MS Dhoni Birthday:(ಜು.7): ಇಂದು ಟೀಂ ಇಂಡಿಯಾ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (Mahindra Singh Dhoni) ಅವರ ಹುಟ್ಟುಹಬ್ಬ.ಮಹೇಂದ್ರ ಸಿಂಗ್ ಧೋನಿ (MS Dhoni Birthday)ಎಂದ್ರೆ ಥಟ್ಟನೆ ನೆನಪು ಆಗುವುದು ಚಿರತೆಯ ವೇಗ, ಮಾಸ್ಟರ್ ಮೈಂಡ್ ಜೊತೆಗೆ, ಮಾಹಿ ಸ್ಟಂಪಿಂಗ್.
ಯೆಸ್.. ಮಹೇಂದ್ರ ಧೋನಿ ಸ್ಟಂಪ್ಸ್ ಹಿಂದೆ ಇದ್ದಾರೆ ಎಂದರೆ ಬ್ಯಾಟರ್ ಗಳು ಒಂದು ಸೆಕೆಂಡ್ ಕ್ರೀಸ್ ಬಿಟ್ಟು ಮುಂದೆ ಹೋಗಲು ಹೆದರುತ್ತಾರೆ. ಅದು ಕ್ರೀಸ್ ಹಿಂದೆ ಮಾಹಿ ಮಾಡುವ ಕಮಾಲ್ ಗೆ ಇರುವ ತಾಕತ್ತು.ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಸ್ಟಂಪಿಂಗ್‌ನ ವಿಶ್ವ ದಾಖಲೆ (World Record)ಮಹೇಂದ್ರ ಸಿಂಗ್ ಧೋನಿ ಹೆಸರಲ್ಲೇ ಇದೆ. ಕೇವಲ 0.08 ಸೆಕೆಂಡ್ ಗಳಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಜಾರ್ಜ್ ಬೇಲಿಯನ್ನು )Indian Captain) ಧೋನಿ ಸ್ಟಂಪ್ ಮಾಡಿದ್ದರು. ಇದು ಮಾಹಿ ಸರ್ವ ಶ್ರೇಷ್ಠ ದಾಖಲೆ.ಇನ್ನೂ, ಏಕದಿನ ಕ್ರಿಕೆಟ್‌ನಲ್ಲಿ 321 ಕ್ಯಾಚ್ ಹಿಡಿದಿರುವ ತಲಾ ಧೋನಿ, 123 ಸ್ಟಂಪಿಂಗ್ ಮೂಲಕ ಬ್ಯಾಟರ್ ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

ಪ್ರಶಸ್ತಿಗಳು
ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದ ಉಭಯ ODI ಸರಣಿಯನ್ನು ಮೊದಲ ಬಾರಿಗೆ ಗೆದ್ದ ತಂಡದ (team Captain)ನಾಯಕರಾಗಿದ್ದರು. ಧೋನಿಯು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ೨೦೦೮ ಮತ್ತು ೨೦೦೯ರಲ್ಲಿ ವರ್ಷದ ICC ODI ಉತ್ತಮ ಆಟಗಾರ ಪ್ರಶಸ್ತಿ (ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ), ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಮತ್ತು ಪದ್ಮ ಶ್ರೀ, 2009ರಲ್ಲಿ ಭಾರತದ ನಾಲ್ಕನೇ ಅತಿ ದೊಡ್ಡ ನಾಗರಿಕ ಸೇವಾ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: Diamond Rain: ಆ ಗ್ರಹದಲ್ಲಿ ಬೀಳುತ್ತೆ ವಜ್ರದ ಮಳೆ! ಖಚಿತ ಪಡಿಸಿದ ವಿಜ್ಞಾನಿಗಳು..