Eid-ul-Adha: (ಜು.8):ಮುಸ್ಲಿಂ ಬಾಂಧವರಿಗೆ ಪ್ರಮುಖವಾದ ಹಬ್ಬಗಳಲ್ಲಿ (Bakrid) ಬಕ್ರಿದ್ ಕೂಡ ಒಂದು.. ಈ ವೇಳೆ ಮುಸ್ಲಿಂ ಸಮುದಾಯದ (Muslim Community)ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತೆ. ಬಕ್ರಿದ ದಿನವನ್ನು ತ್ಯಾಗದ (Sacrifice)ದಿನವೆಂದು ಹೇಳಲಾಗುತ್ತೆ ಹಾಗಾದ್ರೆ ಬಕ್ರೀದ್ ಹಬ್ಬದ ಮಹತ್ವವೇನು? ((Importance)ಯಾಕೆ ಬಕ್ರಿದ್ ಹಬ್ಬವನ್ನು ಆಚರಿಸುತ್ತಾರೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ.(Islamic Calendar)ಇಸ್ಲಾಮಿಕ ಕ್ಯಾಲೆಂಡರ್ ಪ್ರಕಾರ ತ್ಯಾಗದ ಹಬ್ಬವಾದ (Bakrid) ಬಕ್ರೀದ್ ,ರಂಜಾನ್ ಹಬ್ಬದ ಎರಡು ತಿಂಗಳ ನಂತರ ಬರುತ್ತದೆ. ಇಸ್ಲಾಂ ನಲ್ಲಿ ಸಾಮಾನ್ಯವಾಗಿ ಬಕ್ರೀದ್ ದಿನದಂದು ಮೇಕೆಯನ್ನು ಬಲಿ ನೀಡಲಾಗುತ್ತದೆ.
ಬಕ್ರೀದ್ ಹಬ್ಬವನ್ನು ಈದ್ ಉಲ್ ಅದಾ (Ed Ul Adha) ಎಂದು ಕರೆಯುತ್ತಾರೆ.ಅಲ್ಲಾಹುನ ಮಾರ್ಗದಲ್ಲಿ ನೀಡಲಾಗುವ ತ್ಯಾಗದ ಹಬ್ಬ ಎಂದು ಕರೆಯಲಾಗುತ್ತದೆ. ಅದ (Sacrifice) ಎಂದರೆ ಅರಬಿಕ ಪದವಾಗಿದ್ದು ಇದರ ಅರ್ಥ ತ್ಯಾಗ, ಬಲಿದಾನ ಎಂದರ್ಥ.. ಈದ್ ಎಂದರೆ ಹಬ್ಬ (Ed – Festival)
ಬಕ್ರೀದ್ ಹಬ್ಬ ಆರಂಭವಾಗಿದ್ದು ಹೇಗೆ ?
ಅಲ್ಲಾಹುನು ಒಮ್ಮೆ ತನ್ನ ಪರೀಕ್ಷೆಯನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಿದನು. ಇಬ್ರಾಹಿಂ ಕನಸಿನಲ್ಲಿ ಒಮ್ಮೆ ಅಲ್ಲಾಹುನು ಕಾಣಿಸಿಕೊಂಡು ನಿನಗೆ ತುಂಬಾ ಪ್ರಿಯವಾದ ಅಥವಾ ಹತ್ತಿರವಾದ ವಸ್ತುವನ್ನು ನನಗೆ ತ್ಯಾಗ ಮಾಡಲು ಕೇಳಿಕೊಂಡನು. ಇಸ್ಮಾಯಿಲ್‌ಗಿಂತ ಪ್ರಿಯವಾದುದ್ದು, ಮುಖ್ಯವಾದುದ್ದು ನನಗೆ ಯಾವುದೂ ಇಲ್ಲ ಆದ್ದರಿಂದ ನಾನು ನನ್ನ ಮಗನನ್ನೇ ಅಲ್ಲಾಹುಗೆ ತ್ಯಾಗ ಮಾಡಬೇಕೆಂದು ನಿರ್ಧರಿಸುತ್ತಾನೆ.
ಹಜರತ್ ಇಬ್ರಾಹಿಂ ತನ್ನ ಮಗನೊಂದಿಗೆ ತ್ಯಾಗ ಮಾಡಲು ಹೊರಟಿದ್ದಾಗ, ದಾರಿಯಲ್ಲಿ ಸೈತಾನನನ್ನು ಸಿಗುತ್ತಾನೆ.ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಮಾಡಿದಾಗ. ಅಲ್ಲಾಹುನ ಆಸೆಯಂತೆ ನಾನು ಅವನನ್ನು ತ್ಯಾಗ ಮಾಡಲಿದ್ದೇನೆ ಎಂದು ಹೇಳಿದಾಗ, ಯಾವುದೇ ತಂದೆ ತನ್ನ ಮಗನನ್ನು ತ್ಯಾಗ ಮಾಡುತ್ತಾನೆಯೇ? ಎಂದು ಕೇಳುತ್ತಾನೆ
ಆದ್ರೆ ಮಗನನ್ನು ತ್ಯಾಗ ಮಾಡುವಾಗ, ಮಗನ ಬಾಂಧವ್ಯವು ಅಲ್ಲಾಹುನ ಪ್ರೀತಿಯಲ್ಲಿ, ಭಕ್ತಿಯಲ್ಲಿ ಅಡಚಣೆಯಾಗದಂತೆ ತನ್ನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಳ್ಳುವುದು ಉತ್ತಮ ಎಂದು ಅವನು ಭಾವಿಸಿ ಬಟ್ಟೆಯನ್ನು ಕಟ್ಟಿ ಮಗನನ್ನು ಹತ್ಯೆ ಮಾಡುತ್ತಾನೆ. ನಂತರ ಅವನು ತನ್ನ ಕಣ್ಣುಗಳಿಂದ ಬಟ್ಟೆಯನ್ನು ತೆಗೆದಾಗ, ತನ್ನ ಮಗ ಸುರಕ್ಷಿತವಾಗಿ ನಿಂತಿರುವುದನ್ನು ನೋಡಿ ಆಘಾತಕ್ಕೊಳ ಗಿಮತ್ತು ಅವನ ಸ್ಥಳದಲ್ಲಿ ಒಂದು ಮೇಕೆ ಬಲಿಯಾಗಿರುವುದನ್ನು ನೋಡುತ್ತಾನೆ. ಆಗ ಆತನಿಗೆ ಇದು ಅಲ್ಲಾಹುನ ಮಹಿಮೆ. ಅಲ್ಲಾಹು ನನ್ನ ಭಕ್ತಿಯನ್ನು ಪರೀಕ್ಷಿಸಲು ಹೀಗೆ ಮಾಡಿದ್ದಾನೆ ಎನ್ನುವುದು ಆತನಿಗೆ ತಿಳಿಯುತ್ತದೆ. ಅಂದಿನಿಂದ ಆಡುಗಳನ್ನು, ಕುರಿಗಳನ್ನು ಬಲಿ ನೀಡುವ ಅಭ್ಯಾಸ ಪ್ರಾರಂಭವಾಯಿತು.