Chandrashekhar Guruji:(ಜು.5): ಹುಬ್ಬಳ್ಳಿ ನಗರದಲ್ಲಿ ನಡೆದ (Sarala Vastu Expert) ಸರಳ ವಾಸ್ತು ತಜ್ಞ (Chandrashekhar Guruji) ಚಂದ್ರಶೇಖರ್ ಗುರೂಜಿ ಗುರೂಜಿಯವರ ಬರ್ಬರ ಹತ್ಯೆ (Murder) ಪ್ರಕರಣದ ಹಿನ್ನೆಲೆ (PA Mahantesh Shirol) ಆಪ್ತ ಮಹಂತೇಶ್ ಶಿರೋಳ್ ಪತ್ನಿ ಕೈವಾಡವಿದೆ ಎಂದು ಹೇಳಲಾಗುತ್ತದೆ.ಮಹಾಂತೇಶ ಶಿರೋಳ್ ಪತ್ನಿ(Vanajakshi) ವನಜಾಕ್ಷಿಯನ್ನು ಗೋಕುಲ ರೋಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇಂದು ಮಧ್ಯಾಹ್ನ ಹುಬ್ಬಳ್ಳಿಯ (President Hotel) ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಗುರೂಜಿಯನ್ನು ಹತ್ಯೆ ಮಾಡಿದ ಇಬ್ಬರು ಆರೋಪಿಗಳಾದ (Accused Arrested) ಮಹಾಂತೇಶ್ ಶಿರೋಳ್ ಹಾಗೂ ಮಂಜುನಾಥ್ ದುಮ್ಮವಾಡ ರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ನಾಲ್ಕು ಗಂಟೆಗಳಲ್ಲಿ ಹುಬ್ಬಳ್ಳಿಯ (Vidyanagara Police ) ವಿದ್ಯಾನಗರ ಪೊಲೀಸರು ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಅರೆಸ್ಟ್ ಮಾಡಿದ್ದಾರೆ ಹುಬ್ಬಳ್ಳಿ ರಾಮದುರ್ಗ (Ramadurga) ಪೊಲೀಸರಿಂದ ಜಂಟಿ ಕಾರ್ಯಚರಣೆ ನಡೆಸಿ ಮಹಂತೇಶ ಶಿರೋಳ್ ಹಾಗೂ ಮಂಜುನಾಥ್ ದುಮ್ಮವಾಡ ಅವರನ್ನು ಬಂಧಿಸಿದ್ದಾರೆ
ಹತ್ಯೆಗೆ ಕಾರಣವೇನು?
ಚಂದ್ರಶೇಖರ್ ಗುರೂಜಿ ಅವರ ಬರ್ಬರ ಹತ್ಯೆ ಹಿನ್ನೆಲೆ ಬೇನಾಮಿ ಆಸ್ತಿ (Property Issue) ವಿಚಾರ ಎಂಬ ಅನುಮಾನ ವ್ಯಕ್ತವಾಗಿದೆ. ಆರೋಪಿ ವನಜಾಕ್ಷಿ ಸರಳ ವಾಸ್ತು ಸಂಸ್ಥೆಯಲ್ಲಿ (Sarala Vastu Company) ಮಾಜಿ ಉದ್ಯೋಗಿಯಾಗಿದ್ದರು. ಕಳೆದ 2019ರ ವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು.
ಈ ವೇಳೆ ಗುರುಜಿ ಅವರು ವರುಣ ವನಜಾಕ್ಷಿ ಹೆಸರಿಗೆ ಹಲವು ಆಸ್ತಿಗಳನ್ನು (Property Registration) ನೋಂದಣಿ ಮಾಡಿದರು. ಈ ಬಳಿಕ ಆಸ್ತಿಯನ್ನು ಮರು ಕೇಳಿದಾಗ ಗಲಾಟೆ ನಡೆದಿತ್ತು. ಅಲ್ಲದೆ ಹಣಕಾಸಿನ ವಿಚಾರಕ್ಕೂ ಆಗಾಗ ಗಲಾಟೆ ಆಗುತ್ತಿತ್ತು. ಇದೇ (Chandrashekhar Guruji)ವಿಚಾರಕ್ಕೆ ಚಂದ್ರಶೇಖರ್ ಗುರೂಜಿಯವರನ್ನು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಪ್ರಕರಣ ಸಂಬಂಧ ಮಾತನಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಅವರು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗಿದೆ ಮಹಾಂತೇಶ್ ಹಸಿರು ಹಾಗೂ ಆತನ ಪತ್ನಿ ವನಜಾಕ್ಷಿ ವಿರುದ್ಧ ಗುರೂಜಿ ಕುಟುಂಬಸ್ಥರು (Chandrashekhar Guruji)ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಚಂದ್ರಶೇಖರ್ ಗುರೂಜಿಯವರೊಟ್ಟಿಗೆ 2016 ರ ವರೆಗೂ ಮಹಾಂತೇಶ ಶಿರೂರು ಕೆಲಸ ಮಾಡುತ್ತಿದ್ದನು 2019 ರಲ್ಲಿ ಆರೋಪಿ ಮಹಂತೇಶ್ ಶಿರೋಳ್ಗೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವನಜಾಕ್ಷಿಯ ಜೊತೆ (Chandrashekhar Guruji)ಚಂದ್ರಶೇಖರ್ ಗುರೂಜಿ ಅವರು ಮದುವೆ ಮಾಡಿಸಿದರು ಎಂದು ತಿಳಿದುಬಂದಿದೆ.
ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಮುಡಿದಾಗ ಕೊಲೆ ನಡೆದಿದೆ ಎನ್ನುವುದಕ್ಕೆ ಮೇಲ್ನೋಟಕ್ಕೆ ಕಂಡು ಬಂದಿದೆ. ಗುರೂಜಿ ಹಾಗೂ ವನಜಾಕ್ಷಿ ಒಂದೇ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. 008 ಫ್ಲ್ಯಾಟ್ ನಲ್ಲಿ ಗುರೂಜಿ ಇದ್ದರೆ ಅದೇ ಅಪಾರ್ಟ್ಮೆಂಟ್ನ 308ರಲ್ಲಿ ಮಹಾಂತೇಶ ಹಾಗೂ ವನಜಾಕ್ಷಿ ವಾಸವಾಗಿದ್ದರು.