸ್ ಮೂಲಕ ಟೋಕಿಯೋಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದ ಕಾರಣ ಅಬೆ ಕೊನೆಯುಸಿರೆಳೆದಿದ್ದಾರೆ.ಅಬೆ ಅಧಿಕಾರದಲ್ಲಿದ್ದಾಗ ಭಾರತ-ಜಪಾನ್ ನಡುವಿನ ಸಂಬಂಧವೃದ್ಧಿಗೆ ಶ್ರಮಿಸಿದ್ದರು.
Shinzo Abe shot in the chest in Nara. Attacker caught. pic.twitter.com/WfkUDH9lfo
— Gordon Knight (@GordonlKnight) July 8, 2022
ಮಾಜಿ ಪ್ರಧಾನಿಯ ಶಿಂಜೋ ಎದೆಯ ಭಾಗಕ್ಕೆ ಗುಂಡು ತಗುಲಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿಕೆ ನೀಡಿದ್ದು ಶಂಕಿತ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.ಭಾನುವಾರದ ಮೇಲ್ಮನೆ ಚುನಾವಣೆಗೆ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ನಾಯಕ ಸಾರ್ವಜನಿಕವಾಗಿ ಭಾಷಣ ಮಾಡುತ್ತಿದ್ದಾಗ ಗುಂಡೇಟಿನ ಸದ್ದು ಕೇಳಿಬಂದಿದೆ ಎಂದು ರಾಷ್ಟ್ರೀಯ ಪ್ರಸಾರಕ ಎನ್‌ಎಚ್‌ಕೆ ಮತ್ತು ಕ್ಯೋಡೋ ಸುದ್ದಿ ಸಂಸ್ಥೆ ತಿಳಿಸಿದೆ. ಗುಂಡೇಟಿನ ಶಬ್ದ ಕೇಳಿದ ಬೆನ್ನಲ್ಲಿಯೇ ಶಿಂಜೋ ಅಬೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರ ಎದೆಯ ಭಾಗದ ಕಡೆಯಲ್ಲಿ ರಕ್ತ ಕಂಡುಬಂದಿದೆ ಎಂದು ವರದಿಯಾಗಿದೆ.