ಕೇರಳ: (ಜು.6): Elephant: ಪ್ರಾಣಿಗಳಿಗೆ ಯಾವುದೇ ಹಾಸ್ಪಿಟಲ್ ಆಗಲಿ ಇರೋದಿಲ್ಲ.. ಮನುಷ್ಯರ ಹಾಗೆ ಆಸ್ಪತ್ರೆಗಳಲ್ಲಿ ಹೆರಿಗೆ ಆಗೋದು ಕನಸಿನ ವಿಚಾರ..ಹೌದು ಕೇರಳ ತಮಿಳುನಾಡು ಸಂಪರ್ಕಿಸುವ ರಸ್ತೆಯೊಂದರಲ್ಲಿಯೇ ಒಂದು ಮರಿಗೆ ಜನ್ಮ ನೀಡಿದೆ.ನಡು ರಸ್ತೆಯಲ್ಲಿ ಮುದ್ದಾದ ಆನೆ ಮರಿಗೆ ಜನ್ಮ ನೀಡಿದ ಹಿನ್ನೆಲೆ ಒಂದು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ತಮಿಳುನಾಡು ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಮರಿಯೊಂದು ಮರಿಗೆ ಜನ್ಮ ನೀಡಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು ನವಜಾತ ಆನೆ ಹಾಗೂ ಅದರ ತಾಯಿ ಹತ್ತಿರದ ಅರಣ್ಯಕ್ಕೆ ಹೋದ ಬಳಿಕ ಸಂಚಾರ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಆನೆ ಜನ್ಮ ನೀಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.ತುಂಬು ಗರ್ಭಿಣಿಯಾಗಿದ್ದ ಆನೆ ಹೆರಿಗೆಯ ನೋವನ್ನ ತಾಳಲಾರದೆ ರಸ್ತೆಗೆ ಬಂದಿದೆ ಕಡೆಗೆ ಅಲ್ಲಿಯೇ ಮರಿಗೆ ಜನ್ಮ ನೀಡಿದೆ ವಾಹನ ಸವಾರರು ಗಜ ಪ್ರವಾಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಬಳಿಕ ಆನೆ ತನ್ನ ಮರಿಯೊಂದಿಗೆ ಕಾಡಿಗೆ ಹೋಗಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.