Karnataka Rain: (ಜು.6): ರಾಜ್ಯದ್ಯಂತ ಇಂದು ಕೂಡ ವ್ಯಾಪಕ ಮಳೆ ಆಗುತ್ತದೆ (Karnataka Rain) ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ಅಭಿವೃದ್ಧಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ.ಕಳೆದ ಎರಡು ಭಾರೀ (Flood) ಪ್ರವಾಹದ ಸ್ಥಿತಿ ಕಂಡ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಇಂದು ಸುರಿದ ಮಳೆಗೆ (Uttara kannada) ಪ್ರವಾಹದ ನೆನಪು ಮತ್ತೆ ಕಾಡಿದೆ.ಇನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕಾರವಾರ, ಕುಮುಟಾ, ಹೊನ್ನಾವರ, ಅಂಕೋಲಾ ಸೇರಿದಂತೆ ಹಲವು ಕಡೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ
ನದಿಗಳು ಭರ್ತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಗಾವಳಿ (Ganagavli) ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ, ಇನ್ನೂ ಕಾಳಿನ ಯು ಕೂಡ ಹರಿಯುತ್ತಿದ್ದು, ನದಿ ದಡದಲ್ಲಿರುವ ಜನ ವಸತಿ ಪ್ರದೇಶಗಳಲ್ಲಿ ನೀರು ಬರುವ ಸಾಧ್ಯತೆ ಇದ್ದು, ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ.ಮಲೆನಾಡಿನ ಶಿರಸಿ, ಎಲ್ಲಾಪುರ, ಸಿದ್ದಾಪುರದಲ್ಲೂ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. (Malenadu) ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರು ಕಂಗಲಾಗಿದ್ದಾರೆ.ಭಾರಿ ಮಳೆಗೆ ಬೃಹತ್ ಮರ ಧರೆಗುರಳಿ ಬಿದ್ದಿದ್ದು ವಾಹನ ಸಂಚಾರ (Tree Fall down)ಕೆಲಕಾಲ ಅಸ್ತವ್ಯಸ್ತವಾಗಿತ್ತು. ಪೊಲೀಸ್ ಇಲಾಖೆ ಸಿಬ್ಬಂದಿಗಳು ಅರಣ್ಯ ಇಲಾಖೆ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ, ಮರ ತೆರವು ಕಾರ್ಯಾಚರಣೆ ಕೈಗೊಂಡು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು
ಇನ್ನು ಕಾರವಾರ ತಾಲೂಕಿನ ಅರ್ಗಾ ಮತ್ತು ಚಂಡಿಯ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿರುವ ವಸ್ತುಗಳೆಲ್ಲ ನೀರಿಗೆ ತೇಲಿ ಹೋಗಿದೆ.(Argaa) ಅರ್ಗ ನೌಕ ನೆಲೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನೀರು ತುಂಬಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು ವಾಹನ ಸಂಚಾರರೂ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಇನ್ನು ಕೆಲ ಕುಟುಂಬಗಳು ಕಾಳಜಿ ಕೇಂದ್ರಕ್ಕೆ ಸೇರಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಳಷಿ ಘಟ್ಟದಲ್ಲಿ (Alashi) ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾದ ಪರಿಣಾಮ ವಾಹನ ಸಂಚಾರರು (Landslide)ಭಯದಲ್ಲೇ ಸಂಚಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ (Schools & Collages) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ (Holiday Declared)ಮಾಡಿದ್ದು, ಕರಾವಳಿಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.