Secular TV
Monday, February 6, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Freedom March: ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆಯ ಬಗ್ಗೆ ಅರಿವು ಮೂಡಿಸಲು ‘ಫ್ರೀಡಂ ಮಾರ್ಚ್’ ಆಯೋಜನೆ

Secular TVbySecular TV
A A
Reading Time: 1 min read
Freedom March: ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆಯ ಬಗ್ಗೆ ಅರಿವು ಮೂಡಿಸಲು ‘ಫ್ರೀಡಂ ಮಾರ್ಚ್’ ಆಯೋಜನೆ
0
SHARES
Share to WhatsappShare on FacebookShare on Twitter

ಬೆಂಗಳೂರು: (ಜು.7)Freedom March: ದೇಶದ 75ನೇ ಸ್ವಾತಂತ್ರ್ಯದಿನಾಚಾರಣೆ ಅಂಗವಾಗಿ ಆಗಸ್ಟ್ 15ರಂದು ಮಧ್ಯಾಹ್ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿವರೆಗೂ ರಾಷ್ಟ್ರಧ್ವಜ ಹಿಡಿದು ‘ಫ್ರೀಡಂ ಮಾರ್ಚ್’ (ಸ್ವಾತಂತ್ರ್ಯ ನಡಿಗೆ) ಎಂಬ ಪಕ್ಷಾತೀತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಸುಮಾರು 75 ಸಾವಿರದಿಂದ 1 ಲಕ್ಷದವರೆಗೂ ಜನ ಸೇರಲಿದ್ದಾರೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಜನರು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದು, ಯಾರು ಭಾಗವಹಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ.

ಇದೊಂದು ಪಕ್ಷಾತೀತ ಕಾರ್ಯಾಕ್ರಮವಾಗಿದ್ದು, ಇದರಲ್ಲಿ ಎಲ್ಲ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಕ್ರೀಡಾಪಟುಗಳು, ಕಲಾವಿದರು ಸೇರಿದಂತೆ ಎಲ್ಲರೂ ಭಾಗವಹಿಸಬಹುದು.ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ರಾಜ್ಯದಲ್ಲಿ ಪಾದಯಾತ್ರೆ ಮೂಲಕ ಆಚರಿಸಲು ಸೂಚಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ಈ ನಡಿಗೆಯನ್ನು ಒಂದು ಜಿಲ್ಲೆಯ ಎಷ್ಟು ತಾಲೂಕುಗಳಲ್ಲಿ ಮಾಡಬೇಕು ಎಂಬುದನ್ನು ಆಯಾ ಜಿಲ್ಲಾ ಕಾಂಗ್ರೆಸ್ ನಾಯಕರ ಇಚ್ಛೆಗೆ ಬಿಟ್ಟಿದ್ದೇವೆ.

ಆ.1 ರಿಂದ ಆ.10 ರವರೆಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಬೇಕಾದರೂ ಈ ಪಾದಯಾತ್ರೆ ಮಾಡಬಹುದು. ಕೆಲವು ನಾಯಕರು ತಮ್ಮ ಕ್ಷೇತ್ರಗಳಲ್ಲೇ 75 ಕಿ.ಮೀ ಪಾದಯಾತ್ರೆ ಮಾಡುವುದಾಗಿ ತಿಳಿಸಿದ್ದು, ಅದಕ್ಕೂ ಅನುಮತಿ ನೀಡಿದ್ದೇವೆ.ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆ, ಈ ದೇಶಕ್ಕೆ ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆಯನ್ನು ಕೊಡುಗೆಯಾಗಿ ನೀಡಿದ್ದು ಕಾಂಗ್ರೆಸ್. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಇದ್ದರೆ ಅವರನ್ನು ಅಥವಾ ಅವರ ಕುಟುಂಬದವರನ್ನು ಭೇಟಿಯಾಗಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಆಯಾ ತಾಲೂಕಿನ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಲಾಗಿದೆ.’

ಪಕ್ಷದ ವೇದಿಕೆಯಲ್ಲಿ ಸಿದ್ದರಾಮೋತ್ಸವ:

‘ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು 75ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಪಕ್ಷದ ಚೌಕಟ್ಟಿನಲ್ಲಿ ನಡೆಸಲು ಅವರ ಹಿತೈಷಿಗಳು ತೀರ್ಮಾನಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಆಗಮಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ.’

ಪಕ್ಷ ಸಂಘಟನೆ ವಿಚಾರವಾಗಿ ಪದಾಧಿಕಾರಿಗಳ ಸಭೆ:

‘ಇಂದು ಪಕ್ಷದ ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳ ಸಭೆಯನ್ನು ನಡೆಸಿದ್ದು, ಪಕ್ಷದ ಸಂಘಟನೆ ಜವಾಬ್ದಾರಿಯನ್ನು ಯಾವ ರೀತಿ ನಿರ್ವಹಿಸಬೇಕು ಎಂದು ತಿಳಿಸಿದ್ದೇವೆ. ಮುಂದಿನ 10 ತಿಂಗಳು ಪ್ರತಿಯೊಬ್ಬರು ತಮಗೆ ವಹಿಸಿರುವ ಜಿಲ್ಲೆ ಹಾಗೂ ಕ್ಷೇತ್ರಗಳಲ್ಲಿ ತಿಂಗಳಿಗೆ ಕನಿಷ್ಠ 20 ದಿನಗಳ ಕಾಲ ಕೆಲಸ ಮಾಡಬೇಕು.

