Breaking News:(ಜು.6): ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು(D Veerendra Heggade) ರಾಜ್ಯಸಭೆಗೆ ನಾಮ ನಿರ್ದೇಶನ (Nomination) ಮಾಡಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, (Rajya Sabha) ವೀರೇಂದ್ರ ಹೆಗ್ಗಡೆಯವರಿಗೆ ಶುಭಾಶಯ ತಿಳಿಸಿದ್ದಾರೆ.
“ಶ್ರೀ ವೀರೇಂದ್ರ ಹೆಗ್ಗಡೆಯವರು ಸಮಾಜ (D Veerendra Heggade)ಸೇವೆಯಲ್ಲಿ ಸದಾ ಮುಂದಾಳತ್ವ ವಹಿಸಿದ್ದಾರೆ. ಧರ್ಮಸ್ಥಳದಲ್ಲಿ ದೇವರಿಗೆ ಪೂಜೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿತ್ತು. ಜೊತೆಗೆ ವೀರೇಂದ್ರ ಹೆಗ್ಗಡೆಯವರು ಆರೋಗ್ಯ, ಶಿಕ್ಷಣ ಮತ್ತು ನಮ್ಮ ಸಂಸ್ಕೃತಿಗೆ ನೀಡುತ್ತಿರುವ ಕೊಡುಗೆಯನ್ನು ಹತ್ತಿರದಿಂದ ನೋಡಿದ್ದೇನೆ. ಇಂತಹ ವ್ಯಕ್ತಿ ಸಂಸತ್ತಿಗೆ ನಾಮ ನಿರ್ದೇಶನವಾಗಿರುವುದರಿಂದ ಸಂಸತ್ ಕಲಾಪಕ್ಕೆ ನಿಜವಾಗಿಯೂ (PM Narendra Modi) ಸಹಕಾರಿಯಾಗಲಿದೆ” ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Shri Veerendra Heggade Ji is at the forefront of outstanding community service. I have had the opportunity to pray at the Dharmasthala Temple and also witness the great work he is doing in health, education and culture. He will certainly enrich Parliamentary proceedings. pic.twitter.com/tMTk0BD7Vf
— Narendra Modi (@narendramodi) July 6, 2022
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೊತೆಗೆ ಖ್ಯಾತ ಸಂಗೀತ ನಿರ್ದೇಶಕ (ilayaraja) ಇಳಯರಾಜಾ, ಕಥೆಗಾರ ಮತ್ತು ಖ್ಯಾತ ನಿರ್ದೇಶಕ (S S Rajamouli) ರಾಜಮೌಳಿಯವರ ತಂದೆ ವಿ.ವಿಜಯೇಂದ್ರ ಪ್ರಸಾದ್, ಪ್ರಖ್ಯಾತ ಅಥ್ಲೀಟ್ ಪಿ.ಟಿ.ಉಷಾ (P T Usha) ಅವರು ಕೂಡ ರಾಜ್ಯಸಭೆಗೆ ನಾಮ ನಿರ್ದೇಶನವಾಗಿದ್ದಾರೆ. ಈಗ ರಾಷ್ಟ್ರಪತಿಗಳು ನಾಮ ನಿರ್ದೇಶನ ಮಾಡಿರುವ ನಾಲ್ಕು ಜನ ಸಹ ದಕ್ಷಿಣ ಭಾರತದವರಾಗಿರುವುದು ವಿಶೇಷ. ಅಲ್ಲದೇ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳಕ್ಕೆ ಸೇರಿದ ತಲಾ ಒಬ್ಬರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.
The creative genius of @ilaiyaraaja Ji has enthralled people across generations. His works beautifully reflect many emotions. What is equally inspiring is his life journey- he rose from a humble background and achieved so much. Glad that he has been nominated to the Rajya Sabha. pic.twitter.com/VH6wedLByC
— Narendra Modi (@narendramodi) July 6, 2022
“ಪಿ.ಟಿ.ಉಷಾ ಅವರು (P T Uasha) ಭಾರತೀಯರೆಲ್ಲರಿಗೂ ಸ್ಫೂರ್ತಿ ತುಂಬುವ ವ್ಯಕ್ತಿತ್ವ ಹೊಂದಿರುವವರು. ಕ್ರೀಡಾ ಕ್ಷೇತ್ರದಲ್ಲಿ ಉಷಾ ಅವರ ಮಾಡಿರುವ ಸಾಧನೆ ಎಲ್ಲರಿಗೂ ಚಿರಪರಿಚಿತ. ಇದರ ಜೊತೆಗೆ ಕಳೆದ ಕೆಲ ವರ್ಷಗಳಿಂದ ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ಮಾಡುತ್ತಿರುವುದು ಬಹುತೇಕರಿಗೆ ಗೊತ್ತಿಲ್ಲ. ಇಂತಹವರು ರಾಜ್ಯಸಭೆಗೆ ನಾಮ ನಿರ್ದೇಶನವಾಗಿರುವುದಕ್ಕೆ ಶುಭಾಶಯ ತಿಳಿಸುತ್ತೇನೆ”, ಎಂದು ಪಿ.ಟಿ.ಉಷಾ ಕುರಿತು ಮೋದಿ ಟ್ವೀಟ್ ಮಾಡಿದ್ದಾರೆ.
Shri V. Vijayendra Prasad Garu is associated with the creative world for decades. His works showcase India's glorious culture and have made a mark globally. Congratulations to him for being nominated to the Rajya Sabha.
— Narendra Modi (@narendramodi) July 6, 2022