ನವದೆಹಲಿ: (ಜು.8) Mohammed Zubair:ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammad Zubair) ವಿರುದ್ಧ ಜರ್ಮನಿ ನಾಲಿಗೆ ಹರಿಬಿಟ್ಟಿದೆ. ಮೊಹಮ್ಮದ್ ಜುಬೇರ್ ಬಂದನದಿಂದ ಪತ್ರಿಕಾ ಸ್ವಾತಂತ್ರ್ಯ ಹರಣವಾಗಿದೆ ಎಂದು (German) ಜರ್ಮನಿ ಹೇಳಿಕೆಗೆ ಭಾರತ ಖಾರವಾಗಿಯೇ ಪ್ರತಿಕ್ರಿಯೆ ನೀಡಿದೆ.ಇದು ಭಾರತದ ಆಂತರಿಕ ವಿಷಯ ಅಲ್ಲದೆ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ಪ್ರಕರಣದ (Statement) ಕುರಿತು ಹೇಳಿಕೆಗಳನ್ನು ನೀಡುವುದು ಸಮಾಜಸವಲ್ಲ ನಮ್ಮ ನ್ಯಾಯಕ ವ್ಯವಸ್ಥೆ ಸ್ವತಂತ್ರವಾಗಿದೆ ಎಂದು ಚಾಟಿ ಬೀಸಿದೆ.
ನಿಮ್ಮ ಯಾವುದೇ ಟೀಕೆಗಳು ಪರಿಣಾಮ ಬೀರುವುದಿಲ್ಲ ಎಂದು (India ಭಾರತದ ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ. (German Foreign Ministry) ಜರ್ಮನಿಯ ವಿದೇಶಾಂಗ ಸಚಿವಾಲಯ, ಮುಕ್ತ ಪತ್ರಿಕೋದ್ಯಮವು ಯಾವುದೇ ದೇಶಕ್ಕೆ ಅತ್ಯಂತ ಅವಶ್ಯಕವಾಗಿದೆ ಇದಕ್ಕಾಗಿ ಯಾರನ್ನಾ ಭಂಗಿಸಬಾರದು ದೆಹಲಿಯಲ್ಲಿರುವ ನಮ್ಮ ರಾಯಭಾರ ಕಚೇರಿ ಈ ಪ್ರಕರಣವನ್ನು ಗಮನಿಸುತ್ತಿದೆ ಎಂದು ಹೇಳಿತ್ತು.
ಜಾಮೀನು ಕೊಡಿ ಎಂದು ಮನವಿ ಮಾಡಿದ್ದ ಜುಬೇರ್
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪದಲ್ಲಿ ಬಂಧನವಾಗಿರುವ ಆಲ್ಟ ನ್ಯೂ ಸಹ ಸಂಸ್ಥಾಪಕ ಮಹಮ್ಮದ್ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.ಜೀವ ಬೆದರಿಕೆ ಬರುತ್ತಿವೆ ವೈಯಕ್ತಿಕ ಸುರಕ್ಷತೆ ಬಗ್ಗೆ ಆತಂಕಗಳಿದೆ ಹೀಗಾಗಿ ಜಾಮೀನು ಅರ್ಜಿಯನ್ನ ತುರ್ತಾಗಿ ವಿಚಾರಣೆ ನಡೆಸುವಂತೆ ಜುಬೇರ ಪರ ವಕೀಲರಾದ ಕೋಲಿನ್ ಗೊನ್ಸಾಲ್ವಿಸ್ ಮನವಿ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.