ಬೂತ್ ಮಟ್ಟದಿಂದ ಪಂಚಾಯ್ತಿವರೆಗೂ ಎಲ್ಲ ವಿಭಾಗಗಳಲ್ಲೂ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಪಕ್ಷದ ಸಂಘಟನೆ ಮಾಡಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು 50 ವರ್ಷದೊಳಗಿನವರೇ ಆಗಿರುವಂತೆ ನೋಡಿಕೊಳ್ಳಬೇಕು. ಐದು ವರ್ಷ ಅಥವಾ ಎರಡು ಮೂರು ಅವಧಿಗೆ ಅಧ್ಯಕ್ಷರಾಗಿದ್ದವರಿಗೆ ಬಡ್ತಿ ನೀಡಿ ಆ ಸ್ಥಾನವನ್ನು ಹೊಸಬರಿಗೆ ನೀಡಬೆಕು. ಪ್ರತಿ ಪಂಚಾಯ್ತಿಗೂ ಪ್ರಧಾನ ಕಾರ್ಯದರ್ಶಿಗಳು ಪ್ರವಾಸ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ.’

ಅನುಮತಿ ಕೇಳಿರಲಿಲ್ಲ

ಎಡಿಜಿಪಿ ಅಮೃತ್ ಪೌಲ್ ಅವರು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಇದರಲ್ಲಿ ಭಾಗಿಯಾಗಿರುವವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ನಾವು ಆಗ್ರಹಿಸಿದ್ದೇವೆ. ಈವರೆಗೂ ಬಂಧಿತರಾಗಿರುವವರ ಹೇಳಿಕೆ, ಯಾರು ಯಾರನ್ನು ಬಿಡಿಸಿದ್ದಾರೆ, ಏನೆಲ್ಲಾ ಪ್ರಭಾವ ಬೀರಿದ್ದಾರೆ ಎಂಬುದು ನನಗೆ ಗೊತ್ತಿದೆ’ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಅವರು ಹವಾಲ ನಡೆಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪ ಸಂಬಂಧ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರು ಮೊದಲು ಅವರ ಮುಖ್ಯಮಂತ್ರಿಗಳು, ಅವರ ದೊಡ್ಡ ನಾಯಕರ ಮುಖಕ್ಕೆ ಅಂಟಿರುವ ಮಸಿ ತೊಳೆದುಕೊಳ್ಳಲಿ’ ಎಂದು ತಿರುಗೇಟು ಕೊಟ್ಟರು.

ಜಮೀರ್ ಅಹ್ಮದ್ ಅವರ ಮನೆ ಮೇಲಿನ ಎಸಿಬಿ ದಾಳಿ ಮಾದರಿಯಲ್ಲಿ ಅಭಯ್ ಪಾಟೀಲ್ ಅವರ ಮೇಲೂ ಎಸಿಬಿ ದೂರು ದಾಖಲಿಸಿದ್ದು, ಅವರ ಮನೆ ಮೇಲೆ ದಾಳಿ ಮಾಡಲು ಸ್ಪೀಕರ್ ಅವರ ಅನುಮತಿ ಕೋರಲಾಗಿದೆ ಎಂಬುದನ್ನು ಗಮನಕ್ಕೆ ತಂದಾಗ ಕೇಳಿದ, ‘ನನ್ನ ಮನೆ ಮೇಲೆ ದಾಳಿ ಮಾಡುವಾಗ ಯಾರೂ ಸ್ಪೀಕರ್ ಬಳಿ ಅನುಮತಿ ಕೇಳಿರಲಿಲ್ಲ’ ಎಂದರು.

ಇದನ್ನೂ ಓದಿ:Mangalore Rain: ಕಡಲ್ಕೊರೆತಕ್ಕೊಳಗಾದ ಸ್ಥಳ ಪರಿಶೀಲನೆ ಮಾಡಿದ ಸಚಿವರು

RECOMMENDED

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್
Entertainment

ಇಂದು ನಾನು ಏನೇ ಆಗಿದ್ದರು ಪೋಷಕರು ಹಾಗೂ ಗುರುಗಳು ಕಾರಣ-ಸಂಗೀತ ನಿರ್ದೇಶಕ ಪ್ರದ್ಯೋತನ್

January 30, 2023
ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ
Entertainment

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

January 30, 2023
‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
Entertainment

‘ಹೊಂದಿಸಿ ಬರೆಯಿರಿ’ ಚಿತ್ರತಂಡದಿಂದ ವಿನೂತನ ಪ್ರಚಾರ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ

January 28, 2023
ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್
Entertainment

ಸೆಟ್ಟೇರಿತು ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾ – ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್

January 28, 2023
ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
Next Post
PSI Scam: ನಿದ್ದೆ ಬರ್ತಿಲ್ಲ ಎಂದು ಎಡಿಜಿಪಿ ಅಮೃತ್ ಪೌಲ್  ರಂಪಾಟ

PSI Scam: ನಿದ್ದೆ ಬರ್ತಿಲ್ಲ ಎಂದು ಎಡಿಜಿಪಿ ಅಮೃತ್ ಪೌಲ್ ರಂಪಾಟ

Mohammed Zubair: ಮೊಹಮ್ಮದ್ ಜುಬೇರ್ ಬಂಧನ ಕುರಿತು ಜರ್ಮನಿಗೆ ಭಾರತ ಹೇಳಿದ್ದೇನು ?

Mohammed Zubair: ಮೊಹಮ್ಮದ್ ಜುಬೇರ್ ಬಂಧನ ಕುರಿತು ಜರ್ಮನಿಗೆ ಭಾರತ ಹೇಳಿದ್ದೇನು ?

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist