ಬಂಟ್ವಾಳ/ಚಿಕ್ಕಮಗಳೂರು: (ಜು.7):ಭಾರಿ ಮಳೆಗೆ ಗುಡ್ಡ ಕುಸಿದು ನಾಲ್ವರು ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ತಡರಾತ್ರಿ ನಡೆದಿದೆ.ಬಂಟ್ವಾಳ ತಾಲೂಕಿನ ಪಂಜಿ ಕಲ್ಲಿನ ಮುಕುಡ ಎಂಬಲ್ಲಿ ಗುಡ್ಡ ಕುಸಿದಿದ್ದು ಘಟನೆಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ನಾಲ್ವರು ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿದ್ದಾರೆ.
ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದು ಉಳಿದ ಇಬ್ಬರ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ ಎನ್ನಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನಕ್ಕೆ ಅಡಚಣೆ ಉಂಟಾಗಿದೆ ಕರಾವಳಿಯಲ್ಲಿ ಪ್ರವಾಹ ಹಾಗೂ ನಿರಂತರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿದೆ.
ಶೆಡ್ ಮೇಲೆ ರಾತ್ರಿ ಗುಡ್ಡ ಕುಸಿತದಿಂದ ಮಣ್ಣಿನಡಿಗೆ ಸಿಲುಕಿದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಓರ್ವ ರಾತ್ರಿ ಮೃತಪಟ್ಟಿದ್ದರೆ, ಇನ್ನೋರ್ವ ಮುಂಜಾನೆ ಸಾವನ್ನಪ್ಪಿದ್ದಾನೆ. ಓರ್ವ ಬಂಟ್ವಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಣ್ಣಿನಡಿಯಿಂದ ರಕ್ಷಿಸಲ್ಪಟ್ಟು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಕಾರ್ಮಿಕರಾದ ಸಂತೋಷ್ ಆಲಫುಝ ಮತ್ತು ಕೊಟ್ಟಾಯಂ ನಿವಾಸಿ ಬಾಬು ಎಂಬುವವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಪಾಲಕ್ಕಾಡು ನಿವಾಸಿ ವಿಜು ಎಂಬುವವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದರು. ಕಣ್ಣೂರು ನಿವಾಸಿ ಜಾನ್ ಎಂಬುವವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಹೆನ್ರಿ ಕಾರ್ಲೊ ಎಂಬವರ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಐವರು ಕಾರ್ಮಿಕರು ವಾಸವಿದ್ದ ಶೆಡ್ ಮೇಲೆ ಬುಧವಾರ ಸಂಜೆ ವೇಳೆ ಏಕಾಏಕಿ ಗುಡ್ಡ ಕುಸಿದಿತ್ತು. ಈ ವೇಳೆ ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದರು.
ರಾಜ್ಯದಲ್ಲಿ ಹಲವು ನದಿಗಳು ಅಪಾಯ ಮಟ್ಟದಲ್ಲಿ ಮೀರಿ ಹರಿಯುತ್ತಿದ್ದು ಕೃಷಿ ಹೊಲಗಳು ಜಾಮೀನುಗಳು ನೀರಿನಿಂದ ಜಲಾವೃತವಾಗಿದೆ.ಚಿಕ್ಕಮಗಳೂರು ಜಿಲ್ಲೆಯ ತೊಗರಿ ಅಂಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಣ್ಣ ಮತ್ತು ಸ್ನೇಹಿತರೊಂದಿಗೆ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಬಾಲಕಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾಳೆ. ಒಂದನೇ ತರಗತಿಯ ಶಾಲಾ ಬಾಲಕಿಯ ಪತ್ತೆಗಾಗಿ ಶೋಧ ಕಾರ್ಯ ಕೂಡ ಇಂದು ಮುಂದುವರೆದಿದೆ.
ಶೃಂಗೇರಿ ಶಾರದಾ ದೇವಸ್ಥಾನ ಸಮೀಪದಲ್ಲಿರುವ ಕಪ್ಪೆಶಂಕರ ಮಂಟಪ ಕಳೆದ ಮೂರು ದಿನಗಳಿಂದ ತುಂಗಾನದಿ ನೀರಿನಲ್ಲಿ ಮುಳುಗಿದೆ. ನದಿಪಾತ್ರದ ರಸ್ತೆಗಳಿಗೆ ಪೊಲೀಸ್ ಇಲಾಖೆ ಬ್ಯಾರಿಕೇಡ್‍ಗಳನ್ನು ಹಾಕಿ ಸಂಚಾರವನ್ನು ಬಂದ್‍ಗೊಳಿಸಿದೆ. ಅಲ್ಲಲ್ಲಿ ಅಡಕೆ ಮತ್ತು ಕಾಫಿತೋಟಗಳಿಗೆ ನೀರು ನುಗ್ಗಿದ್ದು ಅಲ್ಲಲ್ಲಿ ಮಳೆ ಅವಂತರಗಳನ್ನು ಸೃಷ್ಟಿಸಿದೆ.
ಇದನ್ನೂ ಓದಿ: Monsoon Rain: ಕರಾವಳಿ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ! ರೆಡ್ ಅಲರ್ಟ್ ಘೋಷಣೆ