Actor Vikram:(ಜು.8): ತಮಿಳುನಾಡು ಜನಪ್ರಿಯ ನಟ ವಿಕ್ರಂ ಅವರಿಗೆ ಹೃದಯಘಾತವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ತಮಿಳು ನಟ ಚಿಯನ್ ವಿಕ್ರಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಇನ್ನಷ್ಟೇ ಕಾವೇರಿ ಆಸ್ಪತ್ರೆಯಿಂದ ಮಾಹಿತಿ ಹೊರಬೀಳಲಿದೆ.
ವಿಕ್ರಂ ಅವರಿಗೆ ಕೇವಲ 56 ವರ್ಷಗಳಾಗಿದ್ದು ಫಿಟ್ನೆಸ್ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದರು ಆದರೆ ಸಡನ್ ಹೃದಯಘಾತ ಆಗಿರುವುದು ಅಭಿಮಾನಿಗಳಿಗೆ ಆತಂಕ ಮೂಡಿದೆಆದಷ್ಟು ಬೇಗ ವಿಕ್ರಮ್ ಅವರು ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ ವಿಕ್ರಂ ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಆಗಿದ್ದ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೋನ್ನಿಯನ್ ಸೆಲ್ವನ್ ಚಿತ್ರದ ಪೋಸ್ಟರ್ ಸಖತ್ ಸದ್ದು ಮಾಡಿತ್ತು.ಇಂದು ಸಂಜೆ 6 ಗಂಟೆಗೆ ಸಿನಿಮಾದ ಟೀಸರ್ ಲಾಂಚ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ವಿಕ್ರಂ ಭಾಗಿಯಾಗಬೇಕಿತ್ತು, ಆದರೆ ಅಷ್ಟರಲ್ಲೇ ಅವರಿಗೆ ಹೃದಯಘಾತವಾಗಿದೆ.
Updating Soon…