ಲಂಡನ್:(ಜು.7) Britain Political Crisis: ಹಗರಣದಲ್ಲಿ ಸಿಲುಕಿರುವ ಸರ್ಕಾರದಿಂದ (Britain Political Crisis)ರಾಜೀನಾಮೆ ನೀಡಬೇಕು ಎಂದು ಒತ್ತಡವನ್ನ ಎದುರಿಸುತ್ತಿರುವ ಬೋರಿಸ್ ಜಾನ್ಸನ್ ಬ್ರಿಟಿಷ್ (Boris Jonson) ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಡ ಹೇರಲಾಗಿದೆ.ಕಳೆದ 48 ಗಂಟೆಗಳಲ್ಲಿ 5 ಕ್ಯಾಬಿನೆಟ್ ಸಚಿವರು ಸೇರಿದಂತೆ 39 ಸಚಿವರು ರಾಜೀನಾಮೆ ನೀಡಿದ್ದಾರೆ ಸರ್ಕಾರವನ್ನ ಉಳಿಸಲು ಪ್ರಮುಖ ಪಾತ್ರವಹಿಸಿದ್ದ ಇಬ್ಬರು ಸಚಿವರಾದ (Rishi Sunak) ರಿಷಿ ಸುನಕ್ ಮತ್ತು (Sajid Javad)ಸಾಜಿದ್ ಜಾವದ್ ಕೂಡ ಸಚಿವ ಸ್ಥಾನವನ್ನು ತೊರೆದಿದ್ದಾರೆ.
ಬ್ರಿಟನ್ ರಾಜಕೀಯದಲ್ಲಿ (Britain Political Crisis) ಎದ್ದಿರುವ ಬಿಕ್ಕಟ್ಟಿನಿಂದ ಅನಿಕ ಪ್ರಶ್ನೆಗಳು ಮೂಡಿದೆ ಮುಂದೆ ಯಾರಾಗುತ್ತಾರೆ ? (Resigned)ಬೋರಿಸ್ ಕುರ್ಚಿಯನ್ನು ಬಿಡುತ್ತಾರಾ? ಹೊಸ ಪ್ರಧಾನಿ ಯಾರಾಗುತ್ತಾರೆ ಎಂಬ ಅನುಮಾನ ಮೂಡಿದೆ
ಆದರೆ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ (Narayan Murthy) ಅವರ ಅಳಿಯ ರಿಷಿ ಸುನಕ್ ಅವರು ಬ್ರಿಟನ್ ಮುಂದಿನ ಪ್ರಧಾನಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.ಬ್ರಿಟನ್ ಪ್ರಧಾನ ಮಂತ್ರಿ ಹುದ್ದೆ ಭಾರತೀಯ ಮೂಲದ ವ್ಯಕ್ತಿಗೆ ಲಭಿಸಲಿದೆಯೇ? (Finance Minister) ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಪ್ರಧಾನ ಮಂತ್ರಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ಮುಂದಿದ್ದಾರೆಯೇ? ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಇತಿಹಾಸ ಸೃಷ್ಟಿಸಲಿದ್ದಾರೆಯೇ? ಈ ಪ್ರಶ್ನೆಗಳು ಬ್ರಿಟನ್‌ನಲ್ಲಿ ಹರಿದಾಡುತ್ತಿವೆ.ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ ಅವರ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಪ್ರಧಾನಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು (British Report) ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ
ವಿವಾದವೇನು?

ಬ್ರಿಟನ್ ನಲ್ಲಿ ಕೊರೊನಾ ಮೊದಲ ಅಲೆಯ ಲಾಕ್ ಡೌನ್ (Corona Lockdown) ಜಾರಿಯಲ್ಲಿದ್ದಾಗ 2020 ಮೇನಲ್ಲಿ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ನೀಡಿದ್ದ ಮದ್ಯದ ಪಾರ್ಟಿ ವಿವಾದ ಸೃಷ್ಟಿಸಿದೆ.ಕೋವಿಡ್ ನಿಯಮ ಉಲ್ಲಂಘಿಸಿ, ಬೋರಿಸ್ ಜಾನ್ಸನ್ ನೀಡಿದ್ದ ಮದ್ಯ ಪಾರ್ಟಿ ವಿಡಿಯೋವೊಂದು ಇತ್ತೀಚಿಗೆ ಬೆಳಕಿಗೆ ಬರುವ ಮೂಲಕ ವಿರೋಧ ಪಕ್ಷ ಲೇಬರ್ ಪಾರ್ಟಿ, ಸ್ವಂತ ಪಕ್ಷ ಕನ್ಸರ್ವೇಟಿವ್ಸ್ ನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬ್ರಿಟನ್ ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆ ನಡೆದ ಕಳೆದ ವರ್ಷ ಏಪ್ರಿಲ್ 17ರ ಹಿಂದಿನ ದಿನ ಡೌನಿಂಗ್ ಸ್ಟ್ರೀಟ್ ನಲ್ಲಿ 30 ಮಂದಿ ಡ್ರಗ್ಸ್ ಹಾಗೂ ಮದ್ಯದ ಪಾರ್ಟಿ ನಡೆಸಿದ್ದರು ಎಂಬ ಆರೋಪ ಬಂದಿದೆ. ಫಿಲಿಪ್ ಅವರ ಪಾರ್ಥಿವ ಶರೀರ ಇನ್ನೂ ಇರುವಾಗಲೇ ಮೋಜಿನ ಪಾರ್ಟಿ ನಡೆಸಿರುವ ಬಗ್ಗೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ. ಪಾರ್ಟಿ ಗೇವ್ ವಿವಾದದ ಬಗ್ಗೆ ಬೋರಿಸ್ ಬ್ರಿಟಿಷ್ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ ಹೊರತಾಗಿಯೂ ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ.