ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಸ್ನೇಹಿತರ (Friends) ಭವಿಷ್ಯದ ಹಿತವನ್ನೂ ವಿದೇಶಗಳಲ್ಲೂ ಭದ್ರಪಡಿಸಿದ್ದಾರೆ. ಆದರೆ, ಉದ್ಯೋಗವಿಲ್ಲದೇ (JobS) ಯುವಜನರು ಮಾತ್ರ ದೇಶ ತೊರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ. ಕೇಂದ್ರೀಯ ಅರೆಸೇನಾ ಪಡೆಯ ಪೊಲೀಸ್ (Police) ಸಿಬ್ಬಂದಿ ನೇಮಕಾತಿಗೆ ಪರೀಕ್ಷೆ ಬರೆದ ಯುವಕ– ಯುವತಿಯರು ಇನ್ನೂ ನೇಮಕಾತಿ ಆದೇಶ ಪತ್ರ ಸಿಗದೇ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ (Video) ತುಣುಕನ್ನು ರಾಹುಲ್ ಗಾಂಧಿ (Rahul Gandhi) ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಯುವಜನರ ಬಗ್ಗೆ ಯಾಕಿಷ್ಟು ತಾರತಮ್ಯ ಎಂದು ಪ್ರಶ್ನೆ (Rahul Gandhi question) ಮಾಡಿದ್ದಾರೆ.
#ModiMustAnswer ಟ್ರೆಂಡಿಂಗ್

ಇತ್ತೀಚಿಗೆ ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಿತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿಶ್ ಶಾ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಪ್ರಧಾನಿ ಮೋದಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ಈ ಸವಾಲುಗಳು ಟ್ವಿಟ್ಟರ್‌ನಲ್ಲೂ ಟ್ರೆಂಡ್ ಆಗುತ್ತಿದೆ. ನೆಟ್ಟಿಗರು #ModiMustAnswer ಎಂದು ಒತ್ತಾಯಿಸಿದ್ದಾರೆ. ವಿದೇಶಗಳಿಂದ ತಂದ ಕಪ್ಪು ಹಣ ಎಲ್ಲಿದೆ? ಎಂದು ಕೆಸಿಆರ್ ಪ್ರಶ್ನಿಸಿದ್ದಾರೆ.
ಕನ್ನಯ್ಯನ ಹತ್ಯೆ ಬಿಜೆಪಿಗೆ ಲಾಭ

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಪ್ತಿ (Ex CM Mehbooba Mufti) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಶ್ರೀನಗರದಲ್ಲಿ ಮಾತನಾಡಿದ ಮೆಹಬೂಬಾ, ಕನ್ಹಯ್ಯಲಾಲ್ ಹತ್ಯೆಯ ನಂತರ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂರ ನಡುವೆ ಅಪನಂಬಿಕೆ ಮತ್ತು ದ್ವೇಷದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಬಿಜೆಪಿಗೆ ಲಾಭವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಫುಲ್ವಾಮಾ ದಾಳಿಗೆ ಸಂಬಂಧ ಅರೆಸ್ಟ್ ಆಗಿದ್ದ ಡಿಎಸ್ ಪಿ ದೇವೇಂದ್ರ ಸಿಂಗ್‌ಗೆ ಜಾಮೀನು ಸಿಕ್ಕಿದ್ದಕ್ಕೂ, ಮುಪ್ತಿ ಆಕ್ರೋಶ ವ್ಯಕ್ತಡಿಸಿದ್ದಾರೆ.
ಅಮರನಾಥ ಶಿವಲಿಂಗ ಗುರ್ತಿಸಿದ್ದು ಮುಸಲ್ಮಾನ

ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಮುಸ್ಲಿಮರೊಬ್ಬರು ಅಮರನಾಥ ಗುಹೆಯಲ್ಲಿನ ಶಿವಲಿಂಗವನ್ನು ಮೊದಲಿಗೆ ಗುರುತಿಸಿದರು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮಾತನಾಡಿದ ಅವರು, ಶಿವಲಿಂಗವನ್ನು ಗುರುತಿಸಿದ ನಂತರ ಮುಸಲ್ಮಾನ ವ್ಯಕ್ತಿ ಅದರ ಮಾಹಿತಿಯನ್ನು ಕಾಶ್ಮೀರದ ಪಂಡಿತರಿಗೆ ನೀಡಿದನು. ಯಾವುದೇ ಧರ್ಮದ ವಿರುದ್ಧ ಮುಸ್ಲಿಮರು ಎಂದಿಗೂ ಬೆರಳು ತೋರಿಸಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಆಗಸ್ಟ್ 6 ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾಗಲಿದೆ. ಜುಲೈ 19ರ ತನಕ ನಾಮಪತ್ರ ಸಲ್ಲಿಕೆ ಅವಕಾಶವಿದೆ. ಜುಲೈ 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜುಲೈ 22ರ ವರೆಗೆ ನಾಮಪತ್ರ ಹಿಂಪಡೆಯಬಹುದು. ಅಭ್ಯರ್ಥಿಗಳು 4 ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಬಹುದು. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಮಾತ್ರ ಮತ ಚಲಾಯಿಸಲಿದ್ದಾರೆ. ಎನ್ ಡಿಎ ಅಭ್ಯರ್ಥಿ ಸುಲಭವಾಗಿ ಈ ಚುನಾವಣೆಗೆ ಗೆಲ್ಲಬಹುದು ಎನ್ನುವ ಲೆಕ್ಕಾಚಾರವಿದೆ.
ಸಿಧು ಮೂಸೆವಾಲಾ ಹತ್ಯೆ ಆರೋಪಿ ಬಂಧನ

ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೂಟರ್ ಅಂಕಿತ್ ಸಿರ್ಸಾ ಮತ್ತು ಆತನ ಸಹಚರನನ್ನು ದೆಹಲಿ ಪೊಲೀಸರ ವಿಶೇಷ ಘಟಕವು ಬಂಧಿಸಿದೆ. ಈತ ರಾಜಸ್ಥಾನದಲ್ಲಿ ನಡೆದ ಎರಡು ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮತ್ತೊಬ್ಬ ಬಂಧಿತ ಆರೋಪಿ ಸಚಿನ್ ಭಿವಾನಿ, ಮೂಸೆವಾಲಾ ಪ್ರಕರಣದಲ್ಲಿ ನಾಲ್ವರು ಶೂಟರ್‌ಗಳಿಗೆ ಆಶ್ರಯ ನೀಡಿದ್ದ ಎನ್ನಲಾಗಿದೆ. ಇನ್ನು, ಅಂಕಿತ್ ಸಿರ್ಸಾ ಮೇಲೆ ಸಿಧು ಅವರನ್ನು ಸಮೀಪದಿಂದ ಶೂಟ್ ಮಾಡಿ, ಹತ್ಯೆಗೈದಿರುವ ಆರೋಪವಿದೆ.
ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ

ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರಿಗೆ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭೂ ವ್ಯಾಜ್ಯ ಬಗೆಹರಿಸಲು ಬೇಗೂರಿನ ಅಜಂ ಪಾಷಾ ಎಂಬುವವರಿಂದ 5 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದಲ್ಲಿ ಎಸಿಬಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರನ್ನು ಅರೆಸ್ಟ್ ಮಾಡಿದ್ದರು. ಈ ಸಂಬಂಧ ಬೆಂಗಳೂರಿನ ಸಿಸಿಹೆಚ್ 24ರ ಎಸಿಬಿ ವಿಶೇಷ ನ್ಯಾಯಾಲಯವು, ಜುಲೈ 16ರವರೆಗೆ ಅಂದರೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸೇವೆಯಿಂದ ಅಮಾನತಾಗಿರುವ ಆರೋಪಿಯನ್ನು ಪೊಲೀಸರು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ.
ಸಿಐಡಿ ಕಸ್ಟಡಿಗೆ ಎಡಿಜಿಪಿ ಅಮೃತ್ ಪೌಲ್

ಐಪಿಎಸ್ ಅಧಿಕಾರಿ, ಎಡಿಜಿಪಿ ಅಮೃತ್ ಪೌಲ್ ಅವರನ್ನು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಮೃತ್ ಪೌಲ್ ವಿರುದ್ಧ ಸಾಕ್ಷ್ಯಾಧಾರ ದೊರೆತ ಹಿನ್ನಲೆ, ಸೋಮವಾರ ಮಧ್ಯಾಹ್ನ ಬಂಧಿಸಲಾಗಿತ್ತು. ನಂತರ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಹೆಚ್ಚಿನ ತನಿಖೆಗಾಗಿ ಅಮೃತ್ ಪೌಲ್ ಅವರನ್ನು ಸಿಐಡಿ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.
ನಟಿ ರಮ್ಯಾರ ಕ್ಯೂಟ್ ಫೋಟೋಗಳು ವೈರಲ್
ಒಂದಷ್ಟು ಸಮಯ ನಟಿ ರಮ್ಯಾ ರಾಜಕೀಯ, ಸಿನಿಮಾ ಹಾಗೂ ಸೋಶಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡರು. ಅವರು ಯಾರ ಕೈಗೂ ಸಿಗಲೇ ಇಲ್ಲ. ಈಗ ಸೋಶಿಯಲ್ ಮೀಡಿಯಾಗೆ ರಮ್ಯಾ ಕಂಬ್ಯಾಕ್ ಮಾಡಿದ್ದಾರೆ. ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ರಮ್ಯಾ ಶೀಘ್ರವೇ ಸಿನಿಮಾ ರಂಗಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರೇ ಸೂಚನೆ ನೀಡಿದ್ದಾರೆ. ಸದ್ಯ ರಮ್ಯಾ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಆ ಫೋಟೋ ಫುಲ್ ವೈರಲ್ ಆಗುತ್ತಿವೆ.

ಇಂದು ಪಿ.ವಿ ಸಿಂಧುಗೆ ಜನ್ಮದಿನ

ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧುಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 1995ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ್ದ ಪಿ.ವಿ ಸಿಂಧು, 26ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇವರು 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಏಕೈಕ ಭಾರತೀಯೆ ಆಗಿದ್ದಾರೆ. ಎರಡು ಬೆಳ್ಳಿ, 2 ಕಂಚನ್ನೂ ಗೆದ್ದಿದ್ದಾರೆ. 2011ರ ಕಾಮನ್ ವೆಲ್ತ್ ಯೂತ್ ಗೇಮ್ಸ್, 2012ರ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಗೆದ್ದಿದ್ದಾರೆ. 2016ರ ಸೌತ್ ಏಷ್ಯನ್ ಗೇಮ್ಸ್, 2018ರ ಕಾಮನ್ ವೆಲ್ತ್, 2016ರ ರಿಯೋ ಒಲಿಂಪಿಕ್ ನಲ್ಲಿ ಬೆಳ್ಳಿ ಮತ್ತು 2020ರ ಒಲಿಂಪಿಕ್ ನಲ್ಲಿ ಕಂಚು ಗೆದ್ದಿದ್ದಾರೆ.