ಬೆಂಗಳೂರು: (ಜು.5):ACB Raid: ಆದಾಯ ಮೀರಿ ಆಸ್ತಿ ಗಳಿಕೆ (Zameer Ahmed Khan) ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ (ACB Raid) ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಿರುವ ಬಂಗಲೆ ಮೇಲೆ ಸೇರಿದಂತೆ ಜಮೀರ್‌ಗೆ ಸಂಬಂಧಿಸಿದ 5 ಕಡೆ ದಾಳಿ ನಡೆದಿದೆ.. ಅಲ್ಲದೇ ಶಾಸಕ ಜಮೀರ್ ಅಹಮದ್‌ಗೆ(Zameer Ahmed Khan) ಸೇರಿದ ಐದು ಶಾಲೆಗಳಲ್ಲಿ ದಾಳಿ ಪರಿಶೀಲನೆ ನಡೆದಿದ್ದು, ಇಡಿ ನೀಡಿದ ವರದಿ ಆಧರಿಸಿ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಡಿ ಅಧಿಕಾರಿಗಳ ದಾಳಿ ವೇಳೆ ಸರ್ಕಾರಿ ಯೋಜನೆಯೊಂದರಲ್ಲಿ ಬಾರಿ ಅವ್ಯವಹಾರ ಆಗಿರುವ ಸಂಬಂಧ ದಾಖಲೆ ಲಭ್ಯವಾಗಿತ್ತು. 6 ತಿಂಗಳ ಹಿಂದೆ ಇಡಿ ಈ ಬಗ್ಗೆ ವರದಿ ನೀಡಿತ್ತು. 2 ತಿಂಗಳ ಎರಡನೇ ಬಾರಿಗೆ ವರದಿ ನೀಡಿತ್ತು. ಈ ದಾಖಲೆ ಅಧಾರದ ಮೇಲೆ (Corruption)ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಎಸಿಬಿ ಪ್ರಕರಣ ದಾಖಲಿಸಿತ್ತು.
ಕಂಟೋನ್ಮೆಂಟ್ ರೈಲ್ವೇ ವಲಯದಲ್ಲಿರುವ ನಿವಾಸ, (Silver oak) ಸಿಲ್ವರ್ ಓಕ್ ಅಪಾರ್ಟ್ಮೆಂಟ್‌ನಲ್ಲಿರುವ ಫ್ಲ್ಯಾಟ್, ಸದಾಶಿವನಗರದಲ್ಲಿರುವ ಅತಿಥಿ ಗೃಹ, ಬನಶಂಕರಿಯಲ್ಲಿರುವ ಜಿ ಕೆ ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ(Zameer Ahmed Khan) ದಾಳಿ ನಡೆದಿದ್ದು ಎಸಿಬಿ ತಂಡ (ACB Raid) ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಆರೋಪ ಏನು?
ವೆಲ್ಸ್ ಕಂಪನಿಯ ಮಾಲೀಕತ್ವ ಹೊಂದಿರುವ ಜಮೀರ್ ವಿದೇಶದಲ್ಲೂ ಆಸ್ತಿ, ದುಬೈನಲ್ಲಿ ಆಸ್ತಿ, ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಜೊತೆ ಸಂಬಂಧ ಹೊಂದಿದ್ದು ಮನ್ಸೂರ್ ಖಾನ್ ಕಂಪನಿಯ ಮೂಲಕ ಹಣಕಾಸಿನ (ACB Raid) ವ್ಯವಹಾರ ನಡೆಸಿದ್ದಾರೆ ಎಂಬ ಆರೋಪವಿದೆ.