ಹೆಡ್ಲೈನ್ಸ್ ಮ್ಯಾನೇಜ್ಡ್, ಎಕಾನಮಿ ಮಿಸ್ ಮ್ಯಾನೇಜ್ಡ್

ಗೃಹ (Cooking Gas Price) ಬಳಕೆಯ ಎಲ್ಪಿಜಿ ಸಿಲಿಂಡರ್ (LPG price hike) ಬೆಲೆಯಲ್ಲಿ 50 ರೂ. ಏರಿಕೆ ಮಾಡಲಾಗಿದ್ದು, ಈ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರದ (Central government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಬಿಜೆಪಿ (BJP) (Central government) ಕೇವಲ ಮುಖ್ಯಾಂಶ ನಿರ್ವಹಿಸುತ್ತಿದ್ದು, ಆರ್ಥಿಕತೆ ಬಗ್ಗೆ ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ. ಹೀಗಾಗಿ, ದೇಶದ ಆರ್ಥಿಕತೆ ಹಾಳು ಮಾಡಿದೆ. ಸರ್ಕಾರಿ (Government) ಸ್ವಾಮ್ಯದ ಸಬ್ಸಿಡಿ ರಹಿತ ಇಂಧನ ಬೆಲೆ ಸದ್ಯ 14.2 ಕೆಜಿಗೆ 1,053 ರೂ ಆಗಿದ್ದು, ಹೆಡ್ಲೈನ್ಸ್ ಮ್ಯಾನೇಜ್ಡ್, (Headlines Managed) ಎಕಾನಮಿ ಮಿಸ್ ಮ್ಯಾನೇಜ್ಡ್ (Economy Mismanaged) ಎಂದು ವಾಗ್ದಾಳಿ ನಡೆಸಿದ್ದಾರೆ.
Headlines Economy
— Rahul Gandhi (@RahulGandhi) July 6, 2022
Managed Mismanaged pic.twitter.com/mF9SHvrDCz
ಉಕ್ರೇನ್‌ನಲ್ಲಿ ಶೇ.90 ಮಂದಿ ಬಡತನಕ್ಕೆ!

ರಷ್ಯಾ-ಉಕ್ರೇನ್ ಯುದ್ಧದ (Russia-Ukraine War) ವೇಳೆ ಶೇ.90ರಷ್ಟು ಮಂದಿ ಉಕ್ರೇನಿಯನ್ನರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಲಕ್ಷಾಂತರ ಮಂದಿ ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಉಕ್ರೇನ್‌ನಲ್ಲಿ ಈಗ ಆಗಿರುವ ಹಾನಿಯನ್ನು ಸರಿಪಡಿಸಲು ಸಾಕಷ್ಟು ವರ್ಷಗಳೇ ಬೇಕಾಗುತ್ತದೆ. ಮನೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ದಾಳಿ ನಡೆದಿರುವ ಕಾರಣದಿಂದ ಉಕ್ರೇನ್ ಚೇತರಿಸಿಕೊಳ್ಳಲು ಕೆಲವು ವರ್ಷಗಳು ಬೇಕು ಎಂದು ಯುಎನ್ ಮುಖ್ಯಸ್ಥ ಅಂಟಾನಿಯೋ ಗುಟೆರಸ್ ಹೇಳಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ದೂರು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ವಿರುದ್ಧ ಕರ್ನಾಟಕ ಹೈಕೋರ್ಟ್‌ನ (High Court of Karnataka) ರಿಜಿಸ್ಟ್ರಾರ್ ಜನರಲ್‌ಗೆ ದೂರು ನೀಡಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಅವರ ಹೇಳಿಕೆಯ ವಿಡಿಯೋವೊಂದನ್ನು ರಾಹುಲ್ ಗಾಂಧಿಯವರು (Rahul Gandhi) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಆರೋಪದ ಮೇರೆಗೆ, ‘ಇದು ನ್ಯಾಯಾಂಗ ಉಲ್ಲಂಘನೆ’ ಎಂದು ಆರೋಪಿಸಿ ಗಿರೀಶ್ ಭಾರದ್ವಾಜ್ ಎಂಬುವವರು ದೂರು ನೀಡಿದ್ದಾರೆ. ರಾಹುಲ್ ಗಾಂಧಿ (Rahul Gandhi) ನಿನ್ನೆ ಆ ವಿಡಿಯೋ ಪೋಸ್ಟ್ ಮಾಡಿ, ‘ಕರ್ನಾಟಕ ಸರ್ಕಾರ ಭ್ರಷ್ಟ’ ಎಂದು ಉಲ್ಲೇಖಿಸಿದ್ದರು.
ವೀರೇಂದ್ರ ಹೆಗ್ಗಡೆಗೆ ಮೋದಿ ಅಭಿನಂದನೆ

ರಾಜ್ಯಸಭೆಗೆ ನಾಲ್ವರು ಸಾಧಕರು ನಾಮನಿರ್ದೇಶನಗೊಂಡ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಗಳ ಸ್ಥಳೀಯ ಭಾಷೆಯಲ್ಲೇ ಟ್ವಿಟ್ ಮಾಡಿ ಅಭಿನಂದಿಸಿದ್ದಾರೆ. ಕನ್ನಡದಲ್ಲಿ ಟ್ವಿಟ್ ಮಾಡಿ, ಸಮುದಾಯಕ್ಕೆ ಮಹೋನ್ನತ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಡಾ. ವೀರೇಂದ್ರ ಹೆಗ್ಗಡೆ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ, ಆರೋಗ್ಯ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಕೈಗೊಂಡಿರುವ ಮಹತ್ತರ ಕಾರ್ಯಗಳಿಗೆ ಸಾಕ್ಷಿಯಾಗುವ ಅವಕಾಶ ಒದಗಿಬಂದಿತ್ತು ಎಂದು ಮೋದಿ ಅವರು ಸ್ಮರಿಸಿಕೊಂಡಿದ್ದಾರೆ.
ಪಂಜಾಬ್ ಸಿಎಂಗೆ ಎರಡನೇ ಮದುವೆ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಎರಡನೇ ಮದುವೆಯಾಗಲಿದ್ದಾರೆ. ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ ಹಾಗೂ ತಮ್ಮ ಪರಿಚಯಸ್ಥ ಡಾ.ಗುರ್ ಪ್ರೀತ್ ಕೌರ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಮಾನ್ ಅವರು ಆರು ವರ್ಷಗಳ ಹಿಂದೆ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದು, ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಇಂದು ಜರುಗಲಿರುವ ವಿವಾಹ ಸಮಾರಂಭಕ್ಕೆ ದೆಹಲಿ ಸಿಎಂ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜಿವಾಲ್ ಕುಟುಂಬ ಸಮೇತ ಪಾಲ್ಗೊಳ್ಳಲಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ; #JoblessIndia ಟ್ರೆಂಡಿಂಗ್

ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೇ ತಿಂಗಳಲ್ಲಿ ಶೇಕಡ 6.62 ರಷ್ಟಿದ್ದ ನಿರುದ್ಯೋಗ ಪ್ರಮಾಣವು ಜೂನ್‌ನಲ್ಲಿ ಶೇಕಡ 8.03ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ಈ ಪ್ರಮಾಣವು ಶೇಕಡ 7.8ಕ್ಕೆ ಹೆಚ್ಚಿದೆ ಎಂದು ಸಿಎಂಐಇ ವರದಿ ಹೇಳಿದೆ. ಈ ಬಗ್ಗೆ ದೇಶದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಟ್ವಿಟ್ಟರ್‌ನಲ್ಲೂ #JoblessIndia ಟ್ರೆಂಡ್ ಆಗುತ್ತಿದೆ. ಮೋದಿ ಸರ್ಕಾರದ ವಿರುದ್ಧ ಹಲವು ಮೀಮ್‌ಗಳನ್ನು ಶೇರ್ ಮಾಡಲಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಲಾಲು ದೆಹಲಿಗೆ ಶಿಫ್ಟ್

ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರನ್ನು ಇಂದು ದೆಹಲಿಗೆ ಸ್ಥಳಾಂತರಿಸಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಲು ಅವರೊಂದಿಗೆ ಅವರ ಪುತ್ರಿ ಹಾಗೂ ಇತರೆ ವೈದ್ಯರ ತಂಡವೂ ತೆರಳಿದೆ. ಇದಕ್ಕೂ ಮುನ್ನವೇ ಲಾಲು ಪತ್ನಿ ಮತ್ತು ಕಿರಿಯ ಪುತ್ರ ದೆಹಲಿಗೆ ತೆರಳಿ ವ್ಯವಸ್ಥೆ ಪರಿಶೀಲಿಸಿದ್ದರು. ಮೆಟ್ಟಿಲುಗಳ ಮೇಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದಿದ್ದರಿಂದ ಲಾಲು ಅವರ ಭುಜಕ್ಕೆ ಪೆಟ್ಟು ಬಿದ್ದಿತ್ತು. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಾಲು ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.
ಶಾಸಕ ಜಮೀರ್ ಆಸ್ತಿ 2031% ಪಟ್ಟು ಹೆಚ್ಚಳ!

ತಮ್ಮ ಆದಾಯಕ್ಕಿಂತ ಶೇ.2031 ಪಟ್ಟು ಹೆಚ್ಚು ಅಕ್ರಮ ಆಸ್ತಿಯನ್ನು ಕಾಂಗ್ರೆಸ್ ಶಾಸಕ ಬಿ.ಝಡ್ ಜಮೀರ್ ಅಹಮದ್ ಖಾನ್ ಸಂಪಾದಿಸಿದ್ದಾರೆ ಎಂದು ಎಸಿಬಿಗೆ ಇಡಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ. ಜಮೀರ್ 87.44 ಕೋಟಿ (ಶೇ.2031) ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಇಡಿ ಉಲ್ಲೇಖಿಸಿದೆ. 2 ದಿನ ದಾಖಲೆಗಳನ್ನು ಸತತವಾಗಿ ಪರಿಶೀಲಿಸಿರುವ ಎಸಿಬಿ ಅಧಿಕಾರಿಗಳು ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಶಾಸಕ ಜಮೀರ್ ಅವರಿಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯಗೆ ‘ಜಯದೇವ ಶ್ರೀ’ ಪ್ರಶಸ್ತಿ

ಬಸವ ಕೇಂದ್ರದ ಜಗದ್ಗುರು ಮರುಘಾ ರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ನೀಡುವ ಪ್ರತಿಷ್ಠಿತ ಜಯದೇವ ಶ್ರೀ ಪ್ರಶಸ್ತಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಜನರಾಗಿದ್ದಾರೆ. ಜುಲೈ 12 ರಂದು ಜಯದೇವ ಮುರುಘಾ ರಾಜೇಂದ್ರ ಸ್ವಾಮೀಜಿಗಳ 65ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ, ಸಮಾಜಕ್ಕೆ ಸಿದ್ದರಾಮಯ್ಯ ಸಲ್ಲಿಸಿರುವ ಸೇವೆಯನ್ನು ಗುರ್ತಿಸಿ 50 ಸಾವಿರ ನಗದು ಹಾಗೂ ಸ್ಮರಣ ಸಂಚಿಕೆ ನೀಡಲಾಗುತ್ತದೆ ಎಂದು ಮುರುಘಾ ರಾಜೇಂದ್ರ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಇಂದು ಮಹೇಂದ್ರ ಸಿಂಗ್ ಧೋನಿಗೆ ಹುಟ್ಟುಹಬ್ಬ

ಟೀಮ್ ಇಂಡಿಯಾ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಜಾರ್ಖಂಡ್ ನ ರಾಂಚಿಯಲ್ಲಿ 1981ರ ಜುಲೈ 7ರಂದು ಜನಿಸಿದ್ದರು. ಇದರೊಂದಿಗೆ ಧೋನಿ ಇಂದು 41ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಧೋನಿ ನೇತೃತ್ವದಲ್ಲಿ ಭಾರತ ತಂಡ 2011ರಲ್ಲಿ ಐಸಿಸಿ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಇದಲ್ಲದೆ ಇವರ ನಾಯಕತ್ವದಲ್ಲಿ ಭಾರತ ಎರಡು ಬಾರಿ ಏಷ್ಯಾ ಕಪ್ ಗೆದ್ದಿದೆ. ಧೋನಿ ಒಟ್ಟು 90 ಟೆಸ್ಟ್, 350 ಒಡಿಐ, 98 ಟಿ-20 ಹಾಗೂ ಐಪಿಎಲ್ ಸೇರಿದಂತೆ 358 ಟಿ-20 ಪಂದ್ಯಗಳನ್ನು ಆಡಿದ್ದಾರೆ.