ಬೆಂಗಳೂರು:(ಜು.7): Rija Reji: ಅಮೆರಿಕದ ಗ್ಲೋಬಲ್ ಡೌನ್ ಸಿಂಡ್ರೋಮ್ ಫೌಂಡೇಶನ್ *America Global Down Syndrome Foundation) ಪ್ರತಿವರ್ಷವೂ ಫ್ಯಾಷನ್ ಷೋ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. (Fashion Show – Be Beautiful, Be Yourself) ‘ಫ್ಯಾಶನ್ ಷೋ – ಬಿ ಬ್ಯೂಟಿಫುಲ್, ಬಿ ಯುವರ್‌ಸೆಲ್ಫ್’ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಇದೇ ಮೊದಲ ಬಾರಿಗೆ (Bangalore) ಬೆಂಗಳೂರಿನ 23 ವರ್ಷದ ಯುವತಿ ಆಯ್ಕೆಯಾಗಿದ್ದಾರೆ.ಡೌನ್ ಸಿಂಡ್ರೋಮ್ ಹೊಂದಿರುವ 20ಕ್ಕೂ ಹೆಚ್ಚು ಮಾಡೆಲ್ ಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದು, ಬೆಂಗಳೂರಿನ (Rija Reji) ರಿಜಾ ರೆಜಿ ಆಯ್ಕೆಯಾಗಿದ್ದಾರೆ
ಫೆಬ್ರವರಿಯಲ್ಲಿ ಆನ್‌ಲೈನ್ ಆಡಿಷನ್‌ನಲ್ಲಿ(Audition) ರಿಜಾ ಆಯ್ಕೆಯಾದರು. ಆಕೆಯ ವೇಷಭೂಷಣಗಳು, ಆಕೆಯ ವ್ಯಕ್ತಿತ್ವದ ಕುರಿತು ಪ್ರಶ್ನೋತ್ತರ ಅವಧಿ ಮತ್ತು ಸಣ್ಣ ರ‍್ಯಾಂಪ್ ವಾಕ್ ಆಧಾರದ ಮೇಲೆ ರಿಜಾ ಅವರ ಆಯ್ಕೆಯಾಗಿದೆ.ತನ್ನ ಅಂಗವೈಕಲ್ಯದಿಂದ ಲಾಭ ಹುಡುಕುವ ಹುಡುಗಿ ಅವಳಲ್ಲ ಎನ್ನುತ್ತಾರೆ ರಿಜಾ ತಾಯಿ ಅನಿತಾ. ವಿಕಲಚೇತನರನ್ನು ಸಬಲೀಕರಣಗೊಳಿಸುವ ಬೆಂಗಳೂರು ಮೂಲದ ಫೌಂಡೇಶನ್ ಬ್ಯೂಟಿಫುಲ್ ಟುಗೆದರ್‌ನ (Co Founder)ಸಹ-ಸಂಸ್ಥಾಪಕಿಯಾಗಿದ್ದಾರೆ
‘ಈ ಫ್ಯಾಷನ್ ಈವೆಂಟ್ಗೆ ಭಾರತದಿಂದ ಆಯ್ಕೆಯಾದ (First) ಏಕೈಕ ಸ್ಪರ್ಧಿ ಎಂದು ತಿಳಿದು ನನಗೆ ಆಶ್ಚರ್ಯವಾಗಿದೆ. ಅದರ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸಲು ತುಂಬಾ ಉತ್ಸುಕಳಾಗಿದ್ದೇನೆ. ರಂಗಭೂಮಿ ನನ್ನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಇದು ನನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ತೆರೆಯಲು ಮತ್ತು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು ಎಂದಿದ್ದಾರೆ ರಿಜಾ ರೆಜಿ.
ಇದನ್ನೂ ಓದಿ:Britain Political Crisis : ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಬೋರಿಸ್ ?