ಬೆಂಗಳೂರು: (ಜು.5):PSI Recruitment Scam: ರಾಜ್ಯದಲ್ಲಿ ನಡೆದ ಪಿಎಸ್ಐ ನೇಮಕಾತಿ ಹಗರಣದಲ್ಲಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿ ಅಮಾನತ್ತಾಗಿದ್ದಾರೆ. ಅಂದು ಹಗರಣದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದಾಗ ಗೃಹ ಸಚಿವ ಅರವ ಜ್ಞಾನೇಂದ್ರ ಅವರು ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ, ಭ್ರಷ್ಟಾಚಾರ ನಡೆದಿಲ್ಲ ಎಂದಿದ್ದರು, ಇದೀಗ ಸ್ವತಃ ಸಿಐಡಿ ಪೊಲೀಸರೇ ಉನ್ನತ ಅಧಿಕಾರಿಯನ್ನು ಬಂಧಿಸಿದ್ದಾರೆ ಇದಕ್ಕೆ ಗೃಹ ಸಚಿವರು ಏನೆಂದು ಉತ್ತರ ಕೊಡುತ್ತಾರೆ? ಒಬ್ಬ ಜವಾಬ್ದಾರಿಯ ಸ್ಥಾನದಲ್ಲಿರುವ ಗ್ರಹ ಸಚಿವರು ಇಲಾಖೆಯ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕಿದರು. ಐಪಿಎಸ್ ಅಧಿಕಾರಿಯ ಬಂಧಿಸಿ ಈಗ ತಮ್ಮ ಬೆನ್ನನ್ನು ತಟ್ಟಿಕೊಳ್ಳಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರುವಿಧಾನಸಭೆಯಲ್ಲಿ ಕರ್ನಾಟಕದ ಎದುರುಗೆ ಸುಳ್ಳು ಹೇಳಿದವರು ಮಂತ್ರಿಯಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ ನಾನು ಅನೇಕ ಬಾರಿ ಮಂತ್ರಿ ಪದವಿಯಿಂದ ವಚನ ಮಾಡಿ ಎಂದು ಹೇಳಿದೆ ಆದರೆ ಇಂತಹ ಅನೇಕ ಬೇಜಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾರೆ.
ರಾಜ್ಯದಲ್ಲಿ ಇಂತಹ ಅನೇಕ ಘಟನೆಗಳು ನಡೆದಿದೆ ಉದಾಹರಣೆಗೆ, ಶಿವಮೊಗ್ಗದಲ್ಲಿ ನಡೆದ ಗಲಭೆ ಮೈಸೂರಿನಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣ, ಇಂತಹ ಹಲವಾರು ಸನ್ನಿವೇಶಗಳು ಸಾಕ್ಷಿಯಾಗಿದೆ ಮುಖ್ಯಮಂತ್ರಿಗಳು ಇಂತಹ ಬೇಜಾಬ್ದಾರಿ ಸಚಿವರನ್ನ ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡಿದ್ದಾರೆ. ಕೂಡಲೇ ಅವರನ್ನು ಮಂತ್ರಿ ಗಿರಿಗಿಂತ ವಚನ ಮಾಡಬೇಕು. ಸರ್ಕಾರಕ್ಕೆ ಒಟ್ಟಾರೆ ಪ್ರಕರಣವನ್ನು ಮುಚ್ಚಿ ಹಾಕಬೇಕು ಎಂಬುದೇ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಅನೇಕ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಸಿಐಡಿ ತನಿಖೆಗೆ ಒತ್ತಾಯಿಸಿದೆ ಆದರೆ ಇದರಿಂದ ನ್ಯಾಯ ಸಿಕ್ಕಿಲ್ಲ. ದೊಡ್ಡ ದೊಡ್ಡ ಕುಳಗಳೇ ಅಡಗಿರುವಾಗ, ವಿಚಾರಣೆ ಮಾಡಿ ಬಂಧಿಸುವುದು ಕಷ್ಟ ಸಾಧ್ಯ ಎಂದು ನ್ಯಾಯಾಂಗ ತನಿಖೆ ಮಾಡಬೇಕು ಎಂದು ಹಲವು ಬಾರಿ ಒತ್ತಾಯ ಮಾಡಿದೆ.
ಅಶ್ವಥ್ ನಾರಾಯಣ್ ಕ್ರಮ ತಗೊಂಡಿದ್ದರ?
