Chandrashekhar Guruji Murder: (ಜು.5):ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಚಾಕುಯಿಂದ ಹಿಡಿದು ಚಂದ್ರಶೇಖರ್ ಗುರೂಜಿಯನ್ನು ಹತ್ಯೆ ಮಾಡಲಾಗಿದ್ದು ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾಲಿಗೆ ಬೀಳುವ ನೆಪದಲ್ಲಿ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಒಬ್ಬ ಕಾಲಿಗೆ ಬಿಟ್ಟರೆ ಮತ್ತೊಬ್ಬ ಚಾಕುನಿಂದ ಹಿಡಿದಿದ್ದಾನೆ ಸತತವಾಗಿ 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಚಂದ್ರಶೇಖರ್ ಅವರನ್ನು ಭೇಟಿಯಾಗಬೇಕು ಎಂದು ಕೋರಿದ್ದು, ಸ್ವಾಮೀಜಿಯವರ ಹೋಟಲ್ಗೆ ಕರೆಸಿಕೊಂಡಿದ್ದರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.ಹತ್ಯೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು ಆರೋಪಿಗಳು ಹತ್ತಿಯ ನಂತರ ಪರಾರಿಯಾಗಿದ್ದಾರೆ.ಸರಳ ವಾಸ್ತು ಬಗ್ಗೆ ಮಾಹಿತಿ ಪಡೆದುಕೊಳ್ಳಲು ಹಲವಾರು ಅವರ ಭೇಟಿಗಾಗಿ ಬಂದಿದ್ದರು. ಗ್ರಾಹಕರ ಭೇಟಿಗಾಗಿ ಗುರೂಜಿಯವರು ರೂಮ್ ಕೂಡ ಬುಕ್ ಮಾಡಿದ್ದರು. ನಗರದ ಉಣಕಲ್ ಕೆರೆ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಇಂದು ಮಧ್ಯಾಹ್ನ 12.23ಕ್ಕೆ ಗುರುಜಿಯ ಹತ್ಯೆಯಾಗಿದೆ.ಹತ್ಯೆಯಿಂದ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗುರೂಜಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದ ಅವರು ಸರಳ ವಾಸ್ತು ಸಲಹೆ ಬಗ್ಗೆ ಹಲವು ಪುಸ್ತಕ ಬರೆದಿದ್ದಾರೆ. ಹೋಟೆಲ್ ನಲ್ಲೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಆವರ ಮೃತ ದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈವರೆಗೂ 2 ಸಾವಿರಕ್ಕೂ ಅಧಿಕ ಸೆಮಿನಾರ್‌ಗಳಲ್ಲಿ ಮಾತನಾಡಿರುವ ಚಂದ್ರಶೇಖರ್, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಜೊತೆಗೆ ಕಾಸ್ಮಿಕ್ ಆರ್ಕಿಟೆಕ್ಚರ್ ನಲ್ಲಿ ಡಾಕ್ಟರೇಟ್ ಪದವಿಯನ್ನೂ ಅವರು ಸಂಪಾದಿಸಿದ್ದರು. ಸ್ಥಳಕ್ಕೆ ಹುಬ್ಬಳ್ಳಿ ಪೊಲೀಸ್ ಆಯುಕ್ತ ಲಾಬೂರಾಮ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.