ಲಂಡನ್: (ಜು.7):Boris Johnsonಬೋರಿಸ್ ಜಾನ್ಸನ್ ಅವರು ಬ್ರಿಟನ್ ಪ್ರಧಾನಿ ಹುದ್ದೆಗೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆಯು ಎರಡು ತಿಂಗಳವರೆಗೂ ಮುಂದುವರಿಯುವುದರಿಂದ ಆವರೆಗೂ ಬೋರಿಸ್ ಅವರೇ ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.
ಪ್ರಧಾನಿಯಾಗಿ ನಾನು ಮಾಡಿದ ಕಾರ್ಯಗಳು ನನಗೆ ತೃಪ್ತಿ ತಂದಿದೆ. ಸರ್ಕಾರದ ಸಾಧನೆಗಳಿಗೆ ಹೆಮ್ಮೆಯಾಗುತ್ತಿದೆ. ನನ್ನ ರಾಜೀನಾಮೆಯಿಂದ ಕೆಲವರು ನಿರಾಶೆಗೊಳ್ಳುತ್ತಾರೆ. ಹಲವರು ನಿರಾಶೆಗೊಂಡಿದ್ದಾರೆ ಎಂದು ತಿಳಿದಿದೆ. ವಿಶ್ವದ ಅತ್ಯುತ್ತಮ ಸ್ಥಾನವನ್ನು ತ್ಯಜಿಸುವುದು ನನಗೂ ಕಷ್ಟದ ಕೆಲಸ. ಇದರಿಂದ ದುಃಖಿತನಾಗಿದ್ದೇನೆ ಎಂದು ಭಾಷಣದಲ್ಲಿ ಹೇಳಿದ್ದಾರೆ.
ಪ್ರಸ್ತುತ, ಮಾಜಿ ಹಣಕಾಸು ಸಚಿವ ರಿಷಿ ಸುನುಕ್, ಸಚಿವೆ ಲಿಸ್ ಟ್ರಸ್, ಜೆರ್ಮಿ ಹಂಟ್, ಬೆನ್ ವ್ಯಾಲೆಸ್, ನಾಧಿಮ್ ಜಹಾವಿ ಹಾಗೂ ಪೆನ್ನಿ ಮೋರ್ಡಂಟ್ ಹಲವು ಮುಖಂಡರು ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
2016ರಲ್ಲಿ ಡೇವಿಡ್ ಕ್ಯಾಮೆರಾನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೂರು ವಾರಗಳ ಒಳಗೆ ಥೆರೆಸಾ ಮೇ ಮುಂಚೂಣಿಗೆ ಬಂದರು.ಥೆರೆಸಾ ಅವರ ಮೂರು ವರ್ಷಗಳ ಆಡಳಿತದ ನಂತರ 2019ರಲ್ಲಿ ಬೋರಿಸ್ ಜಾನ್ಸನ್ ಮತ್ತು ಜೆರೆಮಿ ಹಂಟ್ ನಡುವೆ ಪೈಪೋಟಿ ನಡೆದಿತ್ತು. ಥೆರೆಸಾ ರಾಜೀನಾಮೆ ಸಲ್ಲಿಸಿ ಎರಡು ತಿಂಗಳಲ್ಲಿ ಬೋರಿಸ್ ಆಯ್ಕೆಯಾಗಿತ್ತು.