ಅಶ್ವಥ್ ನಾರಾಯಣ್ ಅವರ ಮೇಲು ಪಿಎಸ್ಐ ಹಗರಣದ ಆರೋಪವಿದೆ ಆದರೆ ಈಗ ಅಶ್ವಥ್ ನಾರಾಯಣ್ ಅವರನ್ನು ಬಿಟ್ಟು ಅವರ ಸಂಬಂಧಿಕರು ಬಂಧನ ವಾಗಿದ್ದಾರೆ ಆದರೆ ಅಶ್ವಥ್ ನಾರಾಯಣ್ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರ?ಒಬ್ಬ ಅಭ್ಯರ್ಥಿಗೆ ಕನಿಷ್ಠ 30 ಲಕ್ಷದಿಂದ ಒಂದು ಕೋಟಿಯವರೆಗೂ ವಸೂಲಿ ಮಾಡಿದ್ದಾರೆ. ಹೀಗೆ 300 ಜನರ ಓ ಎಂ ಆರ್ ಶೀಟ್ ತಿದ್ದಲಾಗಿದೆ. ಯಾರ ಹಣ ಯಾರ ಜೆಪಿಗೆ ಹೋಗಿದೆ ಯಾವ ಮಂತ್ರಿಗೆ ಹೋಗಿದೆ ಮುಖ್ಯಮಂತ್ರಿ ಅವರಿಗೂ ಹೋಗಿದೆಯಾ? ಎಂಬುದು ಗೊತ್ತಾಗಬೇಕು ಅಲ್ವಾ ಇವರನ್ನೆಲ್ಲಾ ರಕ್ಷಣೆ ಮಾಡುತ್ತಿರುವವರು ಈ ರಾಜ್ಯದ ಮುಖ್ಯಮಂತ್ರಿಗಳೇ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ.
ಇನ್ನು ಮಂಜುನಾಥ್ ಅವರ ಪ್ರಕರಣದಲ್ಲಿ ಡಿಸಿ ಜೈಲಿಗೆ ಹೋಗಿದ್ದಾರೆ. ಇನ್ನು ಆ ಪ್ರಕರಣದಲ್ಲಿ ನ್ಯಾಯಾಧೀಶರನ್ನು ಹೆದರಿಸುವ ಪ್ರಯತ್ನವಾಗಿದೆ ಹಾಗಾದರೆ ನ್ಯಾಯ ನೀಡುವ ನ್ಯಾಯಾಧೀಶರಿಗೆ ರಕ್ಷಣೆ ಇಲ್ಲವಾಗಿದೆ ಸರ್ಕಾರ ಎಷ್ಟೊಂದು ಭ್ರಷ್ಟಾಚಾರದಿಂದ ಕೂಡಿದೆ ಎಂಬುದಕ್ಕೆ ಇದೇ ಸಾಕ್ಷಿ. ಸರ್ಕಾರ ಭ್ರಷ್ಟರಿಂದ ಹಣ ಪಡೆದು ಅವರ ರಕ್ಷಣೆಗೆ ನಿಂತಿದೆ. ಒಂದು ವೇಳೆ ನ್ಯಾಯಾಧೀಶರು ಹೆದರಿದ್ದರೆ ಪ್ರಕರಣದಲ್ಲಿ ನ್ಯಾಯ ಸಿಗುತ್ತಿರಲಿಲ್ಲ ಎಂದು ಕಲೆಕ್ಷನ್ ಬ್ಯೂರೋ ಜಡ್ಜ್ ಹೇಳಿದ್ದಾರೆ.
ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಈಗ ಹಗರಣ ನಡೆದಿದೆ ಮುಖ್ಯಮಂತ್ರಿಗಳ ಜವಾಬ್ದಾರಿಯನ್ನು ನಮ್ಮ ಸರ್ಕಾರದಲ್ಲಿ ಆಭರಣ ನಡೆದಿದ್ದರೆ ಆಗ ತನಿಖೆಗೆ ಒತ್ತಾಯ ಮಾಡಬೇಕಿತ್ತು ಆಗ ಸುಮ್ಮನೆ ನಡೆಯುತ್ತಿದೆ ಎಂದು ಹೇಳಿ ತಪ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಮುಂದುವರಿಯ ಬೇಕೆ ಎಂದು ಪ್ರಶ್ನಿಸಿದ್ದಾರೆ.