ನವದೆಹಲಿ: (ಜು.4): Kaali Poster: ತಮಿಳುನಾಡಿನ ಡಾಕ್ಯುಮೆಂಟರಿ ನಿರ್ದೇಶಕಿ ಒಬ್ಬಳು (Kaali Poster) ಕಾಳಿ ಮಾತೆ ಕುರಿತ ಅವಮಾನಕಾರಿ ಪೋಸ್ಟ್ ಬಿಡುಗಡೆ ಮಾಡಿದ್ದಾರೆ.
ಪೋಸ್ಟರ್ ನಲ್ಲಿ ಖಾಲಿ ಮಾತೆ ಸಿಗರೇಟ್ ಸೇದುತ್ತಿರುವ (Holding Cigaratte) ಫೋಟೋ ಇದೆ.ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ದೆಹಲಿಯಲ್ಲಿ ನಿರ್ದೇಶಕಿ ಲೀನಾ ಮಣಿ ಮೇಕಲೈ ವಿರುದ್ಧ ದೂರು ದಾಖಲಾಗಿದೆ.
ಲೀನಾ ಮೈಣಿಮೇಕಲೈ ನಿರ್ದೇಶನದ ಕಾಳಿ ಡಾಕ್ಯುಮೆಂಟರಿ(Documentary) ಸಿನಿಮಾ ಇದಾಗಿದ್ದು. ಕಾಳಿಮಾತೆ ಒಂದು ಕೈಯಲ್ಲಿ, ತ್ರಿಶೂಲ ಮತ್ತೊಂದು ಕೈಯಲ್ಲಿ LGBTQ ಧ್ವಜ ಹಿಡಿದಿರುವಂತೆ ಪೋಸ್ಟರ್ ರಿಲೀಸ್ ಮಾಡಿದ್ದಾರೆ. LGBTQ-ಲೆಸ್ಬಿಯನ್, ಗೇ, ಬೈಸೆಕ್ಚುವಲ್ ಟ್ರಾನ್ಸ್ ಜೆಂಡರ್, ಕ್ವೀರ್ ಸಮುದಾಯವರದ್ದು. (Viral) ವೈರಲ್ ಆಗಿರುವ ಪೋಸ್ಟರ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ (Social Media)ಅರೆಸ್ಟ್ ಲೀನಾ ಮಣಿಮೇಕಲೈ ಅನ್ನೋ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಪೋಸ್ಟರ್ (Hindu) ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಅಂತ ಆಕ್ರೋಶ ಹೊರಹಾಕುತ್ತಿದ್ದಾರೆ.

ಕಾಳಿ ಮಾತೆ ವಿವಾದಾತ್ಮಕ ಪೋಸ್ಟ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿ ಕಾಳಿ ಕೈಯ್ಯಲ್ಲಿ ಸಿಗರೇಟ್ ಇರೋ ಪೋಸ್ಟ್ ಹಾಕಿದ್ದು ತಪ್ಪು. ನಾವು ಸೈಲೆಂಟಾಗಿರೋದನ್ನೇ ದೌರ್ಬಲ್ಯ ಅಂದ್ಕೊಳ್ತಾರೆ, ಯಾವ ರೀತಿ ಹೋರಾಟ ಮಾಡ್ಬೇಕೋ ಹಾಗೆ ಮಾಡುತ್ತೇವೆಂದು ವಾಗ್ದಾಳಿ ನಡೆಸಿದ್ಧಾರೆ.
Video of Leena Manimekalai smoking while being dressed As goddess Kali
— GyanGanga (@sarinmall85) July 4, 2022
Insulting Hindu Gods for cheap publicity. Shameful.
Such filmmakers should be permanently banned from making movies.#ArrestLeenaManimekalai #ArrestTasleemRahmani#ArrestLeenaManimekali
भारतीय संस्कृति pic.twitter.com/rdYiE8cxou