ದಕ್ಷಿಣ ಕನ್ನಡ:(ಜು.7):Mangalore Rain ಕಡಲ ಕೊರೆತಕ್ಕೆ ಒಳಗಾಗಿರುವ (Mangalore City) ಮಂಗಳೂರು ನಗರದ ಉಳ್ಳಾಲದ ಬಟ್ಪಪಾಡೆ ಸ್ಥಳಕ್ಕೆ (R Ashok)ಕಂದಾಯ ಸಚಿವ ಆರ್.ಅಶೋಕ್, ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ (V Sunil)ವಿ.ಸುನಿಲ್ ಕುಮಾರ್, ಬಂದರು, ಮೀನುಗಾರಿಕೆ ಜಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯರಾದ (Pratap Simha Nayak) ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧಿಕಾರಿ (DC Rajendra K V)ಡಾ.ರಾಜೇಂದ್ರ ಕೆ.ವಿ, ಹಾಗೂ ಕಂದಾಯ ಅಧಿಕಾರಿಗಳು ಇಂದು ಭೇಟಿ ನೀಡಿ ಕಡಲ್ಕೊರೆತಕ್ಕೊಳಗಾದ ಸ್ಥಳವನ್ನು ಪರಿಶೀಲನೆ (Inspection)ಮಾಡಿದರು. ಸ್ಥಳೀಯರೊಂದಿಗೆ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.ನಂತರ ಉಳ್ಳಾಲಕ್ಕೆ ತೆರಳಿ ಕಡಲ ಕೊರೆತಕ್ಕೆ ಒಳಗಾದ ಪ್ರದೇಶಗಳನ್ನು ಪರಿಶೀಲಿಸಿದರು.
ನೇತ್ರಾವತಿ ನದಿ ಅಪಾಯದ ಮಟ್ಟ ಏರಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆ ಅಬ್ಬರ (Heavy Rain Fall) ನಿನ್ನೆಗಿಂತ ಕಡಿಮೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಾಡಿಕೆಯಂತೆ ಮಳೆ ಸುರಿಯಿತು. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿ(Netravathi RIver) ತುಂಬಿ ಹರಿಯುತ್ತಿದ್ದು ನದಿ ನೀರು 8 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು. ಮೂರು ದಿನಗಳಿಂದ ನೀರಿನ ಮಟ್ಟ ಏರುತ್ತಲೇ ಸಾಗಿದ್ದು, ಇಂದು 8 ಮೀಟರ್ ಗೆ ತಲುಪಿದೆ. ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಇನ್ನೂ ನೀರಿನ ಮಟ್ಟ ಏರಿಕೆಯಾದರೆ ನದಿ ಪಾತ್ರದ ತಗ್ಗು ಪ್ರದೇಶಗಳು ಮುಳುಗಡೆಯಾಗಲಿದೆ. 8.5 ಮೀಟರ್ ಗೆ ತಲುಪಿದರೆ ನೆರೆ ಉಂಟಾಗಲಿದೆ.

ಕೆಲದಿನಗಳ ಹಿಂದೆ ಭೂಕಂಪನದಿಂದ ಹಾನಿಗೊಳಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಸಂತ ಭಟ್ ಅವರ ಮನೆಗೆ ಕಂದಾಯ ಸಚಿವ ಆರ್. ಅಶೋಕ್, ಇಂಧನ,ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮೀ ಅವರು ಭೇಟಿ ನೀಡಿ 45 ಸಾವಿರದ ಚೆಕ್ ವಿತರಿಸಿದರು.
5 ಲಕ್ಷ ರೂಪಾಯಿಗಳ ಪರಿಹಾರ ಒದಗಿಸುವ ಭರವಸೆ ನೀಡಿದರು