Chandrashekhar Guruji: (ಜು.6): ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ (Chandrashekhar Guruji) ಹತ್ಯೆಯ ಹಿನ್ನೆಲೆ ಅನೇಕ ಅನುಮಾನಗಳು ಮೂಡಿದೆ. ಹುಬ್ಬಳ್ಳಿಯ ಪ್ರೆಸಿಡೆಂಟ್( President Hotel) ಹೋಟೆಲ್ ನಲ್ಲಿ ಹತ್ಯೆಯಾಗಿರುವ ಚಂದ್ರಶೇಖರ್ ಗುರೂಜಿಯ (FIR)ಪ್ರಥಮ ಮಾಹಿತಿ ವರದಿ ಬಹಿರಂಗವಾಗಿದೆ.
ಹೌದು ಸರಳ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ (Chandrashekhar Guruji) ಅವರ ಬಗ್ಗೆ ಎಫ್ ಐ ಆರ್ ನಲ್ಲಿ ಕೆಲ ಅಂಶಗಳು ಬಯಲಾಗಿದೆಘಟನೆಗೆ ಸಂಬಂಧಿಸಿದಂತೆ ಚಂದ್ರಶೇಖರ್ ಗುರೂಜಿಯವರ ಸಹೋದರನ ಮಗ ಸಂಜಯ್ ಅಂಗಡಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸರಳ ವಾಸ್ತು ಸಂಸ್ಥೆಯಲ್ಲಿ ಅವ್ಯವಹಾರ ನಡೆಸಿದ್ದಕ್ಕೆ ಮಹಾಂತೇಶ್ ಅವರನ್ನು ಚಂದ್ರಶೇಖರ್ ಗುರೂಜಿ ಕೆಲಸದಿಂದ ತೆಗೆದಿದ್ರು. ಹಾಗೂ ಇದೇ ಸಿಟ್ಟಿನಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಜೆಸಿ ನಗರದಲ್ಲಿ ಗುರೂಜಿ ನಿರ್ಮಿಸಿದ್ದ(Mahantesh) ಅಪಾರ್ಟ್ಮೆಂಟ್ನಲ್ಲಿ ಪಾರ್ಕಿಂಗ್ ಜಾಗ ಕೂಡ ಕೊಟ್ಟಿರಲಿಲ್ಲ. ಇನ್ನು ಮನೆಗೆ ಸೋಲಾರ್ ವ್ಯವಸ್ಥೆ ಅಳವಡಿಕೆ ಮಾಡಿರಲಿಲ್ಲ ಎಂದು ಗ್ರಾಹಕರ ನ್ಯಾಯಾಲಯದಲ್ಲಿ ಮಹಾಂತೇಶ ದೂರು ದಾಖಲಿಸಿದ್ದರು.
ಬಹುಶಃ ಅಲ್ಲಿಂದ ದ್ವೇಷ ಶುರುವಾಗಿತ್ತೇನೋ? ಪ್ರಕರಣವನ್ನ ಹಿಂಪಡೆಯಲು ಗುರೂಜಿಯವರಲ್ಲಿ ಆಗಾಗ ಹಣ ಕೇಳುತ್ತಿದ್ದರು. ಅದಲ್ಲದೆ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದರು.ಗುರುಜಿಯವರ ಹತ್ಯೆ (Chandrashekhar Guruji) ಕಾರಣಕ್ಕೆ ಮಹಾಂತೇಶನನ್ನು ಕೆಲಸದಿಂದ ವಜಾ ಮಾಡಿದ್ದಕ್ಕೆ ಹಾಗೂ ಹಣ ನೀಡಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಸರಳ ವಾಸ್ತು ಬಗ್ಗೆ ಹಲವರಿಗೆ ಸಲಹೆ ನೀಡುತ್ತಿದ್ದ ಗುರೂಜಿಯವರು ದೇಶ ವಿದೇಶಗಳಿಂದ ಬರುವ ಗ್ರಹಕರಿಗೆ ಉದ್ಯೋಗದ ಹೆಸರಿನಲ್ಲಿ ಆಸ್ತಿ ಮಾಡಿದ್ರಾ ಎಂಬ ಅನುಮಾನವೂ ಕೂಡ ಕಾರಣವಾಗಿದೆ. ಇನ್ನೂ ಕೊಲೆಯ ಹಿಂದೆ ಪ್ರಮುಖ ಪಾತ್ರವಹಿಸಿರುವ ವನಜಾಕ್ಷಿ, (Chandrashekhar Guruji) ಚಂದ್ರಶೇಖರ್ ಗುರೂಜಿ ಜೊತೆ ಅತ್ಯಂತ ಸಲುಗೆ ಹೊಂದಿದ್ದರು ಎನ್ನಲಾಗಿದೆ.
ವರಜಾಕ್ಷಿ ಹೆಸರಿನಲ್ಲಿ ಅನೇಕ ಆಸ್ತಿಗಳನ್ನು (Property Registration)ನೋಂದಣಿ ಮಾಡಿದ್ದರು. ಸಾವಿರಾರು ಕೋಟಿ ಒಡೆಯನಾಗಿದ್ದ ಗುರೂಜಿ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ವ್ಯವಹಾರ ನಡೆಸಿಕೊಂಡು ಬರುತ್ತಿದ್ದರು. ವನಜಾಕ್ಷಿ ಜೊತೆ ಅಷ್ಟೆಲ್ಲ ವ್ಯವಹಾರ ಮಾಡಿದ್ದ ಗುರೂಜಿಯ ಬಗ್ಗೆ ಕೆಲ ಕಡೆ ಅನುಮಾನ ವ್ಯಕ್ತವಾಗಿದೆ.