ಬೆಂಗಳೂರು: (ಜು.5):ACB Raid: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ (MLA Zameer Ahmed) ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಮನೆಯ ಮೇಲೆ ಹಾಗೂ ಅವರಿಗೆ ಸೇರಿದ ಐದು ಕಡೆಗಳಲ್ಲಿ (ACB Raid) ಒಟ್ಟು 44 ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.ಎಸಿಬಿ ದಾಳಿಯ ಹಿಂದೆ ಬಿಜೆಪಿಯ ಕುತಂತ್ರವಿದೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರದ ಫ್ಲ್ಯಾಟ್ ಮೇಲೆ ಎಸಿಬಿ ದಾಳಿ (ACB Raid) ನಡೆಸಿದ್ದು ಬೆಳಗ್ಗೆಯಿಂದಲೇ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಡಿ ವೈ ಎಸ್ ಪಿ ವಿಜಯ ಹಡಗಲಿ ಮತ್ತು ತಂಡದಿಂದ ದಾಳಿ ನಡೆಸಿದ್ದಾರೆ.ನಗರದ (Ranka Enclave) ಸದಾಶಿವನಗರದ ರಂಕ ಎನ್ಕ್ಲೇವ್ ನಲ್ಲಿರುವ ಫ್ಲಾಟ್ ನಲ್ಲಿ ದಾಳಿ ಮುಂದುವರೆದಿದ್ದು ದಾಖಲೆಗಳನ್ನು ಹಿಡಿಹಿಡಿಯಾಗಿ ಪರಿಶೀಲನೆ ನಡೆಸುತ್ತಿದ್ದಾರೆ.


ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ದಾಳಿ (ACB Raid) ನಡೆಸುತ್ತಿರುವುದು ಎಂದು ಹೇಳಲಾಗಿದ್ದು ಎಸಿಬಿ ರಚನೆ ಬಳಿಕ ಸಣ್ಣಪುಟ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿದ್ದರು ಆದರೆ ಇದೇ ಮೊದಲ ಬಾರಿಗೆ (MLA House) ಎಂಎಲ್ಎ ಮನೆ ಮೇಲೆ ರೇಡ್ ಆಗಿದೆ.

ನಿನ್ನೆ ಭ್ರಷ್ಟಾಚಾರದ (Corruption) ಆರೋಪದ ಹಿನ್ನೆಲೆ ಹಿರಿಯ ಐಎಎಸ್ ಅಧಿಕಾರಿಗಳನ್ನೂ (CID) ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಎಂಎಲ್ಎ ಜಮೀರ್ ಅಹಮದ್ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭವಿಷ್ಯದಲ್ಲಿ ಐಎಎಸ್ ಐಪಿಎಸ್ ಎಂಎಲ್ಎ ಗಳ ಮೇಲೂ ದಾಳಿ ನಡೆಸಬಹುದು ಎಂದು ಊಹಿಸಲಾಗಿದೆ.

ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದ ಫ್ಲಾಟ್ ಅನ್ನು ಕೆಲ ಕಾರಣಗಳಿಂದ (Zameer Khan) ಶಾಸಕ ಜಮೀರ್ ಅವ್ರು ಹಿಂಪಡೆದಿದ್ದರು. ಫ್ಲ್ಯಾಟ್ ಅನ್ನು ಜಮೀರ್ ಪುತ್ರ ನಟ ಝೈದ್ ಖಾನ್ (Zaid Khan) ಅವರು ಬಳಸುತ್ತಿದ್ದರು ಎನ್ನಲಾಗಿದೆ.ಝಮೀರ್ ಅವರ ಮನೆಯ ಒಳಗಡೆ ಲಕ್ಷಾಂತರ ರೂಪಾಯಿಯಲ್ಲಿ ಇಂಟೀರಿಯರ್ ಡಿಸೈನ್ ಮಾಡಲಾಗಿದ್ದು (Home Intrior) ಮನೆಯ ಬಾತ್ರೂಮ್ ಕಬೋರ್ಡ್ ಮೇಲೆ ಗೋಲ್ಡ್ ಕಲರ್ ಪೈಂಟ್ ಹೊಂದಿದೆ. ಇನ್ನು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಗ್ರಹ ಉಪಯೋಗಿ ವಸ್ತುಗಳು ಮನೆಯಲ್ಲಿವೆ.
ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಹುಡುಕಾಟ ನಡೆಸಿದ್ದಾರೆ. ಜಮೀರ್ ಅವರ ಮನೆ ಮೇಲೆ (Raid) ದಾಳಿ ಹಿನ್ನಲೆ ಜಮೀರ್ ಬೆಂಬಲಿಗರು ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.ಈ ವೇಳೆ ಜಮೀರ ಅವರ ಬೆಂಬಲಿಗರು ಪ್ರತಿಕ್ರಿಯೆ ನೀಡಿದ್ದು, ಕಳೆದ ವರ್ಷವೂ ದಾಳಿ ಮಾಡಿದ್ರು ನಾಚಿಕೆ ಆಗ್ಬೇಕು ಮುಖ್ಯಮಂತ್ರಿಗಳಿಗೆ. ಬಿಜೆಪಿ ಸರ್ಕಾರದಲ್ಲಿ (BJP Govt) ಯಾರು ಲೂಟಿ ಮಾಡಿಲ್ವಾ? ಶಾಸಕರಾಗಿ ಮನೆ ಕಟ್ಟೋದೆ ತಪ್ಪಾ ಎಂದು ಬೆಂಬಲಿಗರು ಹೇಳಿಕೆಯನ್ನು ನೀಡಿದ್ದಾರೆ.